News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಕಯಾಕಿಂಗ್ ತಂಡ ಸೀತಾನದಿ ತಟದಲ್ಲಿ ಧ್ವಜಾರೋಹಣ

ಕೋಟ: 78ನೇ ವರ್ಷದ ಸ್ವಾತಂತ್ರ÷್ಯ ದಿನಾಚರಣೆಯ ಅಂಗವಾಗಿ ಸಾಲಿಗ್ರಾಮ ಕಯಾಕಿಂಗ್ ತಂಡ ಸೀತಾನದಿತಟದಲ್ಲಿ ವಿಭಿನ್ನವಾಗಿ ರಾಷ್ಟç ಪ್ರೇಮವನ್ನು ಮೆರೆಯುವ ಪ್ರಯತ್ನ ಮಾಡಿದೆ. ಸೀತಾ ನದಿಯಲ್ಲಿ ಕಯಕಿಂಗ್ ಮೂಲಕ ಪ್ರಕೃತಿ ವಿಸ್ಮಯಗಳನ್ನು ತೋರಿಸಿ ಜನರಲ್ಲಿ ಪ್ರಕೃತಿ ಪ್ರೇಮವನ್ನು ಬಿತ್ತುವ ಕೆಲಸ ಮಾಡುತ್ತಿರುವ ಸಾಲಿಗ್ರಾಮ ಕಯಾಕಿಂಗ್ ತಂಡ ಈ ಬಾರಿಯೂ ವಿಭಿನ್ನ ಪ್ರಯತ್ನ ನಡೆಸಿದೆ.

ಈ ಬಾರಿ ನದಿಯ ಮದ್ಯದಲ್ಲಿ ಕಾಂಡ್ಲಾ ಮರದ ನಡುವೆ ಕಾಂಡ್ಲಾ ನಡಿಗೆ ಸೇತುವೆ ರಚಿಸಿ  ಧ್ವಜಾರೋಹಣ ಮಾಡಿ ಅನ್ನವಿತ್ತ ಪ್ರಕೃತಿಯಲ್ಲಿ ರಾಷ್ಟçಪ್ರೇಮವನ್ನು ಉತ್ತೇಜಿಸುವ ಪ್ರಯತ್ನ ಮಾಡಿದೆ. ಬಿಜೆಪಿ ಮುಖಂಡ ಪ್ರಮೋದ್ ಮದ್ವರಾಜ್ ಇವರು ಧ್ವಜಾರೋಹಣಗೈದು ಮಾತನಾಡಿ ಯುವಕರ ಕಾರ್ಯ ಪ್ರಶಂಸನೀಯ,ಯುವಕರಲ್ಲಿನ ರಾಷ್ಟç ಪ್ರೇಮ ಯುವ ಜನಾಂಗಕ್ಕೆ ಮಾದರಿ. ಪ್ರತೀ ಬಾರಿಯೂ ನವೀನ ಆಲೋಚನೆಗಳ ಮೂಲಕ ಕಾರ್ಯ ನಿರ್ವಹಿಸಿ ಸಮಾಜಕ್ಕೆ ಮಾದರಿಯಾಗಿದ್ದರೆ ಎಂದರು.  ಸಾಲಿಗ್ರಾಮ ಕಯಾಕಿಂಗ್‌ನ ಮುಖ್ಯಸ್ಥರಾದ  ಮಿಥುನ್ ಕುಮಾರ್ ಮೆಂಡನ್ , ಲೋಕೇಶ್  ಮತ್ತಿತರು ಉಪಸ್ಥಿತರಿದ್ದರು.

ಸಾಲಿಗ್ರಾಮ ಕಯಾಕಿಂಗ್ ತಂಡ ಸೀತಾನದಿತಟದಲ್ಲಿ ಬಿಜೆಪಿ ಮುಖಂಡ ಪ್ರಮೋದ್ ಮದ್ವರಾಜ್ ಧ್ವಜಾರೋಹಣ ನೆರವೆರಿಸಿದರು. ಸಾಲಿಗ್ರಾಮ ಕಯಾಕಿಂಗ್‌ನ ಮುಖ್ಯಸ್ಥರಾದ  ಮಿಥುನ್ ಕುಮಾರ್ ಮೆಂಡನ್ , ಲೋಕೇಶ್  ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *