News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಯಕ್ಷಗಾನದ ಮೂಲಕ ಅಶಕ್ತರಿಗೆ ನೆರವು ಶ್ಲಾಘನೀಯ- ಡಾ.ವಿಷ್ಣುಮೂರ್ತಿ ಐತಾಳ್

ಕೋಟ: ಯಕ್ಷಗಾನದ ಮೂಲಕ ಅಶಕ್ತರಿಗೆ ಮಿಡಿಯುವ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಬೆಂಗಳೂರಿನ ಶೇಖರ್ ಆಸ್ಪತ್ರೆಯ ಮುಖ್ಯಸ್ಥ ಡಾ.ಪಿ ವಿಷ್ಣುಮೂರ್ತಿ ಐತಾಳ್ ನುಡಿದರು.

ಸಾಲಿಗ್ರಾಮದ ಪಾರಂಪಳ್ಳಿ ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಆಶ್ರಯದಲ್ಲಿ ಅಶಕ್ತರಿಗಾಗಿ ನಡೆಸಿದ ಯಕ್ಷಗಾನ ಕಾರ್ಯಕ್ರಮದಲ್ಲಿ ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಪುರಸ್ಕಾರ ಸ್ವೀಕರಿಸಿ ಮಾತನಾಡಿ ಸಂಘಟನೆಗಳು ಕಲೆಯನ್ನು ಆರಾಧಿಸುವ ಜತೆಗೆ ಸಾಮಾಜಿಕ ಪ್ರಜ್ಞೆ ಪ್ರದರ್ಶಿಸುವುತ್ತಿರುವುದು ಅಭಿನಂದನೀಯ ಇಂಥಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿದೆ ಎಂದು ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಪಾರಂಪಳ್ಳಿ ಅಧ್ಯಕ್ಷ ಗಿರೀಶ್ ಪೂಜಾರಿ ವಹಿಸಿದ್ದರು.
ಇದೇ ವೇಳೆ ಶೇಖರ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಷ್ಣುಮೂರ್ತಿ ಐತಾಳ್ ,ಹಾಗೂ ಕೆ.ಎಂ ಸಿ ಮಂಗಳೂರು ಇಲ್ಲಿನ ವೈದ್ಯರಾದ ಡಾ.ಮಧುಸೂದನ್ ಉಪಾಧ್ಯಾ ,ಲಿಮ್ಕಾ ದಾಖಲೆಯ ಈಜುಪಟು ಗೋಪಾಲ್ ಕಾರ್ವಿ ಇವರುಗಳಿಗೆ ಪುರಸ್ಕಾರ ನೀಡಿಗೌರವಿತು.ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಯಿತು.

ಇದೇ ವೇಳೆ ಕ್ಲಬ್‌ನ ವತಿಯಿಂದ ನಾಲ್ವರು ಅಶಕ್ತ ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಸುಮಾರು 1ಲಕ್ಷ ರೂ ಆರ್ಥಿಕ ಸಹಾಯ ನೀಡಲಾಯಿತು. ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪ.ಪಂ ಸದಸ್ಯೆ ರೇಖಾ ಕೇಶವ ಕರ್ಕೇರ,ಕೋಟ ವಿವೇಕ ವಿದ್ಯಾ ಸಂಘದ ಉಪಾಧ್ಯಕ್ಷ ಶ್ರೀಧರ ಉಪಾಧ್ಯಾ, ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರಾಜೇಶ್ ಉಪಾಧ್ಯಾ, ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಕಾರ್ಯದರ್ಶಿ ಸುಧಾಕರ್ ಪೂಜಾರಿ,ಸದಸ್ಯರಾದ ಕೃಷ್ಣ ದೇವಾಡಿಗ ಮತ್ತಿತರರು ಇದ್ದರು.ಕಾರ್ಯಕ್ರಮವನ್ನು ಮಂಜುನಾಥ್ ಗುಂಡ್ಮಿ ಸ್ವಾಗತಿಸಿ ನಿರೂಪಿಸಿದರು. ನಂತರ ಪೇರ್ಡೂರು ಮೇಳದವರಿಂದ ಗಂಗೆ ತುಂಗೆ ಕಾವೇರಿ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

ಸಾಲಿಗ್ರಾಮದ ಪಾರಂಪಳ್ಳಿ ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಆಶ್ರಯದಲ್ಲಿ ಅಶಕ್ತರಿಗಾಗಿ ನಡೆಸಿದ ಯಕ್ಷಗಾನ ಕಾರ್ಯಕ್ರಮದಲ್ಲಿ ಶೇಖರ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಷ್ಣುಮೂರ್ತಿ ಐತಾಳ್ ,ಹಾಗೂ ಕೆ.ಎಂ ಸಿ ಮಂಗಳೂರು ಇಲ್ಲಿನ ವೈದ್ಯರಾದ ಡಾ.ಮಧುಸೂದನ್ ಉಪಾಧ್ಯಾ ,ಲಿಮ್ಕಾ ದಾಖಲೆಯ ಈಜುಪಟು ಗೋಪಾಲ್ ಕಾರ್ವಿ ಇವರುಗಳಿಗೆ ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಪುರಸ್ಕಾರ ನೀಡಿಗೌರವಿತು.

Leave a Reply

Your email address will not be published. Required fields are marked *