Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಶಾಖೆಯ ಕಾರ್ಯಕಾರಿ ಸಮಿತಿಯ ಸ್ನೇಹ ಸಮ್ಮಿಲನ

ನವಂಬರ್ 15 ಬುಧವಾರ ಮುಂಬೈ ಮಹಾನಗರದ ಡೊಂಬಿವಲಿ ಶಾಖೆಯ ಕಾರ್ಯಕಾರಿ ಸಮಿತಿಯ ಸ್ನೇಹ ಸಮ್ಮಿಲನ ಕಾರ್ಯಕ್ರಮ ಡೊಂಬಿವಲಿ ( ಪ )ದ ಹೋಟೆಲ್ ಫ್ರೆಂಡ್ಸ್ ಪಾರ್ಟಿ ಹಾಲ್ ನಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು.

ಮಕ್ಕಳಿಗೆ ಆಡಲು ಸಂಗೀತ ಕುರ್ಚಿ, ಡಾನ್ಸ್, ಗೇಮ್ಸ್, ಹಾಗೂ ವಿವಿಧ ವಿನೋದಾವಳಿ ಕಾರ್ಯಕ್ರಮ ಏರ್ಪಟ್ಟಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿಯಾದ ಸಂತೋಷ ಪುತ್ರನ್ ಮಾತನಾಡುತ್ತ ನಮ್ಮ ಸಂಸ್ಥೆಯ ಅಧ್ಯಕ್ಷರಾದ ರಾಜು ಮೊಗವೀರ ತಗ್ಗರ್ಸೆ ಹಾಗೂ ನಮ್ಮ ಸಂಸ್ಥೆಯ ಎಲ್ಲ ಪದಾಧಿಕಾರಿಗಳ ಸಹಕಾರದಿಂದ ಮುಂಬರುವ ದಿನಗಳಲ್ಲಿ ನಾವು ಸಂಘದ ವತಿಯಿಂದ ವಿವಿಧ ಆಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ, ಮೆಡಿಕಲ್ ಹೆಲ್ಪ್, ಹೆಂಗಸರಿಗೆ ಹಳದಿ ಕುಂಕುಮ, ನಮ್ಮ ವಾರ್ಷಿಕ ಕಾರ್ಯಕ್ರಮವಾದ *ಕುಂದರಂಜನಿ* ಅನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಿದ್ದೇವೆ ಎಂದರು.

ಅಧ್ಯಕ್ಷ ರಾದ ರಾಜು ತಗ್ಗರ್ಸೆ ಮಾತನಾಡುತ್ತ ಈ ಕಾರ್ಯಕ್ರಮ ಮಾಡಿರುವ ಉದ್ದೇಶ ವೇನೆಂದರೆ ನಮ್ಮ ಕಾರ್ಯಕರ್ತರು ಹಾಗೂ ಅವರ ದಂಪತಿ ಹಾಗೂ ಮಕ್ಕಳ ಒಬ್ಬರನೊಬ್ಬರು ಪರಿಚಯ ವಾಗಲು ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದೇವೆ ಎಂದರು. ಉಪಾಧ್ಯಕ್ಷರಾದ ಬಾಬು ಮೊಗವೀರ, ಚಂದ್ರ ನಾಯ್ಕ್, ಆನಂದ ಹೆಮ್ಮಾಡಿ, ದಿನೇಶ್ ಪುತ್ರನ್, ಶೇಖರ್ ಮೊಗವೀರ, ರಾಜು ಮೊಗವೀರ ದೊಂಬೆ ಉಪಸ್ಥಿತರಿದ್ದು ಸಹಕರಿಸಿದರು.ಕಾರ್ಯಕ್ರಮದ ಮದ್ಯೆ ಎಲ್ಲ ಪದಾಧಿಕಾರಿಗಳ ದಂಪತಿಗಳನ್ನು ಪುಷ್ಪ ಗುಚ್ಚ ನೀಡಿ ಗೌರವಿಸಲಾಯಿತು. ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

Leave a Reply

Your email address will not be published. Required fields are marked *