
ಕೋಟ: ಶಿಕ್ಷಣ ಕ್ಷೇತ್ರದಲ್ಲಿ ಕೋಟ ವಿವೇಕ ವಿದ್ಯಾಸಂಸ್ಥೆಯ ಹೆಸರು ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ಮಾಡಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸೋಮವಾರ ಕೋಟ ವಿವೇಕ ವಿದ್ಯಾಸಂಸ್ಥೆಯ ಅಮೃತಮಹೋತ್ಸವದ ಹಿನ್ನಲ್ಲೆಯಲ್ಲಿ ಸಂಸ್ಥೆಯ ಮುಖ್ಯ ಮಹಾಮದ್ವಾರದ ಕೆ.ಎಲ್ ಕಾರಂತ ಸ್ವಾಗತ ಗೋಪುರವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಾಧನೆ ಅಗಾಧ,ಇಂಥಹ ಸಂಸ್ಥೆ ಅಮೃತಹೋತ್ಸವ ಆಚರಿಸಿಕೊಳ್ಳುತ್ತಿರುವುದು ಕೋಟದ ಪರಿಸರವಾದಿ ಕಾರಂತರ ಹೆಸರಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ಮಾಡಿದೆ.ಶಿಕ್ಷಣದ ಗುಣಮಟ್ಟದಲ್ಲಿ ವಿವೇಕ ವಿದ್ಯಾಸಂಸ್ಥೆ ತನ್ನ ನೈಜತೆಯನ್ನು ಪ್ರದರ್ಶಿಸಿ ರಾಜ್ಯ ರಾಷ್ಟ ಅಂತರಾಷ್ಟಿçÃಯ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ವಿವೇಕ ವಿದ್ಯಾಸಂಘದ ಅಧ್ಯಕ್ಷ ಸಿ.ಎ ಪಿ.ಪ್ರಭಾಕರ ಮಯ್ಯ,ಕಾರ್ಯದರ್ಶಿ ರಾಮದೇವ ಐತಾಳ್,ವಿದ್ಯಾಸಂಘದ ಪ್ರಮುಖರಾದ ಪಿ.ಮುಂಜುನಾಥ ಉಪಾಧ್ಯಾ,ವಿವೇಕ ವಿದ್ಯಾಸಂಸ್ಥೆಯ ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ್ ಭಟ್,ವಿವೇಕ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನಾಗೇಶ್ ಶ್ಯಾನುಭಾಗ್,ವಿವೇಕ ವಿದ್ಯಾಸಂಸ್ಥೆ ವಿವಿಧ ವಿಭಾಗದ ಮುಖ್ಯ ಶಿಕ್ಷಕರಾದ ಭಾಸ್ಕರ್ ಆಚಾರ್ಯ,ವೆಂಕಟೇಶ ಉಡುಪ, ಗುತ್ತಿಗೆದಾರ ಎಂ.ಸುಬ್ರಾಯ ಆಚಾರ್,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾಸಂಸ್ಥೆ ಪ್ರಾಂಶುಪಾಲ ಕೆ.ಜಗದೀಶ ನಾವಡ ಸ್ವಾಗತಿಸಿದರೆ,ವಿವೇಕ ಬಾಲಕೀಯರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಹೊಳ್ಳ ವಂದಿಸಿದರು.
ಕೋಟ ವಿವೇಕ ವಿದ್ಯಾಸಂಸ್ಥೆಯ ಅಮೃತಮಹೋತ್ಸವದ ಹಿನ್ನಲ್ಲೆಯಲ್ಲಿ ಸಂಸ್ಥೆಯ ಮುಖ್ಯ ಮಹಾಮದ್ವಾರದ ಕೆ.ಎಲ್ ಕಾರಂತ ಸ್ವಾಗತಗೋಪುರವನ್ನು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ವಿವೇಕ ವಿದ್ಯಾಸಂಘದ ಅಧ್ಯಕ್ಷ ಸಿ.ಎ ಪಿ.ಪ್ರಭಾಕರ ಮಯ್ಯ,ಕಾರ್ಯದರ್ಶಿ ರಾಮದೇವ ಐತಾಳ್, ವಿದ್ಯಾಸಂಸ್ಥೆ ಪ್ರಾಂಶುಪಾಲ ಕೆ.ಜಗದೀಶ ನಾವಡ ಮತ್ತಿತರರು ಇದ್ದರು.
Leave a Reply