
ಕೋಟದ ಪಡುಕರೆ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸೃಜನಶೀಲತೆಯ ಒರೆಗೆ ಹಚ್ಚಿದ ವಿಭಿನ್ನ ಸ್ಪರ್ಧೆಗಳು.
ಕೋಟ: ವಿದ್ಯಾರ್ಥಿಗಳ ಮನಸ್ಸು ಶೋಧಕ ಪ್ರವೃತ್ತಿಯದ್ದು. ಸಹಜವಾಗಿಯೇ ಹೊಸ ಸವಾಲುಗಳಿಗೆ ಮುಖಾಮುಖಿಯಾಗುವ, ವಿಭಿನ್ನ ಕಲಿಕಾ ಅನುಭವಗಳನ್ನು ಪಡೆಯುವ ಅವಕಾಶಗಳಿಗಾಗಿ ಕುತೂಹಲಿಯಾಗಿರುತ್ತದೆ. ಹೀಗಾಗಿಯೇ
ನಗು, ಸಂತೋಷ ಹಾಗೂ ಉತ್ಸಾಹಗಳೇ ಮನೆ ಮಾಡಿರುವ, ಜೊತೆಯಾಗಿ ಗುಂಪಿನಲ್ಲಿ ಕಲೆತು ಕಲಿಯುವ, ತಪುö್ಪಗಳನ್ನು ಮಾಡಲು ಮುಕ್ತ ಸ್ವಾತಂತ್ರ÷್ಯವಿರುವ, ಅಲ್ಲದೇ ತಮ್ಮದೇ ಕಲ್ಪನೆಯ ಹೊಸ ಶೋಧಗಳನ್ನು ನಡೆಸಲು ಅವಕಾಶವಿರುವ ಕ್ಲಾಸೊಂದರ ಕನಸನ್ನು ವಿದ್ಯಾರ್ಥಿಗಳು ಕಾಣುವುದು ಸಹಜ.

ಇಂತಹ ಕನಸಿನ ತರಗತಿಯೊಂದು ಎರಡು ವಿಭಿನ್ನ ಸೃಜನಶೀಲ ಸ್ಪರ್ಧೆಗಳ ರೂಪದಲ್ಲಿ ಸಾಕಾರಗೊಂಡದ್ದು ಕೋಟದ ಮಣೂರು ಪಡುಕರೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬೆಂಕಿಯಿಲ್ಲದ ಅಡುಗೆ :
ವಿದ್ಯಾರ್ಥಿಗಳ ಅಡುಗೆ ಪ್ರೀತಿ ವ್ಯಕ್ತಗೊಂಡದ್ದು ವಿವಿಧ ಬಣ್ಣ, ರುಚಿ ಹಾಗೂ ಪರಿಮಳಗಳಿಂದ ಮಿಳಿತವಾದ ಆಕರ್ಷಕ ಖಾದ್ಯಗಳ ರೂಪದಲ್ಲಿ.ತರಕಾರಿ ಹಾಗೂ ಹಣ್ಣುಗಳ ಸಲಾಡ್, ಮೊಳಕೆ ಜ್ಯೂಸ್, ಬಿಸ್ಕಿಟ್ ಕೇಕ್, ತರಕಾರಿ ಮತ್ತು ಹಣ್ಣುಗಳ ಬಗೆಬಗೆಯ ಜ್ಯೂಸ್‌ಗಳು, ಮಿಲ್ಕ್ಶೇಕ್‌ಗಳು, ಮುಂಡಕ್ಕಿ ಚರಮುರಿ, ಲಿಂಬು ಸೋಡಾ, ಚಾಟ್‌ಗಳು, ರಸಾಯನ ಹೀಗೆ ಪೌಷ್ಟಿಕಾಂಶಯುಕ್ತವೂ, ಆಕರ್ಷಕವೂ ಆದ ಐವತ್ತಕ್ಕೂ ಮಿಕ್ಕಿ ಖಾದ್ಯಗಳ ಪ್ರದರ್ಶನವಿತ್ತು. ಆಹಾರ ಪದಾರ್ಥಗಳು ಆಕರ್ಷಕವಾಗಿ ಕಾಣಲು ಹಿನ್ನೆಲೆಯಾಗಿ ಬಳಸಿದ ಕಡು ಹಸಿರು ಬಣ್ಣದ ಎಲೆಗಳು, ಖಾದ್ಯಗಳ ಪಟ್ಟಿಯಿರುವ ಮೆನು ಕಾರ್ಡ್ ಹಾಗೂ ಆ ಯುವ ಬಾಣಸಿಗರು ಧರಿಸಿದ ಶೆಫ್ ಹ್ಯಾಟ್‌ಗಳು ಪ್ರದರ್ಶನದ ವಿಶೇಷತೆಯಾಗಿತ್ತು.

ಒಟ್ಟಾರೆಯಾಗಿ ಮಾನವ ನಾಗರಿಕತೆಯ ಪ್ರಾಚೀನ ಕೌಶಲಗಳಲ್ಲಿ ಒಂದಾದ ಹಾಗೂ ಬೆಂಕಿಯ ಅನ್ವೇಷಣೆಯೊಂದಿಗೆ ವಿಕಸನಗೊಳ್ಳುತ್ತಾ ಸಾಗಿದ ಅಡುಗೆ ಕಲೆಯ ಕೆಲವು ಮೂಲಭೂತ ಅಂಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಿರು ಪ್ರಯತ್ನ ಈ ಕಾರ್ಯಕ್ರಮದ ಮೂಲಕ ನಡೆಯಿತು.
ಪ್ಲಾಸ್ಟಿಕ್ ತ್ಯಾಜ್ಯದಿಂದ ಕರಕುಶಲ ಕಲೆ:
ತ್ಯಾಜ್ಯವೆಂದು ಎಸೆವ ಪ್ಲಾಸ್ಟಿಕ್ ಬಾಟಲಿ, ಬ್ಯಾಗ್, ಸ್ಟಾç ಮುಂತಾದುವನ್ನು ಕಚ್ಚಾವಸ್ತುಗಳಾಗಿ ಬಳಸಿಕೊಂಡು ಅವುಗಳಿಗೆ ಕಲಾತ್ಮಕ ರೂಪ ನೀಡಿದ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಪರಿಸರ ಪ್ರೀತಿ ಗಮನಾರ್ಹವಾಗಿತ್ತು.
ಹೂ ಕುಂಡಗಳು, ಸೈಕಲ್, ಮನೆ, ಪೆನ್‌ಸ್ಟಾ÷್ಯಂಡ್, ಜೆಲ್ಲಿ ಫಿಶ್, ಬಣ್ಣ ಬಣ್ಣದ ಹೂಗಳು ಮುಂತಾದ ಕಣ್ಮನ ಸೆಳೆಯುವ ಕರ ಕುಶಲ ವಸ್ತುಗಳನ್ನು ತಯಾರಿಸಿದ್ದರು.ಈ ಕಾರ್ಯದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ ಆಡಳಿತ ಮಂಡಳಿ ಸಾಥ್ ನೀಡಿತು.
ಮಣೂರು ಪಡುಕರೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೃಜನಶೀಲತೆಯ ಒರೆಗೆ ಹಚ್ಚಿದ ವಿಭಿನ್ನ ಸ್ಪರ್ಧೆಗಳು ಗಮನ ಸೆಳೆದವು.
ಅಡುಗೆ ಎಂಬುದು ಕಲೆ ಮತ್ತು ವಿಜ್ಞಾನ ಎಂಬುದನ್ನು ಈ ಸ್ಪರ್ಧೆಯು ಮನವರಿಕೆ ಮಾಡಿಕೊಟ್ಟಿತು. ನಮ್ಮ ತಟ್ಟೆಗೆ ಬರುವ ಆಹಾರ ತಯಾರಿಯ ಹಿಂದಿರುವ ಶ್ರಮದ ಪರಿಚಯವಾಯಿತು.

Leave a Reply