News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಹಾಯಾಗ ನಡೆದ ಸ್ಥಳದಲ್ಲಿ ಪಂಚವರ್ಣ ಸಂಸ್ಥೆ ಸ್ವಚ್ಛತಾ ಸೇವಾಕಾರ್ಯ
190ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ,ಮಣೂರು ಫ್ರೆಂಡ್ಸ್,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಹಂದಟ್ಟು ಮಹಿಳಾ ಬಳಗ ಕೋಟ,ಕೋಟ ಗ್ರಾಮಪಂಚಾಯತ್ ಇವರಗಳ ನೇತೃತ್ವದಲ್ಲಿ 190ನೇ ಭಾನುವಾರದ ಪರಿಸರಸ್ನೇಹಿ ಅಭಿಯಾದ ಹಿನ್ನಲೆಯಲ್ಲಿಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುದಲ್ಲಿ ಶಾಂತಿಮತೀ ಪ್ರತಿಷ್ಠಾನ ಬ್ರಹ್ಮಾವರ , ಮಹಾಯಾಗ ಸಮಿತಿ ಆಶ್ರಯದಲ್ಲಿ ನಡೆದ ಮೂರು ದಿನಗಳ ಕೋಟಿ ಗಾಯತ್ರೀ ಮಹಾಯಾಗ,ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗ ನಡೆದ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿತು.

ಮಹಾಯಾಗ ಸಮಿತಿ ಅಧ್ಯಕ್ಷ ಡಾ.ವಿದ್ವಾನ್ ವಿಜಯ್ ಮಂಜರ್ ಮಾರ್ಗದರ್ಶನದಲ್ಲಿ ಈ ಸ್ವಚ್ಛತಾ ಅಭಿಯಾನ ಜರಗಿತು. ವಿವಿಧ ಸಂಘಟನೆಗಳ ಮುಖಂಡರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ವಿವಿಧ ಸಂಘಸAಸ್ಥೆಗಳ ನೇತೃತ್ವದಲ್ಲಿ ಮೂರು ದಿನಗಳ ಕೋಟಿ ಗಾಯತ್ರೀ ಮಹಾಯಾಗ,ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗ ನಡೆದ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿತು.

Leave a Reply

Your email address will not be published. Required fields are marked *