ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ವಾರದ ಭಜನಾ ಸೇವೆಗೆ ಪೂರಕವಾಗುವಂತೆ ಶಾಶ್ವತ ಧ್ವನಿವರ್ಧಕದ ವ್ಯವಸ್ಥೆ ಹಾಗೂ ಶ್ರೀ ನಾರಾಯಣ ಗುರು ಸಮುದಾಯ ಭವನದ ಕಾರ್ಯಕ್ರಮಗಳಿಗೆ ಉಪಯೋಗವಾಗುವಂತೆ ಸ್ಟೀಲ್ ಟೇಬಲ್ ಗಳ ಉದಾರ ಕೊಡುಗೆ ನೀಡಿರುವ ದಿಶಾ ಸರ್ಜಿಕಲ್ಸ್ ಎಂಡ್ ಲೈಫ್ ಕೇರ್ ಉಡುಪಿ ಇದರ ಆಡಳಿತ ಪಾಲುದಾರ, ಮೆಡಿಯರ್ಥ್ ಲೈಫ್ ಕೇರ್ ಮುಂಬೈ ಇದರ ಆಡಳಿತ ನಿರ್ದೇಶಕ ಭರತ್ ಶೆಟ್ಟಿ ಪಠೇಲರ ಮನೆ ಅಂಬಲಪಾಡಿ ಇವರನ್ನು ಸಂಘದ ವತಿಯಿಂದ ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಗೌರವಾಧ್ಯಕ್ಷ ಗೋಪಾಲ್ ಸಿ. ಬಂಗೇರ, ಉಪಾಧ್ಯಕ್ಷ ಶಿವದಾಸ್ ಪಿ., ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ಅವಿನಾಶ್ ಪೂಜಾರಿ, ಮಾಜಿ ಅಧ್ಯಕ್ಷ ಕೆ.ಮಂಜಪ್ಪ ಸುವರ್ಣ, ಮಹಿಳಾ ಘಟಕದ ಸಂಚಾಲಕಿ ಗೋದಾವರಿ ಎಮ್. ಸುವರ್ಣ ಹಾಗೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಬ್ಲಡ್ ಸೆಂಟರ್ ಆರೋಗ್ಯಾಧಿಕಾರಿ ಡಾ! ದೀಪ್ ಎಮ್., ತಾಂತ್ರಿಕ ಮೇಲ್ವಿಚಾರಕ ವಿಶ್ವೇಶ್ ಎನ್., ಲಯನ್ಸ್ ಕ್ಲಬ್ ಹಿರಿಯಡ್ಕ ಅಧ್ಯಕ್ಷ ಮೋಹನದಾಸ್ ಆಚಾರ್ಯ, ಲಯನ್ಸ್ ಕ್ಲಬ್ ಉಡುಪಿ-ಚೇತನಾ ಅಧ್ಯಕ್ಷ ಜಗದೀಶ್ ಆಚಾರ್ಯ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಂದುಬೆಟ್ಟು ಅಧ್ಯಕ್ಷ ಮಹೇಶ್ ಚಂದ್ರ ರಾವ್, ಎನ್.ಸಿ. ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ.), ಬಂಕೇರ್ಕಟ್ಟ ಅಂಬಲಪಾಡಿ ಅಧ್ಯಕ್ಷ ಕಿರಣ್ ಪೂಜಾರಿ, ದಿಶಾ ಸರ್ಜಿಕಲ್ಸ್ ಎಂಡ್ ಲೈಫ್ ಕೇರ್ ಇದರ ಪಾಲುದಾರರಾದ ಅಂಬಲಪಾಡಿ ಪಠೇಲರ ಮನೆ ಮೋಹನ್ ಶೆಟ್ಟಿ, ಜಯ ಸನಿಲ್, ಗೋಪಾಲಕೃಷ್ಣ ಶೆಟ್ಟಿ, ಪ್ರಮುಖರಾದ ರಮೇಶ್ ಮಲ್ಪೆ, ಎ.ಮುದ್ದಣ್ಣ ಪೂಜಾರಿ, ರಾಜೇಂದ್ರ ಪಂದುಬೆಟ್ಟು, ಭಾಸ್ಕರ್ ಅಂಚನ್, ಗುರುರಾಜ್, ವಿನಯ್ ಕುಮಾರ್, ನಿತಿನ್ ಕುಮಾರ್, ಜನಾರ್ದನ ಪೂಜಾರಿ, ರಮೇಶ್ ಕೋಟ್ಯಾನ್, ಕುಶಲ್ ಕುಮಾರ್ ಎ., ರವಿ ಪಾಲನ್, ಶಂಕರ ಪೂಜಾರಿ, ದೇವಕಿ ಕೆ. ಕೋಟ್ಯಾನ್, ವಾಣಿಶ್ರೀ ಅರುಣ್, ಸವಿತಾ ಸಂತೋಷ್, ಅಶ್ವಿನಿ, ಲಾವಣ್ಯ ಹಾಗೂ ಸಂಘದ ಮತ್ತು ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು.