Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನ.4ರಂದು ಬ್ರಹ್ಮಾವರದಲ್ಲಿ ಮೊಗೆಬೆಟ್ಟು ಯಕ್ಷರಜತ ಸಂಭ್ರಮ

ಕೋಟ: ಯಕ್ಷಗುರು ಮೊಗೆಬೆಟ್ಟು ಪ್ರಸಾದ್ ಕುಮಾರ್ ಅಭಿಮಾನಿ ಬಳಗ ಮತ್ತು ಶಿಷ್ಯವೃಂದ, ಗೀತಾನಂದ ಫೌಂಡೇಶನ್ ಮಣೂರು, ಮಯ್ಯ ಯಕ್ಷಶ್ರೀ ಪ್ರತಿಷ್ಠಾನ ಅಣಲಾಡಿ ಮಠ ಆಶ್ರಯದಲ್ಲಿ ಮೊಗೆಬೆಟ್ಟು ಪ್ರಸಾದ್ ಕುಮಾರ್ ಅವರ ಯಕ್ಷ ಜೀವನದ ಬೆಳ್ಳಿಹಬ್ಬ ಸಂಭ್ರಮ,ಗುರುವಂದನೆ, ನ.4ರಂದು ಬ್ರಹ್ಮಾವರ ಶ್ಯಾಮಿಲಿ ಶನಾಯ ಸಭಾಂಗಣದಲ್ಲಿ ಜರಗಲಿದೆ ಎಂದು
ಕಾರ್ಯಕ್ರಮದ ಸಂಚಾಲಕ ರಾಘವೇಂದ್ರ ಕರ್ಕೇರ ಕೋಡಿ ಅವರು ಕೋಟದಲ್ಲಿ ಅ.31ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಪರಾಹ್ನ 2ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿರುವರು. ಅಪರಾಹ್ನ 2.30ಕ್ಕೆ ಬಡಗುತಿಟ್ಟಿನ ಪ್ರಸಿದ್ಧ
ಕಲಾವಿದರಿಂದ ಸುಧನ್ವ ಯಕ್ಷಗಾನ ನಡೆಯಲಿದೆ. ಸಂಜೆ 5.30ಕ್ಕೆ ಮೊಗೆಬೆಟ್ಟು ಅವರಿಗೆ ಸಮ್ಮಾನ ಜರಗಲಿದ್ದು, ನಾಡೋಜ ಡಾ. ಜಿ.ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಸಭಾಧ್ಯಕತ್ಷೆ ವಹಿಸಲಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ರಜತ ಗೌರವ ಪ್ರದಾನಿಸಲಿದ್ದಾರೆ. ಉದ್ಯಮಿ ಕೃಷ್ಣಮೂರ್ತಿ ಮಂಜ ಹಾಗೂ ಋಷಿಕುಮಾರ್ ಮಯ್ಯ ಅವರು ಆಶೀರ್ವಚನ ನೀಡಲಿದ್ದು, ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಅಭಿನಂದನಾ ಭಾಷಣಗೈಯಲಿದ್ದಾರೆ. ಪತ್ರಕರ್ತ ಎಸ್.ಸತೀಶ್ ಕುಮಾರ್ ಕೋಟೇಶ್ವರ ಗುರುಗೌರವದ ಸಹಯೋಗ ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಅನಂತರ ಅದಲು ಬದಲು ಯಕ್ಷಗಾನ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀನಾಥ ಉರಾಳ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಗೌರವಾಧ್ಯಕ್ಷ ಆನಂದ ಸಿ.ಕುಂದರ್, ಪ್ರಸಾದ್ ಮೊಗೆಬೆಟ್ಟು, ಸಚಿನ್ ಶೆಟ್ಟಿ ವಡ್ಡರ್ಸೆ, ಪ್ರಭಾಕರ ಮೆಂಡನ್ ಕೋಡಿ, ಹರೀಶ್ ದೇವಾಡಿಗ ಗಿಳಿಯಾರು, ರಾಘವೇಂದ್ರ ಸುವರ್ಣ ಇದ್ದರು.

Leave a Reply

Your email address will not be published. Required fields are marked *