Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರವೇ ಯಿಂದ ಉಡುಪಿ ಜಿಲ್ಲೆಯ ಕನ್ನಡ ನಾಮಫಲಕ ಕಡ್ಡಾಯ ಪೌರಾಯುಕ್ತರಿಗೆ ಮನವಿ…!!

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಶೇಕಡಾ 60% ರಷ್ಟು ಕನ್ನಡವನ್ನು ಹಾಗೂ ಅನ್ಯ ಭಾಷೆಯ ಬೋರ್ಡ್ ಗಳು 40 ರಷ್ಟು ಕಡ್ಡಾಯವಾಗಿ ಇರಬೇಕೆಂದು ಉಪಯೋಗಿಸಬೇಕೆಂದು ಸರಕಾರ ಆದೇಶಿಸಿದೆ.

ಆದರೂ ಉಡುಪಿ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಇನ್ನು ಬದಲಾಗಿಲ್ಲ, ಈ ವಿಚಾರವಾಗಿ ಉಡುಪಿ ನಗರಸಭೆಯ ಅಧಿಕಾರಿಗಳು ಯಾವುದೇ ರೀತಿಯ ಎಚ್ಚರಿಕೆಯ ಕ್ರಮ ಕೈಗೊಳ್ಳದೇ ಇರುವುದು ವಿಷಾದದ ಸಂಗತಿ ಆದ್ದರಿಂದ ಕನ್ನಡದ ಉಳಿವಿಗಾಗಿ ಸದಾ ಮುಂದಿರುವ ಕರ್ನಾಟಕ ರಕ್ಷಣಾ ವೇದಿಕೆಯು ಉಡುಪಿ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳ ನಾಮಫಲಕಗಳ ವಿಷಯವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಎಚ್ಚರಿಕೆಯ ಸಂದೇಶ ನೀಡಲು ಒಂದು ವಾಹನಕ್ಕೆ ಧ್ವನಿವರ್ಧಕ ಅಳವಡಿಸಿಕೊಂಡು ಜಾಗರೂಕತೆ ಮೂಡಿಸುವ ಕಾರ್ಯವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು, ಇದಕ್ಕೆ ಅಧಿಕಾರಿಗಳಾದ ತಾವು ನಮ್ಮೊಂದಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಆಗ್ರಹಿಸಿ ಇಂದು ಉಡುಪಿ ನಗರಸಭೆಯ ಮಾನ್ಯ ರಾಯಪ್ಪ ಪೌರಾಯುಕ್ತರಾದ ಇವರಿಗೆ ಜಿಲ್ಲಾ ಘಟಕ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ. ಗೌರವಾಧ್ಯಕ್ಷರಾದ ಸುಂದರ. ಎ.ಬಂಗೇರ. ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಗೀತ ಪಂಗಳಾ. ಜಿಲ್ಲಾ ಸಾಂಸ್ಕೃತಿ ಕಾರ್ಯದರ್ಶಿಯಾದ ಕೃಷ್ಣ ಕೆ. ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರ್. ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ಶಾಲಿನಿ ಸುರೇಂದ್ರ. ಜಿಲ್ಲಾ ಮಹಿಳಾ ಕಾರ್ಯದರ್ಶಿ ಚಂದ್ರಕಲಾ. ಹಾಗೂ ಜಿಲ್ಲಾ ಸದಸ್ಯರು ವಿಜಯ ಶ್ರೀನಿವಾಸ. ಶ್ಯಾಮಲ. ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *