ಶ್ರೀಯುತ ಕೌಶಿಕ್ ಹೆಬ್ಬಾರ್ (ಖ್ಯಾತ ತಬಲಾ ವಾದಕರು) ಇವರನ್ನು ನೂರನೇ ಸಂಗೀತ ಕಾರ್ಯಕ್ರಮ ಪೂರೈಸಿದ ಸಂಧರ್ಭದಲ್ಲಿ ಗೌರವ ಪೂರ್ವಕವಾಗಿ ಭಜನಾ ಮಂಡಳಿಯ ಪರವಾಗಿ ಅಭಿನಂದಿಸಲಾಯಿತು.
ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಶ್ರೀಯುತರು ಚಿಕ್ಕ ವಯಸ್ಸಿನಿಂದಲೇ ಉಡುಪಿ ಜಿಲ್ಲೆ ಕಂಡ ಖ್ಯಾತ ತಬಲಾ ಮಾಂತ್ರಿಕ ವಿದ್ವಾನ್ ಮಾಧವಾಚಾರ್ಯರ ಬಳಿ ತರಬೇತಿಯನ್ನು ಪಡೆದಿರುತ್ತಾರೆ. ಈ ಸಂದರ್ಭದಲ್ಲಿ ಸಂಗೀತ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಹಾಗೂ ಶ್ರೀ ಪ್ರಸನ್ನ ಗಣಪತಿ ಭಜನಾ ಮಡಳಿಯ ಸದಸ್ಯರು ಉಪಸ್ಥಿತರಿದ್ದರು.