
ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವರ ಸ್ವಾಗತ ಅಂಗಣದಲ್ಲಿ ಧನುರ್ಮಾಸದ ಪ್ರಥಮ ಶನಿವಾರ 23ರ ಸಂಜೆ ಶಿವಮೊಗ್ಗೆಯ ರಾಗ ರಂಜನಿ ಟ್ರಸ್ಟ್ನ ಪ್ರಹ್ಲಾದ ದೀಕ್ಷಿತ ಮತ್ತು ತಂಡದವರಿAದ ಸಂಜೆ 5 ಗಂಟೆಯಿAದ 7.30 ರ ತನಕ ಭಕ್ತಿ ಸಂಗೀತ ಸೇವೆ ನಡೆಯಿತು. ದೀಪ ಪ್ರಜ್ವಲಿಸುವ ಮೂಲಕ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹಿಮ್ಮೇಳ ಕಲಾವಿದರ ಪರವಾಗಿ ದಯಾನಂದ ವಾರಂಬಳ್ಳಿ , ರವಿ ಕಾರಂತ, ಸಂಯೋಜನಾ ಸಹಾಯಕರಾದ ಬಾಲಕೃಷ್ಣ ನಕ್ಷತ್ರಿ ಮತ್ತು ದೀಪಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಲಕ್ಷ್ಮಿನಾರಾಯಣ ತುಂಗ ಮತ್ತು ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಶ್ರೀ ದೇವರ ಪ್ರಸಾದವನ್ನು ನೀಡಿ ತಂಡಕ್ಕೆ ಶುಭವನ್ನು ಹಾರೈಸಿದರು. ದೇವಳದ ಪ್ರಬಂಧಕ ನಾಗರಾಜ ಹಂದೆಯವರು ಆರಂಭದಲ್ಲಿ ಸ್ವಾಗತಿಸಿ,ಅಂತ್ಯದಲ್ಲಿ ಧನ್ಯವಾದವನ್ನು ಅರ್ಪಿಸಿದರು.
ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವರ ಸ್ವಾಗತ ಅಂಗಣದಲ್ಲಿ ಧನುರ್ಮಾಸದ ಪ್ರಥಮ ಶನಿವಾರ 23ರ ಸಂಜೆ ಶಿವಮೊಗ್ಗೆಯ ರಾಗ ರಂಜನಿ ಟ್ರಸ್ಟ್ನ ಪ್ರಹ್ಲಾದ ದೀಕ್ಷಿತ ಮತ್ತು ತಂಡದವರಿAದ ಭಕ್ತಿ ಸಂಗೀತ ಸೇವೆ ನಡೆಯಿತು.
Leave a Reply