
ಕೋಟ: ವಿಕಸಿತ ಭಾರತ್ ಸಂಕಲ್ಪ ಯಾತ್ರೆ ರಥವು ಮಾಹಿತಿ ಶಿಕ್ಷಣ ಮತ್ತು ಸಂವಹನ ಸಾಮಾಗ್ರಿಯೊಂದಿಗೆ ಐರೋಡಿ ಗ್ರಾಮ ಪಂಚಾಯತ್‌ಗೆ ಇತ್ತೀಚಿಗೆ ಭೇಟಿ ನೀಡಿತು. ಕಾರ್ಯಕ್ರಮವನ್ನು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪಂಚಾಯತ್ ಅಧ್ಯಕ್ಷೆ ಸಕ್ಕು, ಉಪಾಧ್ಯಕ್ಷೆ ಗೀತಾ ಶೆಟ್ಟಿ, ಉಡುಪಿ ಲೀಡ್ ಬ್ಯಾಂಕ್ ಪ್ರಭಂದಕ ಪಿ.ಎಮ್ ಪಿಂಜಾರ್, ಕೆನರಾ ಬ್ಯಾಂಕ್ ಆರ್.ಓ. ಉಡುಪಿ ಡಿವಿಜನಲ್ ಮ್ಯಾನೇಜರ್ ಸಂದರ್ ಸಿಂಗ್, ಕೆ.ವಿ.ಕೆ. ಬ್ರಹ್ಮಾವರ ಇದರ ವಿಜ್ಞಾನಿ ಡಾ. ಧನಂಜಯ್ , ನಬಾರ್ಡ್ ಡಿಡಿಎಮ್ ಸಂಗೀತ ಕರ್ತ, ಪಿ.ಎಮ್ ಆಯುಷ್ಮಾನ್‌ಸ್ಟೇಟ್ ನೋಡೆಲ್ ಡಾ.ಆಯಿಷಾ, ಹಂಗಾರಕಟ್ಟೆ ಕೆನರಾ ಬ್ಯಾಂಕ್ ಶಾಖಾ ಪ್ರಭಂಧಕಿ ಭಾನುತೇಜ, ಎಫ್‌ಎಲ್‌ಸಿ ಉಡುಪಿ ಇದರ ಸಂಯೋಜಕಿ ಮೀರಾ.ಪಿ ಉಪಸ್ಥಿರಿದ್ದರು.
ಪಂಚಾಯತ್ ಕಾರ್ಯದರ್ಶಿ ಸುಮತಿ , ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿಯವರು ಮತ್ತು ಪ್ರಾಥಮಿಕ ಆರೋಗ್ಯಕೇಂದ್ರದ ಸಿಬ್ಬಂದಿಯವರು ಮತ್ತು ಗ್ರಾಮಸ್ಥರು ಹಾಜರಿದ್ದರು.
ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಜನರಿಗೆ ಸಿಗುವ ಕಿಸಾನ್ ಯೋಜನೆ, ಆಯುಷ್ಮಾನ್ ಯೋಜನೆ, ಸಂಜೀವಿನಿ ಸಂಘಗಳಿAದ ಸಿಗುವ ಸಾಲಸೌಲಭ್ಯಗಳ ಬಗ್ಗೆ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಗ್ರಾಮಸ್ಥರು ಈ ಎಲ್ಲಾ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿಕಸಿತ ಭಾರತ್ ಸಂಕಲ್ಪ ಯಾತ್ರೆ ರಥವು ಮಾಹಿತಿ ಶಿಕ್ಷಣ ಮತ್ತು ಸಂವಹನ ಸಾಮಾಗ್ರಿಯೊಂದಿಗೆ ಐರೋಡಿ ಗ್ರಾಮ ಪಂಚಾಯತ್‌ಗೆ ಇತ್ತೀಚಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪಂಚಾಯತ್ ಅಧ್ಯಕ್ಷೆ ಸಕ್ಕು, ಉಪಾಧ್ಯಕ್ಷೆ ಗೀತಾ ಶೆಟ್ಟಿ, ಉಡುಪಿ ಲೀಡ್ ಬ್ಯಾಂಕ್ ಪ್ರಭಂದಕ ಪಿ.ಎಮ್ ಪಿಂಜಾರ್ ಇದ್ದರು.
Leave a Reply