News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ನಾಟಕ ಬ್ಯಾಂಕ್ ಕುಂದಾಪುರ ಶಾಖೆಯ ನವೀಕೃತ ಪ್ರಾಂಗಣ ಮತ್ತು ಎಟಿಎಂ ಮಿನಿ ಈ- ಲಾಬಿಯ ಉದ್ಘಾಟನಾ ಸಮಾರಂಭ

ಕರ್ನಾಟಕ ಬ್ಯಾಂಕ್ ಕುಂದಾಪುರ ಶಾಖೆಯ ನವೀಕೃತ ಪ್ರಾಂಗಣ ಮತ್ತು ಎಟಿಎಂ ಮಿನಿ ಈ- ಲಾಬಿಯ ಉದ್ಘಾಟನಾ ಸಮಾರಂಭವು ನವೆಂಬರ್ 24ರಂದು ಜರಗಿತು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಚೀಫ್ ಬಿಸಿನೆಸ್ ಆಫೀಸರ್ ಗೋಕುಲ್ ದಾಸ್, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬ್ಯಾಂಕಿನ ಮಾಜಿ ನಿರ್ದೇಶಕ ಡಾ। ಹೆಚ್ ರಾಮ್ ಮೋಹನ್, ಉಡುಪಿ ವಲಯದ ಸಹಾಯಕ ಮಹಾಪ್ರಬಂಧಕ ರಾಜಗೋಪಾಲ್ ಬಿ., ವೇದಮೂರ್ತಿ ಬಾಲಚಂದ್ರ ಭಟ್, ಉದ್ಯಮಿಗಳಾದ ಆನಂದ ಸಿ. ಕುಂದರ್, ಸೀತಾರಾಮ ನಗತ್ತಾಯ, ಬ್ಯಾಂಕಿನ ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಶಾಖೆಯ ಕಟ್ಟಡದ ಮಾಲೀಕರಾದ ಗಣೇಶ್ ಹಲ್ಸನಾಡು ರವರನ್ನು ಬ್ಯಾಂಕಿನ ವತಿಯಿಂದ ಅಭಿನಂದಿಸಲಾಯಿತು. ಉಡುಪಿ ವಲಯದ ಮುಖ್ಯ ಪ್ರಬಂಧಕ ವಿ ವಿ ಚಕ್ರಪಾಣಿ ನಿರೂಪಿಸಿದರು. ಕುಂದಾಪುರ ಶಾಖೆಯ ಹಿರಿಯ ಪ್ರಬಂಧಕ ಶರತ್ ವಂದಿಸಿದರು.

Leave a Reply

Your email address will not be published. Required fields are marked *