ಕೋಟ: ಗೋವು ಯಾವತ್ತೂ ಪೂಜ್ಯವೇ, ಗೋವಿನಲ್ಲಿ ಕೋಟ್ಯಾಂತರ ದೇವತೆಗಳು ನೆಲೆಸಿರುವರೆಂದು ನಂಬಿ ಗೋವನ್ನು ಪೂಜಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ ಕುಂದರ್ ಹೇಳಿದರು. ಕೋಟ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸ್ಥಳೀಯ ಪ್ರಮುಖ ಕಾಂಗ್ರೆಸ್ ಮುಖಂಡರಾದ ಶಿವ ಪೂಜಾರಿ ವಣೂರು ಪಡುಕೆರೆ ಇವರ ಮನೆಯಲ್ಲಿ ಸಾಮೂಹಿಕ ಗೋಪೂಜೆ ಕಾರ್ಯಕ್ರಮದಲ್ಲಿ ಮಾತನಡಿದರು.
ಕಾರ್ಯಕ್ರಮದಲ್ಲಿ ಕೋಟ ಸಿ ಎ ಬ್ಯಾಂಕ್‌ನ ಅಧ್ಯಕ್ಷ ತಿಮ್ಮ ಪೂಜಾರಿ ಕೋಟ, ಉಡುಪಿ ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಬಾಲಕೃಷ್ಣ ಪೂಜಾರಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಮಹಾಬಲ ಮಡಿವಾಳ, ಕೋಟತಟ್ಟು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಚಚ್ಕೆರೆ, ಕೋಟ ಬ್ಲಾಕ್ ಕಾಂಗ್ರೆಸ್ ಇಂಟೆಕ್ ಅಧ್ಯಕ್ಷ ದೇವೇಂದ್ರ ಗಾಣಿಗ ಕೋಟ, ದೇವದಾಸ ಬಂಗೇರ, ರತ್ನಾಕರ್ ಶ್ರೀಯಾನ್ ಕೋಟ ಪಡುಕೆರೆ, ಕೋಟ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ವಿಜಯ ಕುಂದರ್, ಸತೀಶ್ ಪೂಜಾರಿ ಮಣೂರು ಪಡುಕೆರೆ, ಸುರೇಶ್ ಮಣೂರು, ಕೃಷ್ಣ ಮೆಂಡನ್, ರಾಜು ಪೂಜಾರಿ, ವಿಜಯ ಪೂಜಾರಿ, ಮಧುಸೂದನ್ ಪೂಜಾರಿ ಹಾಗೂ ಸ್ಥಳೀಯ ಪ್ರಗತಿಪರ ಕೃಷಿಕರಾದ ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು, ಗಣೇಶ್ ಕೆ ನೆಲ್ಲಿಬೆಟ್ಟು ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಕೋಟ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸ್ಥಳೀಯ ಪ್ರಮುಖ ಕಾಂಗ್ರೆಸ್ ಮುಖಂಡರಾದ ಶಿವ ಪೂಜಾರಿ ವಣೂರು ಪಡುಕೆರೆ ಇವರ ಮನೆಯಲ್ಲಿ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ನಡೆಯಿತು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ ಕುಂದರ್, ಕೋಟ ಸಿ ಎ ಬ್ಯಾಂಕ್‌ನ ಅಧ್ಯಕ್ಷ ತಿಮ್ಮ ಪೂಜಾರಿ ಕೋಟ, ಉಡುಪಿ ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಬಾಲಕೃಷ್ಣ ಪೂಜಾರಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಮಹಾಬಲ ಮಡಿವಾಳ ಮತ್ತಿತರರು ಇದ್ದರು.