• Wed. Feb 12th, 2025

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಜಿ. ಎಂ. ಗ್ಲೋಬಲ್ ಶಾಲೆ : ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

ByKiran Poojary

Jul 6, 2024

ಬ್ರಹ್ಮಾವರದ ಜಿ . ಎಂ. ಗ್ಲೋಬಲ್ ಶಾಲೆಯ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಡಾಕ್ಟರ್ ರೆನಾಲ್ಡೋ ಸೀಕ್ವೆರ , ಎಕ್ಸಿಕ್ಯೂಟಿವ್ ಡೈರೆಕ್ಟರ್ ವಿ. ಆರ್. ಎ. ಸೋಲ್ಯೂಶನ್ ಮಂಗಳೂರು ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ , ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಅವಕಾಶ ಇರುವಲ್ಲಿ ಅದನ್ನು ಬಳಸಿಕೊಂಡು ಪ್ರತಿಭೆಯನ್ನು ಹೊರ ಹಾಕಬೇಕು.ವಿದ್ಯಾರ್ಥಿ ಪರಿಷತ್ತಿನ ಮುಖಾಂತರ ನಾಯಕತ್ವ ಗುಣವನ್ನು ಬಾಲ್ಯದಲ್ಲಿಯೇ ಬೆಳಸಿಕೊಳ್ಳಲು ಅನುಕೂಲವಾಗುತ್ತದೆ.ವಸತಿ ನಿಲಯದ ವಿದ್ಯಾರ್ಥಿಗಳು ಅತ್ಯಂತ ಭಾವನಾತ್ಮಕ ಜೀವಿಗಳಾಗಿ ಬೆಳೆದು ಎಲ್ಲರೊಂದಿಗೆ ಹೊಂದಿಕೊಳ್ಳುವ , ಎಲ್ಲರಿಗೂ ಗೌರವ ನೀಡುವ ಗುಣವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಕಂಡುಕೊಳ್ಳುತ್ತಾರೆ .  ಆದ್ದರಿಂದ ಅವರು ಜೀವನದಲ್ಲೂ ಬಹು ಬೇಗ ಇತರರೊಂದಿಗೆ ಹೊಂದಿಕೊಳ್ಳುತ್ತಾರೆ.ಜಿ. ಎಂ. ಗ್ಲೋಬಲ್ ಸ್ಕೂಲ್ ಆ ಎಲ್ಲಾ ಅವಕಾಶವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡುತ್ತಿದೆ ಎಂದರು. ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಜಿ. ಎಂ. ವಿದ್ಯಾನಿಕೇತನ ಪಬ್ಲಿಕ್  ಸ್ಕೂಲ್ ನ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಅವರು ಮಾತನಾಡಿ , ಜಿ. ಎಂ ಗ್ಲೋಬಲ್.ಸ್ಕೂಲ್ ನ ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರು ಪ್ರತಿಭಾವಂತರು, ಇಲ್ಲಿನ ವಿದ್ಯಾರ್ಥಿ ಗಳ ಶಿಸ್ತು , ಒಗ್ಗಟ್ಟು , ಕಾರ್ಯದಕ್ಷತೆ ಕಂಡು ಬಹಳ ಸಂತೋಷವಾಯಿತು , ವಿದ್ಯಾರ್ಥಿ ಸಂಸತ್ತು ಒಂದು ವರ್ಷಗಳ ಕಾಲ ಧಕ್ಷತೆಯಿಂದ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.

ಗ್ಲೋಬಲ್ ಸ್ಕೂಲ್ ನ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ ಅವರು ವಿದ್ಯಾರ್ಥಿ ಪರಿಷತ್ತಿನ ಚುನಾಯಿತ ವಿದ್ಯಾರ್ಥಿ ಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ , ಪ್ರತಿಯೊಂದು ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆ ಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು . ಪ್ರತಿಯೊಬ್ಬರೂ ವಿದ್ಯಾರ್ಥಿ ದೆಸೆಯಲ್ಲಿಯೇ  ನಾಯಕತ್ವದ ಗುಣ ಬೆಳೆಸಿಕೊಂಡು ಭವ್ಯ ಭಾರತದ ದಿವ್ಯ ಪ್ರಜೆಗಳಾಗಬೇಕು ಎಂದರು.

ಜಿ. ಎಂ ಸಂಸ್ಥೆಯ ಸಂಸ್ಥಾಪಕರೂ, ಅಧ್ಯಕ್ಷರೂ ಆಗಿರುವ ಪ್ರಕಾಶ್ಚಂದ್ರ ಶೆಟ್ಟಿ ರವರು ಮಾತನಾಡಿ ,ಪೋಷಕರು ಹಾಗೂ  ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ , ಆ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಈಡೇರಿಸಿ . ಅದರಿಂದ ಅವರು ಸಂತುಷ್ಟ ರಾಗುತ್ತಾರೆ. ಅದುವೇ ನಿಮಗೆ ಶ್ರೀರಕ್ಷೆ ಎಂದರು.

ವಿದ್ಯಾರ್ಥಿ ನಾಯಕನಾಗಿ ಧಾನಿಶ್ ಗೌಡ ವಿದ್ಯಾರ್ಥಿ ನಾಯಕಿಯಾಗಿ ಶ್ರೇಯಾ ಡಿ  ಶೆಟ್ಟಿ ಆಯ್ಕೆಗೊಂಡರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಹಶಿಕ್ಷಕಿ ಪ್ರಿಯಾ ಸ್ವಾಗತಿಸಿ, ಸುಮನ್ ಧನ್ಯವಾದ ಸಲ್ಲಿಸಿದರು. ಸಹಶಿಕ್ಷಕಿ ಅವೆಲಿನ್ ವಿದ್ಯಾರ್ಥಿಗಳಾದ ಯಶವಂತ್ ಹಾಗೂ ಲೋಹಿತ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *