• Sat. Oct 12th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟತಟ್ಟು ಕಲ್ಮಾಡಿ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ
ಕೇಂದ್ರ ಸರಕಾರದ ಯೋಜನೆ ಸಮಪರ್ಕ ಅನುಷ್ಠಾನ – ಸತೀಶ್ ಕುಂದರ್

ByKiran Poojary

Sep 9, 2024

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕೋಟ ಕಲ್ಮಾಡಿ ಅಂಗನವಾಡಿ ಸಹಯೋಗದೊಂದಿಗೆ ಥೀಂ ಪಾರ್ಕ್ನ  ಕಿರು ಸಭಾಂಗಣದಲ್ಲಿ ಪೋಷಣ್ ಮಾಸಾಚರಣೆಯ ಕಾರ್ಯಕ್ರಮವು  ಇತ್ತೀಚಿಗೆ ಜರಗಿತು.
ಕಾರ್ಯಕ್ರಮವನ್ನು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಬಾರಿಕೆರೆ ಉದ್ಘಾಟಿಸಿ ಮತನಾಡಿ  ಕೇಂದ್ರ ಸರ್ಕಾರದ ಪೋಷಣ್ ಮಾಸಾಚರಣೆಯ ಅಭಿಯಾನವು ಪ್ರತಿ ಮನೆಗಳನ್ನು ತಲುಪುವಲ್ಲಿ ಅಂಗನವಾಡಿ ಕೇಂದ್ರಗಳ ಕಾರ್ಯ ಶ್ಲಾಘನೀಯ ಎಂದರು.

ಮುಖ್ಯ ಅಭ್ಯಾಗತರಾಗಿ ಕಾರಂತ ಥೀಂ ಪಾರ್ಕನ ಟ್ರಸ್ಟಿ ಸುಬ್ರಾಯ ಆಚಾರ್  ಮಾತನಾಡಿ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಅಂಗನವಾಡಿ ಕೇಂದ್ರದಲ್ಲಿ ಮಾತ್ರವೇ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಗ್ಗೆ ಮೇಲ್ವಿಚಾರಕಿ  ಸವಿತಾ ಮಾಹಿತಿ ನೀಡಿದರು. ದಿನದ ವಿಷಯವಾದ ಮಕ್ಕಳ ತೂಕ ಹಾಗೂ ಗರ್ಭಿಣಿಯರ ತೂಕವನ್ನು ಪರಿಶಿಲಿಸಲಾಯಿತು. ತಾಯಿಯ ಹೆಸರಲ್ಲಿ ಗಿಡ ನೀಡುವುದಕ್ಕೆ ಗಿಡಗಳನ್ನು ವಿತರಿಸಲಾಯಿತು. ವಿವಿಧ ಬಗೆಯ ಪೌಷ್ಟಿಕ ಆಹಾರಗಳು ಸೊಪುö್ಪ ತರಕಾರಿಗಳು ಹಾಗೂ ಔಷಧೀಯ ಸಸ್ಯಗಳನ್ನು  ಪ್ರದರ್ಶನಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ, ಪಂಚಾಯತ್ ಸದಸ್ಯ ವಾಸು ಪೂಜಾರಿ ಉಪಸ್ಥಿತರಿದ್ದು ಮಕ್ಕಳ ಪೋಷಕರು ಸ್ತಿçÃಶಕ್ತಿ ಸದಸ್ಯರು, ಅಂಗನವಾಡಿ ಫಲಾನುಭವಿಗಳು, ಆಶಾ ಹಾಗೂ  ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದರು. ಶಿಕ್ಷಕರ ದಿನಾಚರಣೆಯ ವಿಷೇಶವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಿವಿಧ ಆಟೋಟಗಳನ್ನು ಆಯೋಜಿಸಲಾಗಿತ್ತು. ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷಿ÷್ಮÃ.ಎನ್ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.

ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕೋಟ ಕಲ್ಮಾಡಿ ಅಂಗನವಾಡಿ ಸಹಯೋಗದೊಂದಿಗೆ ನಡೆದ ಪೋಷಣ್ ಮಾಸಾಚರಣೆಯ ಕಾರ್ಯಕ್ರಮವನ್ನು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಬಾರಿಕೆರೆ ಉದ್ಘಾಟಿಸಿದರು. ಕಾರಂತ ಥೀಂ ಪಾರ್ಕನ ಟ್ರಸ್ಟಿ ಸುಬ್ರಾಯ ಆಚಾರ್, ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷಿ÷್ಮಎನ್ ಮತ್ತಿತರರು  ಇದ್ದರು.


Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180

Leave a Reply

Your email address will not be published. Required fields are marked *