ಕೋಟ: ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ವತಿಯಿಂದ ಕೈಗೊಳ್ಳಲಾದ ಸರಣಿ ಅಭಿವೃದ್ಧಿಕಾರಗಳನ್ನು ಜಿಲ್ಲಾ ಗವರ್ನರ್ ದೇವಾನಂದ್ ಅವರ ಉಪಸ್ಥಿತಿಯಲ್ಲಿ ಇತ್ತಿಚಿಗೆ ಉದ್ಘಾಟನೆ ನಡೆಸಲಾಯಿತು.
ಕ್ಲಬ್‌ನ ಭೇಟಿಗಾಗಿ ಆಗಮಿಸಿದ ಗವರ್ನರ್ ಅವರನ್ನು ರೋಟರಿ ಭವನದಲ್ಲಿ ಸರ್ವ ಸದಸ್ಯರು ಸ್ವಾಗತಿಸಿದರು. ಅನಂತರ ವಡ್ಡರ್ಸೆ ಆರೋಗ್ಯ ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ ದಿ.ಬನ್ನಾಡಿ ಪದ್ದು ಆಚಾರ್ ಸ್ಮರಣಾರ್ಥ ಕೊಡುಗೆಯಾಗಿ ನೀಡಲಾದ ಔಷಧಗಳನ್ನು ಹಸ್ತಾಂತರಿಸಲಾಯಿತು. ಮೂಡುಗಿಳಿಯಾರು ಅಂಗನವಾಡಿ ಭೇಟಿ ನೀಡಿ ದಾನಿಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ ಬ್ಯಾಗ್‌ಗಳನ್ನು ವಿತರಿಸಲಾಯಿತು.
ಮೂಡುಗಿಳಿಯಾರು ಸಂಯುಕ್ತ ಪ್ರೌಢ ಶಾಲೆಗೆ ರೋಟರಿ ಸಮುದಾಯದಳ, ದಾನಿಗಳ ಸಹಕಾರದಲ್ಲಿ ನಿರ್ಮಿಸಿದ ಸ್ಟೇಜ್ ಉದ್ಘಾಟಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಕುರಿತು ಮಾಹಿತಿ ಕಾರಗಾರ ನಡೆಯಿತು. ಕೋಟ ಠಾಣೆಯ ಎ.ಎಸ್.ಐ. ಗೋಪಾಲ ಪೂಜಾರಿ ಮಾಹಿತಿ ನೀಡಿದರು. ರೋಟರಿ ವತಿಯಿಂದ ದುರಸ್ತಿಗೊಳಿಸ ಲಾದ ಬಸ್ ತಂಗುದಾಣದ ವೀಕ್ಷಣೆ, ಗಿಡನೆಡುವ ಕಾರ್ಯಕ್ರಮ, ಹೊನ್ನರಿಯಲ್ಲಿ ದಾನಿಗಳ ಸಹಕಾರದಿಂದ ರೋಟರಿ ವತಿಯಿಂದ ನಿರ್ಮಿಸಲಾದ ಬಸ್ ತಂಗುದಾಣದ ಉದ್ಘಾಟನೆ ನೆರವೇರಿತು. ರೋಟರಿ ಕೋಟ-ಸಾಲಿಗ್ರಾಮದ ಮಾದರಿ ಸಮಾಜದ ಸೇವೆಯ ಕುರಿತು ಜಿಲ್ಲಾ ಗವರ್ನರ್ ದೇವಾನಂದ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಟ-ಸಾಲಿಗ್ರಾಮದ ಅಧ್ಯಕ್ಷ ತಿಮ್ಮ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಹಾಯಕ ಗವರ್ನರ್ ಮಮತಾ ಶೆಟ್ಟಿ, ಸಿ.ಎ.ರೇಖಾ ದೇವಾನಂದ್, ಕಾರ್ಯದರ್ಶಿ ಚಂದ್ರ ಪೂಜಾರಿ, ಮಾಜಿ ಸಹಾಯಕ ಗವರ್ನರ್ ನರಸಿಂಹ ಪ್ರಭು, ವಲಯ ಸೇನಾನಿ ಗಣೇಶ್ ಹೊಳ್ಳ ,ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಭರತ್ ಶೆಟ್ಟಿ ,ರೋಟರಿ ಸಮುದಾಯ ದಳದ ಗೋಪಾಲ ಜಿ, ಕಾರ್ಯದರ್ಶಿ ಲಲಿತಾ, ದಾನಿಗಳಾದ ಆಶೋಕ್ ಶೆಟ್ಟಿ ಮೊದಲಾದವರು ಇದ್ದರು.
ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ವತಿಯಿಂದ ಕೈಗೊಳ್ಳಲಾದ ಸರಣಿ ಅಭಿವೃದ್ಧಿಕಾರಗಳನ್ನು ಜಿಲ್ಲಾ ಗವರ್ನರ್ ದೇವಾನಂದ್ ಅವರ ಉಪಸ್ಥಿತಿಯಲ್ಲಿ ಇತ್ತಿಚಿಗೆ ಉದ್ಘಾಟನೆ ನಡೆಸಲಾಯಿತು. ಕೋಟ-ಸಾಲಿಗ್ರಾಮದ ಅಧ್ಯಕ್ಷ ತಿಮ್ಮ ಪೂಜಾರಿ, ರೋಟರಿ ಸಹಾಯಕ ಗವರ್ನರ್ ಮಮತಾ ಶೆಟ್ಟಿ, ಸಿ.ಎ.ರೇಖಾ ದೇವಾನಂದ್, ಕಾರ್ಯದರ್ಶಿ ಚಂದ್ರ ಪೂಜಾರಿ, ಮಾಜಿ ಸಹಾಯಕ ಗವರ್ನರ್ ನರಸಿಂಹ ಪ್ರಭು ಮತ್ತಿತರರು ಇದ್ದರು.