ಸರಿಸುಮಾರು ಒಂದು ವಾರದಿಂದ ಸರ್ಕಾರಿ ಜಮೀನಿನ ಸರ್ವೆ ನಂ. 83ನಲ್ಲಿ ಅಕ್ರಮ ಭೂ ಗಣಿಗಾರಿಕೆ ಹರ್ಕೂರು ಗ್ರಾಮ, ಚಿತ್ತೂರು, ಕುಂದಾಪುರ ಎಂಬಲ್ಲಿ ಶಿವರಾಮ ಶೆಟ್ಟಿ ಮತ್ತು ಸತೀಶ್ ಪೂಜಾರಿ ಅಕ್ರಮವಾಗಿ ಕೆಂಪು ಮಣ್ಣನ್ನು ಸಾಗಿಸುತ್ತಿದ್ದು, ಇದಕ್ಕೆ R. I ವಂಡ್ಸೆ ರಾಘವೇಂದ್ರ ಮತ್ತು V.A ಆಶಿಕ್ ಸಾಥ್ ನೀಡಿದ್ದಾರೆ, ಅಧಿಕಾರಿಗಳ ಬೆಂಬಲದಿಂದಲೇ ಇದು ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಕೃಪಾಪೋಷಿತ ಅಕ್ರಮ ಗಣಿಗಾರಿಕೆಯಿಂದ ಬೇಸತ್ತು ಸಾರ್ವಜನಿಕರು ಎಷ್ಟೇ ದೂರು ನೀಡಿದರು ಇಬ್ಬರು ಅಧಿಕಾರಿಗಳು ಕಣ್ಣು ಮುಚ್ಚಾಲೆ ಆಟವನ್ನು ಆಡುತ್ತಿದ್ದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ. ಇಂದು ಬೆಳ್ಳಂಬೆಳಗ್ಗೆ ಮತ್ತೆ ಗಣಿಗಾರಿಕೆ ಮಾಡುತ್ತಿರುವ ವಿಡಿಯೋ, ಫೋಟೋವನ್ನು ಮಾಧ್ಯಮಕ್ಕೆ ನೀಡಿದರು.

ಸಾರ್ವಜನಿಕರ ದೂರಿನ ಅನ್ವಯ ಮಾಧ್ಯಮದವರು V .A ಆಶಿಕ್ ರನ್ನು ಪಶ್ನೆ ಮಾಡಿತ್ತು. ಮೇಲಿಂದ ಮೇಲೆ ಸಾರ್ವಜನಿಕರು ದೂರು ನೀಡಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಏಕೆ? ಅದಕ್ಕೆ V. A ಕಳೆದ 2 ದಿನಗಳ ಹಿಂದೆಯೇ ಅವರಿಗೆ ಎಚ್ಚರಿಕೆ ನೀಡಿದ್ದೇನೆ, ನನ್ನ ಗಮನದಲ್ಲಿ ಇದೆ. ಹಾಗಿದಲ್ಲಿ ಅವರ JCB, ಟಿಪ್ಪರ್ ಅನ್ನು ಜಪ್ತಿ ಮಾಡಿ ಸರಕಾರಿ ಸ್ವತ್ತನ್ನ ಹಾನಿ ಮಾಡಿದ ಪ್ರಕರಣ ದಾಖಲು ಮಾಡಿಲ್ಲ ಏಕೆ ಹೇಳಿದರೆ ಅವರ ಬಲಿ ಉತ್ತರವಿಲ್ಲ. R.I & V.A ತಪ್ಪಿದಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಎಫ್ ಐ.ಆರ್ ಮಾಡಿಲ್ಲ, ಸರ್ಕಾರಿ ಆಸ್ತಿ ಹಾನಿ, Jcb ಮತ್ತು ಟಿಪ್ಪರ್ ವಶ ಪಡೆದಿಲ್ಲ ಅಂದರೆ ಮೇಲ್ನೋಟಕ್ಕೆ ಇವರಿಗೆ ಸಲ್ಲ ಬೇಕಾದ ಕಪ್ಪ ಕಾಣಿಕೆ ಬಂದಿದೆ ಎಂದರ್ಥ. ಅಧಿಕಾರಿಗಳು ತಹಸೀಲ್ದಾರ್ ಗಮನಕ್ಕೆ ತರದೇ ಇದ್ದಿದ್ದು ಯಾಕೆ? ಸಾರ್ವಜನಿಕರು ಹೇಳುವಂತೆ ಡೀಲ್ ನಡೆದಿದ್ದೆಯ್?

ಜಿಲ್ಲಾಡಳಿತ, ಕುಂದಾಪುರ A.C ಮತ್ತು ತಹಸೀಲ್ದಾರ್ ಶಿವರಾಮ್ ಶೆಟ್ಟಿ ಮತ್ತು ಸತೀಶ್ ಪೂಜಾರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಅಲ್ಲದೇ ಇಬ್ಬರು ಅಧಿಕಾರಿಗಳ ಮೇಲೆ ಕರ್ತವ್ಯ ನಿರ್ಲಕ್ಷ್ಯತನ, ಅಧಿಕಾರ ದುರ್ಬಳಕೆ ಅನ್ವಯ ಇವರ ಮೇಲೆ ಡಿಪಾರ್ಟ್ಮೆಂಟಲ್ ಎಂಕ್ವಿರಿ ಮಾಡಿದ್ದಾರೆ ಸತ್ಯ ಹೋರ ಬರುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಅಧಿಕಾರಿಗಳು ಅಕ್ರಮ ಗಣಿಗಾರಿಕೆಯನ್ನು ಬೆಂಬಲಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಂದು ಸಹ R.I ಮತ್ತು V.A ಗೆ ಹಲವಾರು ಕರೆಗಳು ಬಂದರೂ ಅಧಿಕಾರಿಗಳಿಂದ ಸರಿಯಾದ ಕ್ರಮವಿಲ್ಲ. ಬೇಜವಾಬ್ದಾರಿ ಉತ್ತರ. ಸಾರ್ವಜನಿಕರು ಗಂಗೊಳ್ಳಿ ಠಾಣೆ ಮತ್ತು ಗಣಿ ಇಲಾಖೆಗೆ ದೂರು ನೀಡಿದ್ದಾರೆ. ಜಿಲ್ಲಾಡಳಿತ ಮತ್ತು ಸಂಬಂಧ ಪಟ್ಟ ಇಲಾಖೆ ತಪ್ಪಿದಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಅಗ್ರಹಿಸಿದ್ದಾರೆ.