News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾರ್ಕಡದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಕೋಟ: ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಹಾಗೂ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮಾಬುಕಳ ಚೇತನ ಪ್ರೌಢಶಾಲೆ ಕನ್ನಡ ಪ್ರಾಧ್ಯಾಪಕ ಪಕೀರಪ್ಪ ಇವರು ಕನ್ನಡ ಧ್ವಜಾರೋಹಣಗೈದು ಭವ್ಯ ಪರಂಪರೆಯುಳ್ಳ ಕನ್ನಡನಾಡಿನ ಭಾಷೆ- ಸಂಸ್ಕೃತಿ ಹಾಗೂ ಆಚರಣೆಗಳನ್ನು ಬಳಸಿ ಉಳಿಸುವುದರ ಮೂಲಕ ಹಾಗೂ ಮಕ್ಕಳು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಹಾಗೂ ಕನ್ನಡ ಮಾಧ್ಯಮದ ಶಾಲೆಯನ್ನು ಉಳಿಸಬೇಕೆಂದು ಕರೆ ನೀಡಿದರು.

ಮುಖ್ಯೋಪಾಧ್ಯಾಯ ಎನ್ ಪ್ರಭಾಕರ ಕಾಮತ್ , ಶಾಲಾ ಅಧ್ಯಾಪಕ ನಾರಾಯಣ ಆಚಾರ್ಯ ,ಶಾಲಾಭಿವೃದ್ದಿ ಸಮಿತಿಯ ಸದಸ್ಯ ಕೆ.ಶ್ರೀಪತಿ ಆಚಾರ್ಯ, ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ ಹಾಗೂ , ಗೆಳೆಯರ ಬಳಗದ ಸದಸ್ಯರು, ಶಾಲಾ ಅಧ್ಯಾಪಕ ವೃಂದ, ಸ್ಥಳೀಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಲಿಖಿತ ರಸಪ್ರಶ್ನೆ ಏರ್ಪಡಿಸಲಾಯಿತು. ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರನಾಥ ಹೊಳ್ಳ ಸ್ವಾಗತಿಸಿದರು. ಅಧ್ಯಾಪಕ ಕೆ . ಸತ್ಯನಾರಾಯಣ ನಿರೂಪಿಸಿ ವಂದಿಸಿದರು.

ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಹಾಗೂ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

Leave a Reply

Your email address will not be published. Required fields are marked *