ಉಡುಪಿ : ನವೆಂಬರ್ 05: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ. ಎ ನಾರಾಯಣ ಗೌಡರ ಆದೇಶದಂತೆ ಕರವೇ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಕೊಲ್ಲೂರಿಗೆ ಭೇಟಿ ನೀಡಿ ಅಂಗಡಿ ಮುಂಗಟ್ಟುಗಳ ನಾಮ ಫಲಕದಲ್ಲಿ 70% ಕನ್ನಡ ಕಡ್ಡಾಯಗೊಳಿಸುವಂತೆ ಅಭಿಯಾನ ಹಮ್ಮಿಕೊಳ್ಳಲಾಯಿತು.
ಕೊಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಾಗರಾಜ್ ಪೂಜಾರಿ, ಮಾಜಿ ಅಧ್ಯಕ್ಷರಾದ ಸಂತೋಷ್ ಭಟ್, ಕೊಲ್ಲೂರು ಪೊಲೀಸ್ ಠಾಣಾ ಠಾಣಾಧಿಕಾರಿ ಜಯಶ್ರೀರವರಿಗೆ ಕನ್ನಡ ಕಡ್ಡಾಯದ ಮಾಹಿತಿ ನೀಡಲಾಯಿತು. ಕರವೇ ಕಾರ್ಯಕರ್ತರ ವತಿಯಿಂದ ಕೊಲ್ಲೂರು ಬಸ್ ಸ್ಟಾಂಡ್ ನಿಂದ ಕೊಲ್ಲೂರು ಮುಕಾಂಬಿಕಾ ಸನ್ನಿಧಾನದವರೆಗೆ ಜಾಥಾ ನಡೆಸಿದರು. ಬಳಿಕ ಆಡಳಿತ ಕಛೇರಿಗೆ ಭೇಟಿ ನೀಡಿ ಕಾರ್ಯ ನಿರ್ವಹಣಾಧಿಕಾರಿ ಪರವಾಗಿ ಶಿಷ್ಟಾಚಾರ ವಿಭಾಗದ ಜಯ ಕುಮಾರ್ ಮತ್ತು ಸಂತೋಷ್ ಶೆಟ್ಟಿಯವರಿಗೆ ಜಿಲ್ಲಾಧಿಕಾರಿಗಳ ಆದೇಶದ ಪ್ರತಿ ನೀಡಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ರಮೇಶ್ ಕುಂದರ್ ಕೊಲ್ಲೂರು, ಕರವೇ ಗೌರವಾಧ್ಯಕ್ಷರಾದ ಸುಂದರ್ ಎ. ಬಂಗೇರ ಮಹಿಳಾ ಜಿಲ್ಲಾಧ್ಯಕ್ಷರಾದ ಗೀತಾ ಪಾಂಗಳ, ಜಿಲ್ಲಾ ಉಪಾಧ್ಯಕ್ಷರಾದ ಕುಶಲ್ ಅಮೀನ್ ಬೆಂಗ್ರೆ, ದೇವಕಿ ಬಾರ್ಕೂರು, ಶಾಲಿನಿ, ಜಿಲ್ಲಾ ಕಾರ್ಯದರ್ಶಿಯಾದ ಅನುಷಾ ಆಚಾರ್ ಪಳ್ಳಿ, ಸರಿತಾ, ಮೋಹಿನಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಜಯ ಪೂಜಾರಿ, ಉಪಾಧ್ಯಕ್ಷರಾದ ಸಿದ್ದಣ್ಣ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಲಾಲ್, ಕಾರ್ಯದರ್ಶಿ ಗಣೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಮೋದ್ ಕುಲಾಲ್ ಸಂಘಟನಾ ಕಾರ್ಯದರ್ಶಿ ಜ್ಯೋತಿ ಸಹ ಸಾಂಸ್ಕೃತಿಕ ಕಾರ್ಯದರ್ಶಿ ಜ್ಯೋತಿ ಆರ್, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಕಲಾ, ಜಿಲ್ಲಾ ಸದಸ್ಯರಾದ ಗೋಪಾಲ , ಸುಧಾಕರ್ ನಾಯ್ಕ್, ಕಾಪು ತಾಲೂಕು ಅಧ್ಯಕ್ಷರಾದ ಆನಂದ ಶೆಟ್ಟಿ, ಉಡುಪಿ ತಾಲೂಕು ಅಧ್ಯಕ್ಷರಾದ ಪ್ರಭಾಕರ್ ರಾಜ್ ಪೂಜಾರಿಯವರು ತಾಲೂಕು ಮಹಿಳಾ ಅಧ್ಯಕ್ಷರಾದ ಮಮತಾ, ಉಡುಪಿ ತಾಲೂಕು ಮಹಿಳಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ, ಪವಿತ್ರ ಶೆಟ್ಟಿ, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಜ್ಯೋತಿ ಗಿರೀಶ್ ಸಜ್ಜನ್, ಜಿಲ್ಲೆ ಹಾಗೂ ತಾಲೂಕು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.