
ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು 23ರ ಶನಿವಾರ ವೈಕುಂಠ ಏಕಾದಶಿಯಂದು ಚೇಂಪಿ ವೆಂಕಟರಮಣ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನವನ್ನು ಪಡೆದರು.
ಅರ್ಚಕ ವೇ.ಮೂ.ಪ್ರಕಾಶ ಭಟ್ ವೆಂಕಟರಮಣ ದೇವಸ್ಥಾನಕ್ಕೂ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೂ ಇರುವ ತಲೆ ತಲಾಂತರದ ಅವಿನಾಭಾವ ಸಂಬAಧವನ್ನು ವಿವರಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷ ದಿನಕರ ಭಗವಂತ ಶೆಣೈಯವರು ಡಾ.ಕೆ.ಎಸ್.ಕಾರಂತರಿಗೆ ಸಾಂಪ್ರದಾಯಿಕ ಅಭಿನಂದನೆಯನ್ನು ಸಲ್ಲಿಸಿದರು. ಗಣಪತಿ ಪೂಜೆಯ ನಂತರ ರಾಮಸೇವಾ ಭಜನಾ ಸಂಘ,ಚೇAಪಿ ಸಾಲಿಗ್ರಾಮದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಏಕಾಹ ಭಜನಾ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನೆಯ ಮೂಲಕ ವಿಧ್ಯುಕ್ತ ಚಾಲನೆಯನ್ನು ನೀಡಲಾಯಿತು.
ಈ ಪುಣ್ಯ ಕಾರ್ಯಕ್ರಮಗಳಲ್ಲಿ ಪೂಜಾ ವಿಧಿ ವಿಧಾನಗಳ ಪ್ರಧಾನ ಕರ್ತÈ ಗೋವಿಂದರಾಯ ಶಾನುಭಾಗ,ಅರ್ಚಕ ವೇ.ಮೂ.ಶ್ರೀಕಾಂತ ಭಟ್ಟ, ಸಂದೇಶ ನಾಯಕ್, ಕೊಗ್ಗ ನಾಯಕ್ ಮುಂತಾದ ಜಿ.ಎಸ್.ಬಿ.ಸಮಾಜದ ಪ್ರಮುಖರು ಸಕ್ರಿಯವಾಗಿ ಭಾಗವಹಿಸಿದ್ದರು.
ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು 23ರ ಶನಿವಾರ ವೈಕುಂಠ ಏಕಾದಶಿಯಂದು ಚೇಂಪಿ ವೆಂಕಟರಮಣ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನವನ್ನು ಪಡೆದರು. ಆಡಳಿತ ಮಂಡಳಿಯ ಅಧ್ಯಕ್ಷ ದಿನಕರ ಭಗವಂತ ಶೆಣೈ, ಗೋವಿಂದರಾಯ ಶಾನುಭಾಗ,ಅರ್ಚಕ ವೇ.ಮೂ.ಶ್ರೀಕಾಂತ ಭಟ್ಟ, ಸಂದೇಶ ನಾಯಕ್ ಮತ್ತಿತರರು ಇದ್ದರು.
Leave a Reply