
ಕುಂದಾಪುರ : “ನೊಂದವರಿಗೆ ನೆರವಿನ ದಾರಿ ದೀಪ, ಯುವ ಮನಸ್ಸುಗಳಿಗೆ ಸ್ಫೂರ್ತಿ”ಯಾದ
ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಸಂಸ್ಥೆಯ ತುರ್ತು ಯೋಜನೆಯ ನವೆಂಬರ್ ತಿಂಗಳ ಸಹಾಯ ಹಸ್ತ ಕಾರ್ಯಕ್ರಮವು ದಿ. 22 ರಂದು ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಜೈ ಕುಂದಾಪ್ರ ಸೇವಾ ಸಂಸ್ಥೆಯ ಸದಸ್ಯರೆಲ್ಲರು ಒಟ್ಟಾಗಿ ಸಂಗ್ರಹಿಸಿದ ಹಣವನ್ನು ಸಂಸ್ಥೆಯ ತುರ್ತು ಯೋಜನೆಯ ಫಲಾನುಭವಿಗಳಾದ ಕುಂದಾಪುರ ಕೋಣಿ ಸಮೀಪದ ಕಟ್ಕೇರಿ ಗ್ರಾಮದ ಸುರೇಶ್ ಮೊಗವೀರ ಎನ್ನುವ 48 ವರ್ಷ ಪ್ರಾಯದ ಇವರು ಕಟ್ಟಡದ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಕುಟುಂಬದ ತನ್ನ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತಿದ್ದರು. ಆದರೆ ವಿಧಿಯ ಕ್ರೂರ ಅಟ್ಟಹಾಸಕ್ಕೆ ಇವರು ಕೆಲಸದ ಸಮಯದಲ್ಲಿ ಆಯಾ ತಪ್ಪಿ ಬಿದ್ದು ಬೆನ್ನು ಹುರಿ ಮುರಿದು ಹೋಗಿದ್ದು ಹಾಸಿಗೆ ಹಿಡಿದಿದ್ದಾರೆ.
ಸುರೇಶ್ ಮೊಗವೀರ ಅವರ ಹೆಚ್ಚಿನ ಚಿಕಿತ್ಸೆಗಾಗಿ ಮತ್ತು ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ವತಿಯಿಂದ ರೂ.10,000/- ಚೆಕ್ ಅನ್ನು ನ. 22 ರಂದು ಬುಧವಾರ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.)ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಪುಂಡಲೀಕ್ ಮೊಗವೀರ ತೆಕ್ಕಟ್ಟೆ, ಡಾ. ರಾಜೇಶ್ ಮಿತ್ರ ಕ್ಲಿನಿಕ್ ಕೋಟೇಶ್ವರ, ರಥ ಶಿಲ್ಪಿ ರಾಜ್ ಗೋಪಾಲ್ ಆಚಾರ್ಯ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದಿವ್ಯ ಕುಂದಾಪುರ, ಮನೀಶ್ ಕುಲಾಲ್ ಜನ್ನಾಡಿ, ಕೋಟ ಸಂತು, ಸುಧೀರ್ ಕುಂದಾಪುರ, ಆಕಾಶ್ ಕೊರವಡಿ, ಭಾಸ್ಕರ್ ಹಳೆ ಅಳಿವೆ, ಸುಮತಿ ಕೋಣಿ, ಭಾಸ್ಕರ್ ಅರಾಲ್ ಗುಡ್ಡೆ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಖಾಲಿ ಇರುವ ಜೊತೆ ಕಾರ್ಯದರ್ಶಿ ಹುದ್ದೆಗೆ ಕೋಟ ಸಂತು ಮತ್ತು ಮನೀಶ್ ಕುಲಾಲ್ ಅವರನ್ನು ಮುಂದಿನ ಅವಧಿಯ ವರೆಗೆ ಜೊತೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
Leave a Reply