ಕೋಟ: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಪ್ಪು ಅಟ್ಯಾಕರ್ಸ್ ಮಣೂರು ಇವರ ವತಿಯಿಂದ ದ್ವಿತೀಯ ವರ್ಷದ ಫ್ರೀಡಂ ಟ್ರೋಫಿ -2024 ವಾಲಿಬಾಲ್ ಪಂದ್ಯಾಕೂಟ,ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಾಧಕ ಕೃಷಿಕ ಸತೀಶ್ ಶೆಟ್ಟಿ ನಡುಬೆಟ್ಟು,ಸಮಾಜಸೇವಕ ವಸಂತ ಪೂಜಾರಿ,ಸಮಾಜಸೇವಾ ಮಹಿಳಾ ಸಂಘಟನೆ ಸ್ನೇಹ ಕೂಟ ಮಣೂರು ಇವರುಗಳನ್ನು ಗುರುತಿಸಿ ಗೌರವಿಸಲಾಯಿತು.
ಇದೇ ವೇಳೆ ಸ್ಥಳೀಯ ಅಂಗನವಾಡಿ ಮಕ್ಕಳಿಗೆ ಬ್ಯಾಗ್ ಹಾಗೂ ಸಿಹಿತಿಂಡಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಂ.ಎನ್ ಮಧ್ಯಸ್ಥ, ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ವಿಷ್ಣುಮೂರ್ತಿ ಮಯ್ಯ, ನಿವೃತ್ತ ಉಪನ್ಯಾಸಕ ಅರುಣಾಚಾಲ ಮಯ್ಯ, ಕೋಟ ಅಮೃತೇಶ್ವರಿ ದೇಗುಲದ ಮಾಜಿ ಟ್ರಸ್ಟಿ ಸುಬ್ರಾಯ ಆಚಾರ್ಯ ಮಣೂರು, ನಿವೃತ್ತ ದೈಹಿಕ ಶಿಕ್ಷಕ ಗೋಪಾಲ ಶೆಟ್ಟಿ, ಮಾಜಿ ತಾ.ಪಂ ಸದಸ್ಯ ಭರತ ಶೆಟ್ಟಿ ಗಿಳಿಯಾರು, ಉದ್ಯಮಿಗಳಾದ ನಾಗೇಶ್ ಪೂಜಾರಿ ಮಣೂರು, ಸಂತೋಷ್ ಸುವರ್ಣ, ದಿನಕರ ಶೆಟ್ಟಿ ನಡುಬೆಟ್ಟು,ಕೋಟ ಪಂಚಾಯತ್ ಸದಸ್ಯ ಶಿವರಾಮ ಶೆಟ್ಟಿ, ಅಂಗನವಾಡಿ ಶಿಕ್ಷಕಿ ನಿರ್ಮಲ ಮಣೂರು, ಅಪ್ಪು ಅಟ್ಯಾಕರ್ಸ್ನ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಅಪ್ಪು ಅಟ್ಯಾಕರ್ಸ್ ಮಣೂರು ಇವರ ವತಿಯಿಂದ ದ್ವಿತೀಯ ವರ್ಷದ ಫ್ರೀಡಂ ಟ್ರೋಫಿ -2024 ವಾಲಿಬಾಲ್ ಪಂದ್ಯಾಕೂಟದಲ್ಲಿ ಸಾಧಕ ಕೃಷಿಕ ಸತೀಶ್ ಶೆಟ್ಟಿ ನಡುಬೆಟ್ಟು, ಸಮಾಜಸೇವಕ ವಸಂತ ಪೂಜಾರಿ, ಸಮಾಜಸೇವಾ ಮಹಿಳಾ ಸಂಘಟನೆ ಸ್ನೇಹ ಕೂಟ ಮಣೂರು ಇವರುಗಳನ್ನು ಗುರುತಿಸಿ ಗೌರವಿಸಲಾಯಿತು.