
ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ನ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಶುಕ್ರವಾರ ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಗ್ರಾಮಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ವಹಿಸಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ ಜಯರಾಮ ಶೆಟ್ಟಿ, ಕೃಷಿಕರಾದ ಪದ್ದು ಪೂಜಾರಿ, ಲಕ್ಷ್ಮಿ ಪೂಜಾರಿ, ವಿಶೇಷ ಚೇತನ ಸಾಧಕಿ ಶಾರದ, ಈಜು ಪಟು ವಿಖ್ಯಾತ್ ಹೇರ್ಳೆ, ರಂಗಕರ್ಮಿ ಸುಧಾ ಮಣೂರು, ಕ್ರೀಡಾ ಸಾಧಕಿ ಸಂಜನಾ ಆಚಾರ್ ಇವರುಗಳನ್ನು ಸನ್ಮಾನಿಸಲಾಯಿತು.
ಈ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳಾದ ಕೋಟ ಸುಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಾಧವ್ ಪೈ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಮಿನಾಕ್ಷಿ,ಕೋಟ ಪೋಲಿಸ್ ಠಾಣೆಯ ಸಿಬ್ಬಂದಿ ಅಶ್ವಿನಿ ಮಾಹಿತಿ ನೀಡಿದರು. ನಿವೃತ್ತ ಶಿಕ್ಷಕಿ ತಿಲೋತ್ತಮೆ ನಾಯಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಹಿಳೆ ಹಾಗೂ ಮಕ್ಕಳ ಹಕ್ಕು ಅದರ ಕಾನೂನುಗಳ ಬಗ್ಗೆ ಮೊಬೈಲ್ ನಿಂದಾಗುವ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು
ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ಉಪಸ್ಥಿತರಿದ್ದರು.ಸನ್ಮಾನ ಪತ್ರವನ್ನು ಪಂಚಾಯತ್ ಸದಸ್ಯರು ವಾಚಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಸ್ವಾಗತಿಸಿದರು. ಗ್ರಾಮಸಭೆಯನ್ನು ಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ ನಿರೂಪಿಸಿದರು. ಕೋಟದ ಮೂಡುಗಿಳಿಯಾರು ಶಾಲೆಯ ವಿದ್ಯಾರ್ಥಿಗಳು ,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಕೋಟ ಗ್ರಾಮಪಂಚಾಯತ್ ನ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ ಜಯರಾಮ ಶೆಟ್ಟಿ, ಕೃಷಿಕರಾದ ಪದ್ದು ಪೂಜಾರಿ, ಲಕ್ಷ್ಮಿ ಪೂಜಾರಿ, ವಿಶೇಷ ಚೇತನ ಸಾಧಕಿ ಶಾರದ, ಈಜು ಪಟು ವಿಖ್ಯಾತ್ ಹೇರ್ಳೆ, ರಂಗಕರ್ಮಿ ಸುಧಾ ಮಣೂರು, ಕ್ರೀಡಾ ಸಾಧಕಿ ಸಂಜನಾ ಆಚಾರ್ ಇವರುಗಳನ್ನು ಸನ್ಮಾನಿಸಲಾಯಿತು.
Leave a Reply