
ಮಣೂರು- ಪದವಿಪೂರ್ವ ಕಾಲೇಜಿಗೆ ಗೀತಾನಂದ ಫೌಂಡೇಶನ್ ಶೌಚಾಲಯ ಕೊಡುಗೆ
ಕೋಟ: ಇಲ್ಲಿನ ಮಣೂರು ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜು ಇಲ್ಲಿಗೆ ಗೀತಾನಂದ ಫೌಂಡೇಶನ್ ವತಿಯಿಂದ ಸುಮಾರು ೪ ಲಕ್ಷ ರೂಗಳ ಅಂದಾಜು ವೆಚ್ಚದಲ್ಲಿ ೧೮ ಕೋಣೆಗಳುಳ್ಳ ಶೌಚಾಲಯವನ್ನು ಕೊಡುಗೆಯಾಗಿ ನೀಡಿದ್ದು ಇದನ್ನು ಶನಿವಾರ ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.
ಈ ವೇಳೆ ಗೀತಾನಂದ ಫೌಂಡೇಶನ್ ಸಾಮಾಜಿಕ ಕ್ಷೇತ್ರದ ಕೊಡುಗೆಗಳನ್ನು ಶಾಸಕರು ಸ್ಮರಿಸಿದರು.
ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ,ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಾ,ಲ.ಸೋ ಬ.ಸ.ಪ್ರ ಕಾಲೇಜಿನ ಪ್ರಾಂಶುಪಾಲೆ ಡಾ.ಸುನಿತಾ , ಶಿಕ್ಷಕ ಸತ್ಯನಾರಾಯಣ ತೆಕ್ಕಟ್ಟೆ, ಕುಂದಗನ್ನಡದ ರಾಯಬಾರಿ ಮನು ಹಂದಾಡಿ, ಪದವಿಪೂರ್ವ ಕಾಲೇಜಿನ ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ ಶೆಟ್ಟಿ , ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಹೆಚ್ ಕುಂದರ್ , ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ನಿರಂಜನ್ ನಾಯಕ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಂಜುನಾಥ್ ಹೊಳ್ಳ,ಗೀತಾನಂದ ಟ್ರಸ್ಟ್ನ ವೈಷ್ಣವಿ ರಕ್ಷಿತ್ ಕುಂದರ್,ಗೀತಾನAದದ ಸಮಾಜ ಸೇವಾ ವಿಭಾಗದ ರವಿಕಿರಣ್ ಕೋಟ ಮತ್ತಿತರರು ಇದ್ದರು.
ಮಣೂರು ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜು ಇಲ್ಲಿಗೆ ಗೀತಾನಂದ ಫೌಂಡೇಶನ್ ವತಿಯಿಂದ ಸುಮಾರು ೪ ಲಕ್ಷ ಅಂದಾಜು ಅನುದಾನದಡಿ ೧೮ ಕೋಣೆಗಳುಳ್ಳ ಶೌಚಾಲಯವನ್ನು ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ,ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಾ,ಲ.ಸೋ ಬ.ಸ.ಪ್ರ ಕಾಲೇಜಿನ ಪ್ರಾಂಶುಪಾಲೆ ಡಾ.ಸುನಿತಾ ಮತ್ತಿತರರು ಇದ್ದರು.
Leave a Reply