
ಕೋಟ: ಯಕ್ಷಲೋಕದ ಗಾನದೇವತೆಯ ನೆನಪಿನಲ್ಲಿ ಕಲಾಕದಂಬ ಆರ್ಟ್ ಸೆಂಟರ್ ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ಕಾಳಿಂಗ ನಾವಡ ಪ್ರಶಸ್ತಿ ನೀಡುತ್ತಿದೆ. ಈ ಸಾಲಿನ ಕಾಳಿಂಗ ನಾವಡ ಪ್ರಶಸ್ತಿಯನ್ನು ಸುಮಾರು 25 ವರ್ಷಗಳಿಂದ ಹೂವಿನ ಕೋಲಿನ ಸಂಪ್ರದಾಯವನ್ನು ನಡೆಸಿ ಕೊಂಡು ಬರುತ್ತಿರುವ ಹಲವಾರು ಯಕ್ಷಗಾನ ಮೇಳಗಳಲ್ಲಿ ತಮ್ಮ ಭಾಗವತಿಕೆಯ ಮೂಲಕಖ್ಯಾತ ಭಾಗವತರು ಎನಿಸಿ ಕೊಂಡಿರುವ ಹಾಗೂ ಪ್ರಸಂಗಕರ್ತ ಸುರೇಶ್ ರಾವ್ ಬಾರ್ಕೂರು ಅವರಿಗೆ, ಉಡುಪಿ ಜಿಲ್ಲೆಯ ಕೋಟ ಹಂದಟ್ಟು ಗ್ರಾಮದ ಉರಾಳ ಕೇರಿಯ ವೇದಿಕೆಯಲ್ಲಿ ಡಿ.25 ರ ಸಂಜೆ 6 ಘಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನೀಡಲಾಗುವುದು.
ಮುಖ್ಯ ಅತಿಥಿಗಳಾಗಿ ವೇದ ಬ್ರಹ್ಮಶ್ರೀ ಕೆ ಅನಂತ ಪದ್ಮನಾಭ ಐತಾಳ್, ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ, ಹಿರಿಯ ಯಕ್ಷಗಾನ ಕಲಾವಿದರಾದ ಗೋವಿಂದ ಉರಾಳ, ಹಾಗೂ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳರು ಉಪಸ್ಥಿತರಿರಲಿದ್ದಾರೆ.
ಕೋಟ.ಡಿ.24 ಕಾಳಿಂಗ ನಾವಡ
Leave a Reply