ಬೈಂದೂರು: ಕಳೆದ ಎರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ನಾವುಂದ ಸಮೀಪ ಕರ್ತವ್ಯದಲ್ಲಿದ್ದ ಪೊಲೀಸರು ಎದುರಿನಿಂದ ಬಂದಿರುವ ಕಾರನ್ನು ತಡೆದು ಲೈಸೆನ್ಸ್, ಇನ್ಶೂರೆನ್ಸ್, ಕಾರಿನ ಡಾಕ್ಯುಮೆಂಟ್ ಕೇಳಿದಾಗ ಕಾರಿನಲ್ಲಿದ್ದ ವ್ಯಕ್ತಿಯು ನೇರವಾಗಿ ಕರ್ತವ್ಯದಲ್ಲಿರುವ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ನನ್ನ ಡಾಕ್ಯುಮೆಂಟ್ ಕೇಳುವವರು ನೀವು ಯಾರು? ನಾನೊಬ್ಬ ವಕೀಲನಿದ್ದೇನೆ ನನಗೆ ಎಲ್ಲಾ ಕಾನೂನು ತಿಳಿದವನಾಗಿದ್ದೇನೆ ಎಂದು ಪೊಲೀಸರಿಗೆ ಅಗೌರವ ತೋರಿ ಪೊಲೀಸರ ವಿರುದ್ಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ ಎಂದು ಪೊಲೀಸರು ಅಸವಧಾನ ವ್ಯಕ್ತಪಡಿಸಿದ್ದಾರೆ.
ಅಸಿಫ್ ನಾವುಂದ ಎನ್ನುವ ವ್ಯಕ್ತಿ ನೇರವಾಗಿ ಬಂದು ನಮ್ಮ ಕಾರಿನ ಡಾಕ್ಯುಮೆಂಟ್, ಇನ್ಸೂರೆನ್ಸ್, ಕೇಳ್ತೀರಾ ನಿಮ್ಮ ಸರಕಾರಿ ಗಾಡಿಯ ಇನ್ಸೂರೆನ್ಸ್ ಇದೆಯಾ ನಿಮ್ಮ ವಾಹನದ ಇನ್ಸೂರೆನ್ಸ್ ಲ್ಯಾಪ್ಸ್ ಆಗಿ 12 ವರ್ಷ ಕಳೆದಿದೆ ಎಂದು ಎ,ಎಸ್, ಐ, ಅಶೋಕ ಹಾಗೂ ಸಿಬ್ಬಂದಿಗೆ ದರ್ಪ ತೋರಿದ್ದಾನೆ, ಎಂದು ಅಸಮಾಧಾನ ಹೊರಹಾಕಿದ್ದಾರೆ,
ಹೌದು, ಸರಕಾರಿ ಇಲಾಖೆಯ ವಾಹನಗಳು ಇಲಾಖೆಗೆ ಹೊಸದಾಗಿ ಬರುವಾಗ ಎರಡು ವರ್ಷ ಇನ್ಸೂರೆನ್ಸ್ ಕಂಪನಿ ಬರಿಸುತ್ತದೆ, ನಂತರ ದಿನಗಳಲ್ಲಿ ಸರಕಾರಿ ಇಲಾಖೆ ವಾಹನಗಳಿಗೆ ಕೆ. ಜಿ. ಡಿ. ಇಲಾಖೆ ಬರಿಸುತ್ತದೆ ಎಂದು ಮಾಧ್ಯಮಕ್ಕೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ,
ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ವಿಡಿಯೋ ನೋಡಿ ನಾನೊಬ್ಬ ವಕೀಲನಿದ್ದೇನೆ ಎಂದು ಹೇಳುವ ಈತ ನಿಜವಾಗ್ಲೂ ವಕೀಲರೇ ಎನ್ನುವ ಸಂಶಯ ಮೂಡಿದೆ ಇವರಿಗೆ ಕೆ ಜಿ ಡಿ ಇಲಾಖೆ ಮಾಹಿತಿ ಇಲ್ಲವೋ? ಒಂದು ವೇಳೆ ಈತ ವಕೀಲ ಅಲ್ಲದೇ ಇದ್ದಾರೆ ಈತನ ವಿರುದ್ಧ ವಕೀಲರ ಸಂಘದ ಅಧ್ಯಕ್ಷರು ವಕೀಲ ವೃತ್ತಿಗೆ ಅಪಮಾನ ಮಾಡಿ ಸುಳ್ಳು ಹೇಳಿದವನ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.
Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180