• Sat. Oct 12th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟ ಪದವಿ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಮತ್ತು 30 ಗಂಟೆಗಳ ಕೌಶಲ್ಯಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ByKiran Poojary

Sep 9, 2024

ಕೋಟ: ಲಕ್ಷಿ÷್ಮÃ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ ಮತ್ತು ನರೇನ್ ಅಕಾಡೆಮಿ ಬ್ರಹ್ಮಾವರ ಇವರ ಸಂಯುಕ್ತಾಶ್ರಯದಲ್ಲಿ ಆ.16ರಿಂದ ಸೆ.05ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬAಧಿಸಿದ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಸೆ.05ರಂದು ನಡೆದ ಸಮಾರೋಪ ಸಮಾರಂಭದಲ್ಲಿ ನರೇನ್ ಅಕಾಡೆಮಿಯ ಮುಖ್ಯ ನಿರ್ವಹಣಾಧಿಕಾರಿ  ಚಂದ್ರಕಾAತ್ ಅವರು ಮಾತನಾಡಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಇನ್ನಷ್ಟು ಫಲಕಾರಿಗೊಳಿಸಬೇಕಾದರೆ ಐಎಎಸ್,ಕೆ.ಎಎಸ್ ಹಾಗೂ ಇತರ ಸರಕಾರಿ ಹುದ್ದೆಗಳಿಗೆ ಪೂರ್ವ ಸಿದ್ದತೆಯನ್ನು ಪದವಿ ಹಂತದಲ್ಲಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಂದ್ರಕಾAತ್ ಇವರ ಸೇವೆಯನ್ನು ಗುರುತಿಸಿ, ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಪ್ರಥಮ ಬಿ.ಸಿ.ಎ. ವಿದ್ಯಾರ್ಥಿನಿ ತ್ರಿಶಾ ಮತ್ತು ಬಿ.ಎ ವಿದ್ಯಾರ್ಥಿನಿ ಸಹನಾ ಸ್ಪರ್ಧಾತ್ಮಕ ತರಬೇತಿ ಕಾರ್ಯಕ್ರಮವು ಪರಿಣಾಮಕಾರಿಯಾಗಿದೆ ಎಂದು ಅನಿಸಿಕೆಯಲ್ಲಿ ಹೇಳಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸಿ, ಗುರುಗಳನ್ನು ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಪ್ರೊ. ಸುನೀತ.ವಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗರ್ಶನವನ್ನು ಪದವಿಯ ಆರಂಭದ ಹಂತದಲ್ಲಿ ನೀಡಿದಾಗ ಅವರು ಹೆಚ್ಚು ಹೆಚ್ಚು ಸರಕಾರಿ ಹುದ್ದೆಗಳಿಗೆ ಸ್ಪರ್ಧಿಸುವ ಪ್ರಯತ್ನ ಮಾಡುವಂತೆ ಪ್ರೇರೇಪಿಸಬಹುದೆಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ ಆಚಾರ್, ಕಾರ್ಯಕ್ರಮದ ಸಂಘಟಕರಾದ ಡಾ. ಸುಬ್ರಮಣ್ಯ ಎ, ಪ್ರಾಧ್ಯಾಪಕರಾದ ಡಾ. ಶಂಕರ ನಾಯ್ಕ ಬಿ,  ಮುರಳಿ ಎಂ. ಜಿ,  ರಾಜಣ್ಣ ಎಂ, ಕು. ಸುಷ್ಮಾ,  ಆರತಿ ಹಾಗೂ ಉನ್ನತಿ ತರಬೇತಿದಾರ ಅರವಿಂದ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಥಮ ಬಿ.ಸಿ.ಎ. ಶಮಿತಾ ನಿರೂಪಿಸಿದರು. ಕೀರ್ತನ ಪ್ರಥಮ ಬಿ.ಸಿ.ಎ. ಸ್ವಾಗತಿಸಿ, ಸ್ನೇಹ ಪ್ರಥಮ ಬಿ.ಕಾಂ ವಂದಿಸಿದರು.




ಲಕ್ಷಿ÷್ಮÃ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ ಮತ್ತು ನರೇನ್ ಅಕಾಡೆಮಿ ಬ್ರಹ್ಮಾವರ ಇವರ ಸಂಯುಕ್ತಾಶ್ರಯದಲ್ಲಿ ಆ.16ರಿಂದ ಸೆ.05ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬAಧಿಸಿದ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಕಾರ್ಯಕ್ರಮ ಜರಗಿತು. ಪ್ರಾಂಶುಪಾಲರಾದ ಪ್ರೊ. ಸುನೀತ.ವಿ, ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ ಆಚಾರ್, ನರೇನ್ ಅಕಾಡೆಮಿಯ ಮುಖ್ಯ ನಿರ್ವಹಣಾಧಿಕಾರಿ  ಚಂದ್ರಕಾAತ್ ಮತ್ತಿತರರು ಇದ್ದರು.
ಕೋಟ.ಸೆ.9  ಪಡುಕರೆ ಕಾಲೇಜು


Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180

Leave a Reply

Your email address will not be published. Required fields are marked *