ಕೋಟ: ಮನೆ ನಿರ್ಮಿಸಿ ಕೊಡುವ ಕಾಯಕ ಶ್ರೇಷ್ಠವಾದದ್ದು ಈ ದಿಸೆಯಲ್ಲಿ ಎಲ್ಲಾ ಸಂಸ್ಥೆಯವರಿಗೂ ವಿಶೇಷ ಅಭಿನಂದನೆಗಳನ್ನು ನಾಡೋಜ ಡಾ.ಜಿ ಶಂಕರ್ ಸಮರ್ಪಿಸಿದರು
ಭಾನುವಾರ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಕೋಟ ಘಟಕ ಮಹಿಳಾ ಘಟಕದ ನೇತೃತ್ವದಲ್ಲಿ ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ,ಗೀತಾನಂದ ಫೌಂಡೇಶನ್ ಮಣೂರು, ಕೋಟ ಗ್ರಾಮಪಂಚಾಯತ್,ಶಬರಿ ಕನ್ಟçಕ್ಷನ್ ಕೋಟ ಹಾಗೂ ದಾನಿಗಳ ನೆರವಿನೊಂದಿಗೆ ಕೋಟ ಪಂಚಾಯತ್ ವ್ಯಾಪ್ತಿಯ ಮೂಡುಗಿಳಿಯಾರು ರಾಧ ಮೋಗವೀರ ಕುಟುಂಬಕ್ಕೆ ಮನೆ ಹಾಸ್ತಾಂತರಿಸಿ ಮಾತನಾಡಿ ಹಿಂದೆ ಒಂದು ಮನೆ ನಿರ್ಮಿಸುವುದೆಂದರೆ ಬಾರಿ ಕ್ಲಿಷ್ಟಕರವಾಗಿತ್ತು ಆದರೆ ನೆರೆಯಿಂದ ಹಾನಿಗೊಂಡ ಕುಟುಂಬಕ್ಕೆ ಒಂದು ಸುಂದರ ಮನೆ ನಿರ್ಮಿಸಿ ಆ ಕಟುಂಬಕ್ಕೆ ಜೀವ ತುಂಬುವ ಕಾರ್ಯ ಶ್ಲಾಘನೀಯ ಇಂತಹ ಕಾರ್ಯ ನಿತ್ಯನಿರಂತವಾಗಿ ಬಡ ಕುಟುಂಬಗಳ ಕಣ್ಣಿರೊರೆಸುವ ಕಾಯಕವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮನೆ ನಿರ್ಮಿಸುವಲ್ಲಿ ಸಹಕಾರ ನೀಡಿದ ಗುತ್ತಿಗೆದಾರ ಶಬರಿ ಕನ್ಟçಕ್ಷನ್ ಮಾಲಿಕ ಸುರೇಶ್ ಕಾಂಚನ್,ಶೇವಧಿ ಸುರೇಶ್ ಗಾಣಿಗ,ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ, ಪೂರ್ವಾಧ್ಯಕ್ಷ ಅಜಿತ್ ದೇವಾಡಿಗ,ಆಗಿನ ಗ್ರಾಮಲೆಕ್ಕಿಗ ಚಲುವರಾಜು,ಸ್ಥಳೀಯ ವಾಡ್9 ಸದಸ್ಯ ಶೇಖರ್ ಜಿ.ಗಿಳಿಯಾರು ಯುವಕ ಮಂಡದ ಸ್ಥಾಪಕಾಧ್ಯಕ್ಷ ಸುರೇಶ್ ಗಿಳಿಯಾರು, ಇವರುಗಳಿಗೆ ವಿಶೇಷವಾಗಿಕೃತಜ್ಞತೆ ಸಲ್ಲಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ರಾಜೇಂದ್ರ ಹಿರಿಯಡ್ಕ,ನಿಯೋಜಿತ ಅಧ್ಯಕ್ಷ ಜಯಂತ್ ಅಮೀನ್ ಕೋಡಿ ಕನ್ಯಾಣ,ಕೋಟ ಘಟಕದ ಅಧ್ಯಕ್ಷ ರಂಜೀತ್ ಕುಮಾರ್,ವಿವಿಧ ಘಟಕಗಳ ಅಧ್ಯಕ್ಷ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮೊಗವೀರ ಯುವ ಸಂಘಟನೆ ಪೂರ್ವಾಧ್ಯಕ್ಷ ಶಿವರಾಮ್ ಕೆ.ಎಂ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಕೋಟ ಘಟಕ ಮಹಿಳಾ ಘಟಕದ ನೇತೃತ್ವದಲ್ಲಿ ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ,ಗೀತಾನಂದ ಫೌಂಡೇಶನ್ ಮಣೂರು, ಕೋಟ ಗ್ರಾಮಪಂಚಾಯತ್, ಶಬರಿ ಕನ್ಟçಕ್ಷನ್ ಕೋಟ ಹಾಗೂ ದಾನಿಗಳ ನೆರವಿನೊಂದಿಗೆ ಕೋಟ ಪಂಚಾಯತ್ ವ್ಯಾಪ್ತಿಯ ಮೂಡುಗಿಳಿಯಾರು ರಾಧ ಮೋಗವೀರ ಕುಟುಂಬಕ್ಕೆ ವನಾಡೋಜ ಡಾ.ಜಿ ಶಂಕರ್ ಮನೆ ಹಾಸ್ತಾಂತರಿಸಿದರು. ಗೀತಾನAದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ರಾಜೇಂದ್ರ ಹಿರಿಯಡ್ಕ,ನಿಯೋಜಿತ ಅಧ್ಯಕ್ಷ ಜಯಂತ್ ಅಮೀನ್ ಕೋಡಿ ಕನ್ಯಾಣ ಮತ್ತಿತರರು ಇದ್ದರು.