• Sat. May 11th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

V. A ಚಂದ್ರಶೇಖರ ಮೂರ್ತಿಯ ಮತ್ತೊಂದು ಕರ್ಮಕಾಂಡ?

ByKiran Poojary

Nov 7, 2023

V. A ಚಂದ್ರಶೇಖರ ಮೂರ್ತಿಯ ಮತ್ತೊಂದು ಕರ್ಮಕಾಂಡ?

PWD ರಸ್ತೆ ಮಾರ್ಜಿನನಲ್ಲಿ ವಾಸ್ತವ್ಯಕ್ಕೆ ಭೂ ಪರಿವರ್ತನೆ ಮಾಡಿರುವುದು ಮತ್ತು ಇದೇ ಕಟ್ಟಿಡದಲ್ಲಿ ವಾಣಿಜ್ಯ ವ್ಯವಹಾರಗಳಿಗೆ ಗ್ರಾಮಪಂಚಾಯತ್ ಪರವಾನಿಗೆ ನೀಡಿರುವ ಕುರಿತು ಹೋರಾಟಗಾರ ಬಿ. ಟಿ. ಮಂಜುನಾಥರವರು ಈಗಾಗಲೇ ಲೋಕಾಯುಕ್ತ ಕೋರ್ಟ್ ಅಲ್ಲಿ ಚಂದ್ರಶೇಖರ ಮೂರ್ತಿ ವಿರುದ್ಧ ದಾವೆ ಹೂಡಿದ್ದಾರೆ ಎಂದು ತಿಳಿದು ಬಂದಿದೆ.

ಸರ್ವೆ ನಂಬ್ರ 176/18 ರಲ್ಲಿ 0.05 ಎಕ್ರೆಗೆ ವಾಸ್ತವ್ಯಕ್ಕಾಗಿ ಭೂ ಪರಿವರ್ತನೆಯನ್ನು ಮಾಡಿಸಿಕೊಂಡಿರುತ್ತಾರೆ. ಆದರೆ ಇದು PWD ರಸ್ತೆಯಲ್ಲಿ ಇರುತ್ತದೆ. ಸರಕಾರ ಮಾನದಂಡದಂತೆ ಇರುವುದಿಲ್ಲ. ಇದನ್ನು ಸಿದ್ದಾಪುರ ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ್ ಮೂರ್ತಿಯವರು ಪಾರ್ಟಿಯವರಿಂದ ಆಮಿಷಕ್ಕೆ ಒಳಗಾಗಿ ಕಾನೂನು ಮರೆತು ಭೂ ಪರಿವರ್ತನೆಯನ್ನು ಮಾಡಿ ಕೊಡುವಲ್ಲಿ ಶಾಮೀಲಾಗಿರುತ್ತಾರೆ ಮತ್ತು ಈ ವಾಸ್ತವ್ಯದ ಕಟ್ಟಡಕ್ಕೆ ವಾಣಿಜ್ಯ ವ್ಯವಹಾರ ಮಾಡುವುದಕ್ಕೆ ಗ್ರಾಮ ಪಂಚಾಯತ್ ಗ್ರಾಮ ಅಭಿವೃದ್ಧಿ ಅಧಿಕಾರಿಯವರು ಶಾಮಿಲಾಗಿರುವುದು ಕಂಡುಬಂದಿರುತ್ತದೆ. ವಾಸ್ತವಕ್ಕೆ ನಿಗದಿ ಮಾಡಿ ಭೂ ಪರಿವರ್ತನೆಗೆ ಗ್ರಾಮ ಪಂಚಾಯತ್ ಗ್ರಾಮಾಭಿವೃದ್ಧಿ ಅಧಿಕಾರಿಯವರು ವಾಣಿಜ್ಯಕ್ಕೆ ಪರವಾನಿಗೆ ನೀಡಿರುವುದಲ್ಲದೆ 2ನೇ ಅಂತಸ್ತನ್ನು ನಿರ್ಮಿಸಲು ಒಪ್ಪಿಗೆ ನೀಡಿರುತ್ತಾರೆ. ಎಂದು ಬಿ. ಟಿ. ಮಂಜುನಾಥರವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.

ಸಾರ್ವಜನಿಕರು ಹೇಳುವಂತೆ ಇಂತಹ ಮತ್ತಷ್ಟು ಅಕ್ರಮಗಳನ್ನು ಸಿದ್ಧಾಪುರ ಅಲ್ಲದೇ ಹೊಸಂಗಡಿಮತ್ತು ಯಡಮೋಗೆಯಲ್ಲೂ ಮಾಡಿದ್ದಾನೆ ದಾಖಲೆಯನ್ನು ಒದಗಿಸುತ್ತೇವೆ ಎಂದು ಹೊಸಕಿರಣ ನ್ಯೂಸ್ ಗೆ ಕರೆ ಮಾಡಿ ದಾಖಲೆ ನೀಡಿರುತ್ತಾರೆ.

ಸಂಬಂಧಪಟ್ಟ ಇಲಾಖೆಗಳು ಚಂದ್ರಶೇಖರ್ ಮೂರ್ತಿ ಮತ್ತು ಈತನೊಂದಿಗೆ ಶಾಮಿಲಾದ ಎಲ್ಲಾ ಅಧಿಕಾರಿಗಳ ವಿರುದ್ಧ ಡಿಪಾರ್ಟ್ಮೆಂಟಲ್ ಎನ್ಕ್ವರಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೆ ಈತ ನನಗೆ ತಹಸೀಲ್ದಾರ ಬೆಂಬಲವಿದೆ ನನ್ನ ಮೇಲೆ ಯಾವುದೇ ತನಿಖೆ ಆಗುವುದಿಲ್ಲ, ಕೇವಲ ಟ್ರಾನ್ಸ್ಫರ್ ಆಗಬಹುದು ಅಷ್ಟೇ , ಟ್ರಾನ್ಸ್ಫರ್ ಮಾಡಿದರೆ ಇನ್ನೊಂದು ಗ್ರಾಮ ಪಂಚಾಯತಿಗೆ ಹೋಗುತ್ತೇನೆ ಮತ್ತೇನು? ಎನ್ನುವ ಉಡಾಫೆ ಉತ್ತರವನ್ನು ನೀಡುತ್ತಿದ್ದಾನೆ. ಈತ ತಹಸಿಲ್ದಾರ್ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ಸ್ಪೋಟಕ ಮಾಹಿತಿಯನ್ನು  ನಿಮ್ಮ ಮುಂದೆ ಬಯಲು ಮಾಡಲಿದೆ ಹೊಸಕಿರಣ  ನ್ಯೂಸ್, ಸ್ಪೋಟಕ ಸುದ್ದಿಗಾಗಿ  ವೀಕ್ಷಿಸಿ ಹೊಸ ಕಿರಣ ನ್ಯೂಸ್

Leave a Reply

Your email address will not be published. Required fields are marked *