• Sun. Apr 21st, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟದಲ್ಲಿ ಮೇಳೈಸಿದ ನವನವೀನ ಗೋ ಕರುಗಳ ತಳಿಗಳ ಪ್ರದರ್ಶನ,ಸ್ಪರ್ಧೆ ,ರಾಸುಗಳ ಹಾಲಿಂಡುವ ಸ್ಫರ್ಧೆ
ಆನಂದ್ ಸಿ ಕುಂದರ್ ರವರ ಹುಟ್ಟು ಹಬ್ಬದ ಅಮೃತಮಹೋತ್ಸವದ ಸಂಭ್ರಮದ ಅಮೃತ ಗೌರವ ಪ್ರದಾನ

ByKiran Poojary

Feb 20, 2024

ಕೋಟ: ಹೈನುಗಾರಿಕೆ, ಕೃಷಿ ಆರೋಗ್ಯಕರ ಜೀವನಹಿಂದೆ ಕೃಷಿ ಮತ್ತು ಹೈನುಗಾರಿಕೆಯಿಂದ ಜೀವನ ನಡೆಸುತ್ತಾ ಬಂದಿದ್ದು, ಇಂದು ಯುವ ಸಮುದಾಯದಲ್ಲಿ ಆಸಕ್ತಿ ಕಡಿಮೆಯಾಗಿರುವುದು ವಿಷಾದದ ಸಂಗತಿ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ

ಮಂಗಳವಾರ ಕೋಟದ ಶಾಂಭವೀ ಶಾಲಾ ಮೈದಾನದಲ್ಲಿ ಆನಂದ್ ಸಿ ಕುಂದರ್ ಹುಟ್ಟು ಹಬ್ಬದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಡುಪಿ,ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ , ಗೀತಾನಂದ ಫೌಂಡೇಶನ್ ಮಣೂರು,ಪಂಚವರ್ಣ ಯುವಕ ಮಂಡಲ ಮತ್ತು ಪಂಚವರ್ಣ ಮಹಿಳಾ ಮಂಡಲ ಕೋಟ,ಕೋಟ ವಲಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹೋಬಳಿ ಮಟ್ಟದ ಕರುಗಳ ಪ್ರದರ್ಶನ, ಸ್ಪರ್ಧೆ, ರಾಸುಗಳ ಹಾಲು ಹಿಂಡುವ ಸ್ಪರ್ಧೆ ಹಾಗೂ ಹೈನುಗಾರಿಕಾ ಮಾಹಿತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪೋಷಕರು ಕೇವಲ ವಿದ್ಯಾಭ್ಯಾಸ ಅಂಕಗಳನ್ನು ಗಳಿಸಿ ಎಂದು ತಮ್ಮ ಮಕ್ಕಳಿಗೆ ತಿಳುವಳಿಕೆಯನ್ನು ನೀಡುವುದರೊಂದಿಗೆ ಉತ್ತಮ ಸಂಸ್ಕಾರವನ್ನೂ ನೀಡುವಂತಾಗಬೇಕು.

ಹೈನುಗಾರಿಕೆ ಮತ್ತು ಕೃಷಿ ಯಲ್ಲಿ ನಾವೇಕೆ ಹಿಂದೆ ಬಿದ್ದಿದ್ದೇವೆ ಎನ್ನುವ ಬಗ್ಗೆ ಚಿಂತನೆ ನಡೆಸಬೇಕಾದ ಅಗತ್ಯತೆ ಇದೆ. ಕೃಷಿಯಿಂದ ಆರೋಗ್ಯಕರ ಜೀವನಸಾಧ್ಯ ಎಂದ ಅವರು ಮುಂದಿನ ದಿನಗಳಲ್ಲಿ ಸರ್ಕಾರದ ಸವಲತ್ತುಗಳನ್ನು ತೆಗೆದುಕೊಂಡು ಹೈನುಗಾರಿಕೆ ಯನ್ನು ಮುಂದುವರಿಸಿ ಕೊಂಡು ಹೋಗುವಂತಾಗಬೇಕು ಎಂದು ಕರೆ ನೀಡಿದರು.
ಈ ವೇಳೆ ಆನಂದ್ ಸಿ ಕುಂದರ್ ದಂಪತಿಗಳಿಗೆ ಅಮೃತಮಹೋತ್ಸವದ ಅಮೃತ ಗೌರವ ನೀಡಿ ಗೌರವಿಸಲಾಯಿತು.

ಇದೇ ವೇಳೆ ಹಿರಿಯ ಪಶುವೈದ್ಯಾಧಿಕಾರಿ ಸರ್ವೋತ್ತಮ ಉಡುಪ, ಡಾ.ಎಸ್ ಮೋಹನ್ ರೆಡ್ಡಿ,ಡಾ.ಅರುಣ್ ಕುಮಾರ್ ಶೆಟ್ಟಿ, ಅಭಿನಂದಿಸಲಾಯಿತು. ಕಾರ್ಯಕ್ರಮ ಪ್ರಾರಂಭದಲ್ಲಿ ಗೋ ಕರುಗಳಿಗೆ ಗೋ ಪೂಜೆಯನ್ನು ಆನಂದ್ ಸಿ ಕುಂದರ್ ದಂಪತಿಗಳು ನೆರವೆರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋ ಕರುಗಳ ಪ್ರದರ್ಶನ ಸಮಿತಿ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕರ್ನಾಟಕ ರಾಜ್ಯ ಹಾಲು ಮಹಾಮಂಡಲ ಬೆಂಗಳೂರು ಇದರ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಪಶುಪಾಲನಾ ಇಲಾಖೆ ಉಡುಪಿ ಉಪನಿರ್ದೇಶಕ ಎಮ್ ಸಿ ರೇವಪ್ಪ,ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ನಿರ್ದೇಶಕ ಕಮಲಾಕ್ಷ ಹೆಬ್ಬಾರ್,ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ,ಉಡುಪಿಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ್ ಪಿ ಎಸ್, ಕೋಟ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ,ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ.ಅನಂತಪದ್ಮನಾಭ ಐತಾಳ್, ಹಿರಿಯ ಕೃಷಿಕ ರಘು ಮಧ್ಯಸ್ಥ ಪಾರಂಪಳ್ಳಿ,ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಜಾನಕಿ ಹಂದೆ,ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರೆ, ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ನಿರ್ದೇಶಕ ಟಿ.ಮಂಜುನಾಥ ಗಿಳಿಯಾರ್ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ಕೋಟ ಸಹಕಾರ ವ್ಯವಸಾಯಕ ಸಂಘ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವಂದಿಸಿದರು.ಸನ್ಮಾನ ಪತ್ರವನ್ನು ಕೋಟ ಚಂದ್ರ ಆಚಾರ್ ವಾಚಿಸಿದರು, ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಹಕರಿಸಿದರು. ಬಹುಮಾನ ಪತ್ರವನ್ನು ಕೋಟ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್ ವಾಚಿಸಿದರು. ಕರುಗಳ ನೊಂದಣಿ ಕಾರ್ಯದ ಉದ್ಘಾಟನೆಯನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ ಉದ್ಘಾಟಿಸಿದರು.

ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಜಾನಕಿ ಹಂದೆ,ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಟಿ.ಮಂಜುನಾಥ ಗಿಳಿಯಾರ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ ಪಿ ಎಸ್,ಪಶು ಇಲಾಖೆ ಬ್ರಹ್ಮಾವರ ಇದರ ಮುಖ್ಯ ವೈದ್ಯಾಧಿಕಾರಿ ಡಾ.ಪ್ರದೀಪ್ ಕುಮಾರ್, ಕೋಟ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ ಅನಿಲ್ ಕುಮಾರ್, ಸಂತೆಕಟ್ಟೆ ಪಶು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಮಂಜುನಾಥ್ ಅಡಿಗ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಕೊರಗ ಪೂಜಾರಿ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಆನಂದ್ ಸಿ ಕುಂದರ್ ಕೃಷಿ ಹೈನುಗಾರಿಕೆ ಯಲ್ಲಿ ಆಲಸ್ಯ ಒಳ್ಳೆಯದಲ್ಲ. ಹೈನುಗಾರಿಕೆ ಲಾಭದಾಯಕ ವಾಗಬೇಕು. ಇದಕ್ಕೆ ಸರ್ಕಾದ ಸಹಭಾಗಿತ್ವ ಅತೀ ಅಗತ್ಯ. ವ್ಯವಸ್ಥೆ ಬೆಳೆಯಲು ಎಲ್ಲರೂ ಒಗ್ಗಟ್ಟಾಗಬೇಕುಗೋ ಸಂಪತ್ತು ಉಳಿಯಲು ಮತ್ತು ಮನುಸಂಕುಲನ ಉಳಿಯಬೇಕಾದರೆ ಇಂತಹ ಕಾರ್ಯಕ್ರಮಗಳು ಸಹಕಾರಿ, ಕೃಷಿ ಪ್ರದೇಶದಲ್ಲಿ ಮೇವು ಹೇಗೆ ಬೆಳೆಸಬೇಕು, ಅದರ ಸಂಸ್ಕರಣೆ ಮತ್ತು ಬಳಕೆ ಹೇಗೆ ಮಾಡಬಹುದು ಎನ್ನುವ ಬಗ್ಗೆ ಯೋಚಿಸಿದಲ್ಲಿ ಹೈನುಗಾರಿಕೆ ಮತ್ತು ಕೃಷಿ ಲಾಭದಾಯಕವಾಗಬಲ್ಲದು ಎಂಬುದನ್ನು ತಿಳಿಸಿದರು.

ಪ್ರದರ್ಶನದ ಭಾಗಿಯಾದ ಕರುಗಳು
ಇದೇ ಮೊದಲ ಬಾರಿ ಗ್ರಾಮೀಣ ಭಾಗವಾದ ಕೋಟದಲ್ಲಿ ಕರುಗಳ ಪ್ರದರ್ಶನದಲ್ಲಿ ದೇಸಿ ಹಾಗೂ ಎಚ್ ಎಫ್ ಸೇರಿದಂತೆ ವಿವಿಧ ಜಾತಿಯ ತಳಿಗಳು ಸುಮಾರು 170ಕ್ಕೂ ಅಧಿಕ ಗೋ ಕರುಗಳ ಹೈನುಗಾರರ ಮೂಲಕ ಪ್ರದರ್ಶನದಲ್ಲಿ ಭಾಗಿಯಾದವು.

ಶಾಲಾ ವಿಧ್ಯಾರ್ಥಿಗಳ ವೀಕ್ಷಣೆ
ಪ್ರದರ್ಶನದಲ್ಲಿ ಸ್ಥಳೀಯ ಕೋಟ ಶಿವರಾಮ ಕಾರಂತರು ಕಲಿತ ಕೋಟ ಶಾಲೆ, ಗಿಳಿಯಾರು ಶಾಂಭವೀ ಶಾಲಾ ವಿದ್ಯಾರ್ಥಿಗಳು ಗೋ ಕರುಗಳ ಮಾಹಿತಿಯನ್ನು ಪಡೆದು ಸಾಲು ಸಾಲಾಗಿ ವಿಕ್ಷೀಸಿದರು.

ಮಂಗಳವಾರ ಕೋಟದ ಶಾಂಭವೀ ಶಾಲಾ ಮೈದಾನದಲ್ಲಿ ಆನಂದ್ ಸಿ ಕುಂದರ್ ಹುಟ್ಟು ಹಬ್ಬದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಡುಪಿ,ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ,ಗೀತಾನಂದ ಫೌಂಡೇಶನ್ ಮಣೂರು,ಪಂಚವರ್ಣ ಯುವಕ ಮಂಡಲ ಮತ್ತು ಪಂಚವರ್ಣ ಮಹಿಳಾ ಮಂಡಲ ಕೋಟ,ಕೋಟ ವಲಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹೋಬಳಿ ಮಟ್ಟದ ಕರುಗಳ ಪ್ರದರ್ಶನ,ಸ್ಪರ್ಧೆ,ರಾಸುಗಳ ಹಾಲು ಹಿಂಡುವ ಸ್ಪರ್ಧೆ ಹಾಗೂ ಹೈನುಗಾರಿಕಾ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಸಮಾಜಸೇವಕ ಆನಂದ್ ಸಿ ಕುಂದರ್ ರವರಿಗೆ ಅಮೃತಮಹೋತ್ಸವದ ಸಂಭ್ರಮದ ಅಮೃತ ಗೌರವ ಪ್ರದಾನಿಸಲಾಯಿತು.

Leave a Reply

Your email address will not be published. Required fields are marked *