News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನವ ಕುಂಡಗಳಲ್ಲಿ ಮೊಳಗಿದ ಕೋಟಿ ಗಾಯತ್ರೀ ಮಹಾಯಾಗ, ಲಕ್ಷ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ

ಕೋಟ: ಇತಿಹಾಸದಲ್ಲೆ ಮೊದಲೆಂಬAತೆ ಕೂಟ ಮಹಾಜಗತ್ತಿನ  ಕೋಟ ಪರಿಸರದ ಮಹಾಲಿಂಗೇಶ್ವರನ ಸಾನಿಧ್ಯದಲ್ಲಿ  ಲೋಕ ಕಲ್ಯಾಣಾರ್ಥವಾಗಿ ಕೋಟಿ ಗಾಯತ್ರೀ ,ಮಹಾಯಾಗ,ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗ ಕಾರ್ಯಕ್ರಮಗಳು ವಿಪ್ರ ಬಾಂಧವರ ಹಾಗೂ ಭಕ್ತ ಸಮುದಾಯದ ನಡುವೆ ಧಾರ್ಮಿಕವಾಗಿ ವಿಜೃಂಭಿಸಿಕೊAಡಿತು.

ಶ್ರೀ ಶಾಂತಿಮತೀ ಪ್ರತಿಷ್ಠಾನ ಹಂದಾಡಿ ಬ್ರಹ್ಮಾವರ ಇವರ ಆಶ್ರಯದಲ್ಲಿ ಮಹಾಯಾಗ ಸಮಿತಿಯ ಮೇಲುಸ್ತುವಾರಿಯಲ್ಲಿ ನವ ಕುಂಡಗಳಲ್ಲಿ  ೧೫೦ ಋತ್ವಿಜರ ಸಮ್ಮುಖದಲ್ಲಿ ಮಹಾಯಾಗ ಮೊದಲ್ಗೊಂಡಿತು.
ವೇದಬ್ರಹ್ಮ ಹೃಷಿಕೇಶ್ ಬಾಯರಿ ಬಾರ್ಕೂರು,ಅವಧಾನಿ ಶ್ರೀ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್ ಉಡುಪಿ ಇವರುಗಳ ಸಾರಥ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊAಡಿತು. ೧೦೦೦ ಅಧಿಕ ವಿಪ್ರ ಮಹಿಳೆಯರಿಂದ  ಲಲಿತಾ ಸಹಸ್ರ ಕುಂಕುಮಾರ್ಚನೆ ಕಾರ್ಯಕ್ರಮ ವಿಶೇಷವಾಗಿ ಕಣ್ಮನ ಸೆಳೆಯಿತು.

ಗಮನ ಸೆಳೆದ ಒರ್ವ ವಿಪ್ರ ಮಹಿಳೆ
ಯಾವುದೇ ದೇವಳಗಳ ಧಾರ್ಮಿಕ ಕಾರ್ಯಕ್ರಮಗಳಿರಲಿ ಅಥವಾ ಜಾತ್ರಾ ಸಂದರ್ಭದಲ್ಲಿ ಒರ್ವ ಮಹಿಳೆ ಬಾಯಾರಿಗೆ ನೀಗಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ ಅದರಂತೆ ತೆಕ್ಕಟ್ಟೆ ಪರಿಸರದ ನಾಗಲಕ್ಷಿ÷್ಮÃ ಎಂಬ ವಿಪ್ರ ಮಹಿಳೆ ಮಹಾಯಾಗದಲ್ಲಿ ಗಮನ ಸೆಳೆದು ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೂ,ವಿಪ್ರ ಬಾಂಧವರಿಗೆ ನೀರುಣಿಸುವ ಕಾಯಕ ವಿಶೇಷವಾಗಿ ಗಮನ ಸೆಳೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮ
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ವಿದ್ಯಾವಾಚಸ್ಪತಿ ವಿದ್ವಾನ್  ಉಮಾಕಾಂತ್ ಭಟ್ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಸಂಸ್ಕöÈತ ವಿದ್ವಾಂಸ ಡಾ.ಕೃಷ್ಣಮೂರ್ತಿ ಬಾಯರಿ ,ವಾಸ್ತು ತಜ್ಞ ಅವಧಾನಿ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್,ಪಾರಂಪರಿಕ ಶಿಕ್ಷಣ ತಜ್ಞೆ ಅಮೃತವರ್ಷಿಣಿ ಉಮೇಶ್ ಬೆಂಗಳೂರು, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೈ ಸುಧಾಕರ್ ಭಟ್,ಕೋಟ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಭಟ್ ಉಪಸ್ಥಿತರಿದ್ದರು. ಮಹಾಯಾಗ ಸಮಿತಿ ಅಧ್ಯಕ್ಷ ಡಾ.ವಿದ್ವಾನ್ ವಿಜಯ್ ಮಂಜರ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯಕ್ರಮವನ್ನು ಪೂರ್ಣಿಮಾ ಕಮಲಶಿಲೆ, ಸಮಿತಿಯ ಕೆ.ರಾಜಾರಾಮ್ ಐತಾಳ್ ನಿರೂಪಿಸಿದರು. ಯಾಗಸಮಿತಿ ಕಾರ್ಯದರ್ಶಿ ಪ್ರಸನ್ನ ಭಟ್ ವಂದಿಸಿದರು.ಸಮಿತಿಯ ಸದಸ್ಯರು ವೇದಘೋಷಗಳನ್ನು ನುಡಿದರು.ಪಲ್ಲವಿ ತುಂಗ ಪ್ರಾರ್ಥನೆ ಸಲ್ಲಿಸಿದರು.ಸಮಿತಿಯ ಜತೆಕಾರ್ಯದರ್ಶಿ ದಯಾನಂದ ವಾರಂಬಳ್ಳಿ ಸಹಕರಿಸಿದರು. ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ ನಡೆಯಿತು.

ಶನಿವಾರ ಪೂರ್ವಾಹ್ನ ನವ ಕುಂಡಗಳಲ್ಲಿ ಕೋಟಿ ಗಾಯತ್ರೀ ಮಹಾಯಾಗ,೯.ಗಮಹಾಯಾಗದ ಪೂರ್ಣಾಹುತಿ,ಪ್ರಸಾದ ವಿತರಣೆ, ಮಹಾಮಂತ್ರಾಕ್ಷತೆ, ೧೦.ಗ ಸಮಾರೋಪ ಸಮಾರಂಭ, ಅಪರಾಹ್ನ ೧೨.೩೦ಕ್ಕೆ ಮಹಾಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಲಿಕ್ಕಿದೆ

ಶ್ರೀ ಶಾಂತಿಮತೀ ಪ್ರತಿಷ್ಠಾನ ಹಂದಾಡಿ ಬ್ರಹ್ಮಾವರ ಇವರ ಆಶ್ರಯದಲ್ಲಿ ಮಹಾಯಾಗ ಸಮಿತಿಯ ಮೇಲುಸ್ತುವಾರಿಯಲ್ಲಿ ನವ ಕುಂಡಗಳಲ್ಲಿ  ೧೫೦ ಋತ್ವಿಜರ ಸಮ್ಮುಖದಲ್ಲಿ ಮಹಾಯಾಗ ಮೊದಲ್ಗೊಂಡಿತು.

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ವಿದ್ಯಾವಾಚಸ್ಪತಿ ವಿದ್ವಾನ್  ಉಮಾಕಾಂತ್ ಭಟ್ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಸಂಸ್ಕೃತ ವಿದ್ವಾಂಸ ಡಾ.ಕೃಷ್ಣಮೂರ್ತಿ ಬಾಯರಿ ,ವಾಸ್ತು ತಜ್ಞ ಅವಧಾನಿ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *