• Sun. Jun 16th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಭಟ್ಕಳದ  ಸಾಮಾಜಿಕ ಹೋರಾಟಗಾರ ಈರಾ ಡಿ ನಾಯ್ಕ ಚೌತನಿ  ವಿಶ್ವಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಗೆ ಆಯ್ಕೆ

ByKiran Poojary

May 24, 2024

ಭಟ್ಕಳ-ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ವತಿಯಿಂದ ಕೊಡುವ 2024 ನೆ ಸಾಲಿನ ವಿಶ್ವ ಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸಾಮಾಜಿಕ ಹೋರಾಟಗಾರ ಈರಾ ಡಿ ನಾಯ್ಕ ಚೌತನಿ ಅವರು ಆಯ್ಕೆ ಆಗಿದ್ದಾರೆ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ಹಾಗೂ ಕಂಪ್ಲಿ ರಸ್ತೆಯ ಕಮಲಾಪುರ ಗ್ರಾಮದ ರೈತ ಸಮುದಾಯ ಭವನದಲ್ಲಿ ದಿನಾಂಕ 26.05.2024 ರವಿವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನಡೆಯುವ 4 ನೇ ಭಾವೈಕ್ಯತೆಯ ಸಮ್ಮೇಳನದಲ್ಲಿ ತಪ್ಪದೇ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಬೇಕೆಂದು ಭಟ್ಕಳದ ಸಾಮಾಜಿಕ ಹೋರಾಟಗಾರ  ಈರಾ.ಡಿ.ನಾಯ್ಕ್  ಅವರಿಗೆ  ಸಂಘಟಕರಾದ ಡಾ.ಎಸ್.ಎಸ್ ಪಾಟೀಲ್ ಹುಬ್ಬಳ್ಳಿ ಅವರು ಆಯ್ಕೆ ಪತ್ರ ನೀಡಿ ವಿನತಿಸಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಈರಾ ನಾಯ್ಕ್ ಚೌತನಿ ಅವರ ದಶಕಗಳ ಕಾಲದ ಸಮಾಜಸೇವೆ , ಕನ್ನಡ ಪರ ಹೋರಾಟ ಮತ್ತು ಸಾಮಾಜಿಕ ಚುಟುವಟಿ ಕೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *