ಮಿಸ್ ಇಂಡಿಯಾ , ಕಾರ್ಪೊರೇಟ್ ವಲಯದಲ್ಲಿ ದಲಿತರು, ಒಬಿಸಿಗಳು ಮಹಿಳೆಯರು ಎಷ್ಟಿದ್ದಾರೆ? ಮಿಸ್ ಇಂಡಿಯಾದಲ್ಲಿ ಭಾಗವಹಿಸಲು ನಮ್ಮ ದಲಿತ ಮಹಿಳೆಯರಿಗೆ ಯಾಕೆ ಅವಕಾಶ ಇಲ್ಲ : ನಮ್ಮ ನಾಯಕರಾದ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಉತ್ತರ ಕೊಡಬೇಕಾಗಿದೆ !?
ದೇಶದ ಎಲ್ಲಾ ರಾಜ್ಯಗಳಲ್ಲಿ ಜಾತಿ ಗಣತಿ ಆಗಲೇಬೇಕು, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಏನಾದರೂ ಮಾನ ಮರ್ಯಾದೆ ಇದ್ರೆ ದಲಿತರಿಗೆ, ಓಬಿಸಿಯವರಿಗೆ, ಮತ್ತು ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ನ್ಯಾಯ ಜವಾಬ್ದಾರಿ ಇದ್ರೆ ಜಾತಿಗಣತಿ ಮಾಡುತ್ತಾರೆ. ಇಲ್ಲಾಂದ್ರೆ ಕೇಂದ್ರ ಬಿಜೆಪಿ ಸರ್ಕಾರ ದಲಿತ ವಿರೋಧಿ, ಒಬಿಸಿ ವಿರೋಧಿ ಮತ್ತು ಅಲ್ಪಸಂಖ್ಯಾತ ವಿರೋಧಿ ಸರ್ಕಾರವಾಗಿದೆ ಎಂದು ಹೇಳಬೇಕಾಗಿದೆ.
ನಮ್ಮ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಮನವಿಮಾಡುತ್ತೇವೆ ಬಿಜೆಪಿ ಸರ್ಕಾರ ಅವಧಿಯಲ್ಲಿ ಮಾಡಿರುವ 21 ಹಗರಣಗಳನ್ನು ಅತಿ ಶೀಘ್ರದಲ್ಲೇ ತನಿಖೆ ಮಾಡಿ ರಾಜ್ಯದ ಜನರಿಗೆ ತಿಳಿಸಬೇಕಾಗಿದೆ, ಮತ್ತು ಜೆಡಿಎಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರನ್ನು ಗಣಿ ಹಗರಣಗಳನ್ನು ಮತ್ತು ಬೇನಾಮಿ ಆಸ್ತಿಗಳ ಬಗ್ಗೆ ತನಿಖೆ ಮಾಡಬೇಕು ಒತ್ತಾಯ ಮಾಡುತ್ತಿದ್ದೇವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರ ಸತೀಶ್ ಜಪ್ತಿಯವರು ಅಗ್ರಹಿಸಿದ್ದಾರೆ