• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಯಕ್ಷಪ್ರೇಮಿ ನಾರಾಯಣ ದತ್ತಿ ಪುರಸ್ಕಾರ

ByKiran Poojary

Nov 14, 2023

ಯಕ್ಷಪ್ರೇಮಿ ನಾರಾಯಣ ದತ್ತಿ ಪುರಸ್ಕಾರ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಸಹಕಾರದಲ್ಲಿ ಕಸಾಪ ಉಡುಪಿ ತಾಲೂಕು ಘಟಕದಿಂದ ನೀಡುವ ಯಕ್ಷ ಪ್ರೇಮಿ ನಾರಾಯಣ ದತ್ತಿ ಪುರಸ್ಕಾರವನ್ನು ಯಕ್ಷಗಾನ ಕಲಾವಿದೆ ಸಂಘಟಕಿ ನಿರೂಪಮ ಪ್ರಮೋದ್ ತಂತ್ರಿ ಕೊಡಂಕೂರು ಅವರಿಗೆ ನೀಡಿ ಗೌರವಿಸಲಾಯಿತು .

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಉರಗತಜ್ಞ ಗುರುರಾಜ್ ಸನಿಲ್, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಆಡಿಗ , ಕ ಸಾ ಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್. ಪಿ . ಕಸಾಪ ಉಡುಪಿ ಕೋಶಾಧಿಕಾರಿ ವಿ ಮನೋಹರ್ , ಭವಾನಿ ವಿ. ಶೆಟ್ಟಿ, ಶಾರದಾ ಶೆಟ್ಟಿ , ಕಲಾ ವಿಭಾಗದ ಡೀನ್ ಡಾ. ನಿಕೇತನ , ಉಪನ್ಯಾಸಕರಾದ ಸೋಜನ್ ಕೆ. ಜಿ., ಎನ್ ಎಸ್ ಎಸ್ ಸಂಚಾಲಕರಾದ ವಿದ್ಯಾಕುಮಾರಿ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಪರಿಚಯಿಸಿದರು. ತಾಲೂಕು ಗೌರವಾ ಕಾರ್ಯದರ್ಶಿ ಜನಾರ್ದನ ಕೊಡವೂರು ನಿರೂಪಿಸಿದರು.

Leave a Reply

Your email address will not be published. Required fields are marked *