ಕೋಟ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ಶ್ರೀ ಭಗವತೀ ಅಮ್ಮನವರ ದೇವಸ್ಥಾನ ಗುಂಡ್ಮಿ ಇಲ್ಲಿ ಶರನ್ನವರಾತ್ರಿ ಅಂಗವಾಗಿ ಕಳೆದ ಒಂಭತ್ತು ದಿನಗಳಿಂದ ನಡೆಯುತ್ತಿರುವ ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಾರಾಯಣವು ಸಂಪನ್ನ ಗೊಂಡಿತು. ಒಂಭತ್ತು ದಿನಗಳ ಕಾಲ ನಡೆದ ಪಾರಾಯಣದ ನೇತ್ರತ್ವವನ್ನು ಶ್ರೀ ಮಹಾಗಣಪತಿ ಭಜನಾ ಮಂಡಳಿ ಕಾಕ9ಡ ಇದರ ಮುಖ್ಯಸ್ಥೆ ಸುಕನ್ಯಾ ಸೋಮಯಾಜಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣವನ್ನು ನಡೆಸಿಕೊಟ್ಟ ಸಭಾದ ಮಹಿಳಾ ಸದಸ್ಯರನ್ನು ದೇಗುಲದ ವತಿಯಿಂದ ಗೌರವಿಸಲಾಯಿತು.
ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಯಂ.ಶಿವರಾಮ ಉಡುಪ, ಉಪಾಧ್ಯಕ್ಷರುಗಳಾದ ಸುಬ್ರಾಯ ಉರಾಳ, ಪಟ್ಟಾಭಿರಾಮ ಸೋಮಯಾಜಿ, ಸಮಿತಿ ಸದಸ್ಯರುಗಳಾದ ಕೃಷ್ಣ ಪ್ರಸಾದ ಹೆರ್ಲೆ ಹಾಗೂ ಭಗವತೀ ಅಮ್ಮನವರ ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾದ ಬಾಲಚಂದ್ರ ಮೈಯ್ಯ, ಶಿವಾನಂದ ಮಯ್ಯ , ಉದಯ ಕುಮಾರ್ ಮೈಯ್ಯ , ವೆಂಕಟೇಶ ಮೈಯ್ಯ, ಅಚ9ಕ ರಾಮದಾಸ ಅಡಿಗ , ಹಾಗೂ ಊರಿನ ಅನೇಕ ಹಿರಿಯರು ಭಕ್ತಾದಿಗಳು ಉಪಸ್ಥಿತರಿದ್ದರು. ಸಭಾದ ಕಾಯದರ್ಶಿ ಕೆ.ರಾಜಾರಾಮ ಐತಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ಶ್ರೀ ಭಗವತೀ ಅಮ್ಮನವರ ದೇವಸ್ಥಾನ ಗುಂಡ್ಮಿ ಇಲ್ಲಿ ಶರನ್ನವರಾತ್ರಿ ಅಂಗವಾಗಿ ಶ್ರೀ ಲಲಿತಾ ಸಹಸ್ರನಾಮ ಪಾರಾಯಣವು ಸಂಪನ್ನ ಗೊಂಡಿತು.