ಕೋಟ: ಶ್ರೀ ಶಾಂತಿಮತೀ ಪ್ರತಿಷ್ಠಾನ ಹಂದಾಡಿ ಬ್ರಹ್ಮಾವರ ಇವರ ಆಶ್ರಯದಲ್ಲಿ ದಶಮಾನೋತ್ಸವದ ಹಿನ್ನಲ್ಲೆಯಲ್ಲಿ ಡಿಸೆಂಬರ್ 29 ರಿಂದ 30ತನಕ ಲೋಕಕಲ್ಯಾಣಾರ್ಥವಾಗಿ ಕೋಟಿ ಗಾಯತ್ರೀ ಮಹಾಯಾಗ ಹಾಗೂ ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗ ಹಮ್ಮಿಕೊಂಡಿದ್ದು ಈ ಹಿನ್ನಲ್ಲೆಯಲ್ಲಿ ಯಾಗದ ಸಲುವಾಗಿ ಕುಂಡಗಳ ನಿರ್ಮಾಣಕ್ಕೆ ಕಲ್ಲುಮುಹೂರ್ತ ಭಾನುವಾರ ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ದೇಗುಲದ ಪುರೋಹಿತರಾದ ತೀರ್ಥೆಶ್ ಭಟ್ಟ ಪೂಜೆ ನೆರವೆರಿಸಿದರು. ಪ್ರತಿಷ್ಠಾನದ ಅಧ್ಯಕ್ಷ ವಡ್ಡರ್ಸೆ ಸಚ್ಚಿದಾನಂದ ಅಡಿಗ ಹಾಗೂ ಯಾಗ ಸಮಿತಿಯ ಅಧ್ಯಕ್ಷ ವಿಜಯ ಮಂಜರ ಪಾಂಡೆಶ್ವರ ಹಾಗೂ ಮಾಜಿ ಅಧ್ಯಕ್ಷ ಪ್ರಸನ್ನ ಭಟ್ಟ ಇವರು ಯಾಗ ಕುಂಡದ ಕಾಮಗಾರಿಗೆ ಚಾಲನೆ ನೀಡಿದರು.
ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಅಡಳಿತ ಮಂಡಳಿಯ ಅಧ್ಯಕ್ಷ ಗಣೇಶ ಭಟ್ಟ ಹಾಗೂ ಅರ್ಚಕರಾದ ಸದಾಶಿವ ಅಡಿಗ ರಾಜೇಂದ್ರ ಅಡಿಗ ,ಪ್ರತಿಷ್ಠಾನದ ಸದಸ್ಯರಾದ ಮಂಜುನಾಥ ಉಡುಪ, ಹರೀಶ ಅಡಿಗ, ನಾಗಭೂಷಣ ಐತಾಳ, ನಳಿನಿ ಪ್ರದೀಪ್ ರಾವ್ , ಪ್ರಭಾವತಿ ಕೆದ್ಲಾಯ, ನಾಗಲಕ್ಷ್ಮೀ .ಜಿ ಭಟ್ಟ ಹಾಗೂ ಇನ್ನಿತರ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತಿತರಿದ್ದರು.
ಶ್ರೀ ಶಾಂತಿಮತೀ ಪ್ರತಿಷ್ಠಾನ ಹಂದಾಡಿ ಬ್ರಹ್ಮಾವರ ಇವರ ಆಶ್ರಯದಲ್ಲಿಲೋಕಕಲ್ಯಾಣಾರ್ಥವಾಗಿ ಕೋಟಿ ಗಾಯತ್ರೀ ಮಹಾಯಾಗ ಹಾಗೂ ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗಕ್ಕೆ ಕುಂಡಗಳ ನಿರ್ಮಾಣಕ್ಕೆ ಕಲ್ಲುಮುಹೂರ್ತ ಕಾರ್ಯಕ್ರಮ ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.