News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡಿದ ಧೀರಜ್ ಐತಾಳ್

ಕೋಟ: ಇಲ್ಲಿನ ಸಾಲಿಗ್ರಾಮದ ನಿವಾಸಿ ಪುಟ್ಟ ಪೋರ ಧೀರಜ್ ಐತಾಳ್ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದ್ದಾನೆ.

ಇತ್ತೀಚಿಗೆ ಸಾಲಿಗ್ರಾಮ ಪರಿಸರದಲ್ಲಿ ಸೆರೆಸಿಕ್ಕ ಬಾರಿ ಗಾತ್ರದ ಹೆಬ್ಬಾವು ಹಿಡಿಯುವಲ್ಲಿ ಈ 12 ವರ್ಷದ ಪೋರ ಹೆಬ್ಬಾವಿಗೆ ಹೆದರದೆ ಅದರ ತಲೆಗೆ ಕೈಹಾಕಿ ಹಿಡಿದ ದೃಶ್ಯ ವಾಟ್ಸನ್, ಫೇಸ್ ಬುಕ್‌ನಲ್ಲಿ ಬಾರಿ ಸದ್ದು ಮಾಡಿದೆ. ಚಿತ್ರಪಾಡಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಈತ , ತನ್ನ ತಂದೆ ಸುಧೀಂದ್ರ ಐತಾಳ್ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸನಿಹದಲ್ಲಿ ವಾಸ್ತವ್ಯ ಹೊಂದಿದ್ದಾರೆ.

ತಂದೆ ಪ್ರಾಣಿ ಪ್ರೇಮಿಯಾಗಿದ್ದು ತನ್ನ ಮನೆಯಲ್ಲೆ ಗಾಯಗೊಂಡ ಪ್ರಾಣಿ ಪಕ್ಷಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ತಾನು ಪ್ರಾಣಿಗಳೊಂದಿಗೆ ಸ್ನೇಹ ಸಂಬAಧ ವೃದ್ಧಿಸಿಕೊಳ್ಳುವುದ ಜೊತೆಗೆ ತನ್ನ ಪುತ್ರನಿಗೆ ಇದರ ಅಭಿರುಚಿ ಬೆಳೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪುಟ್ಟ ಪೋರನ ಧೈರ್ಯಕ್ಕೆ ಫೀದಾ ಹೇಳಿದ್ದಾರೆ.

Leave a Reply

Your email address will not be published. Required fields are marked *