ಬೈಂದೂರು: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಎಂಬಲ್ಲಿ ವಾಸುದೇವ ಖಾರ್ವಿ ಯವರ ಮನೆಯ ಆವರಣ ಗೋಡೆಯ ವಿಚಾರವಾಗಿ ಈರಣ್ಣ ಸುಂಕದ ಯಾನೆ ವೀರೇಶ ಎಂಬಾತನು ಪಕ್ಕದ . ಮನೆವನಾಗಿದ್ದು ಮನೆಯ ಕಂಪೌಂಡಿನ ವಿಚಾರಕ್ಕೆ ನೇರವಾಗಿ ಮನೆಗೆ ಪ್ರವೇಶ ಮಾಡಿ ಮಾರಕಾಸ್ತ್ರದಿಂದ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ. ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲು, ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಗಂಗೊಳ್ಳಿ ಠಾಣೆಯಲ್ಲಿ ದಾಖಲಾಗಿದೆ.
Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180