ಕೋಟ: ಕೋಟತಟ್ಟು ಬಾರಿಕೆರೆಯ ಬೋನ್ ಕ್ಯಾನ್ಸರ್‌ಗೆ ತುತ್ತಾದ ಹತ್ತು ವರ್ಷದ ಬಾಲಕ ಕ್ರತಿಕ್ ಗಾಣಿಗ ಇವರಿಗೆ ಆರ್ಥಿಕ ಸಹಾಯಕ್ಕಾಗಿ ವಿವಿಧ ಸಂಘಸಂಸ್ಥೆಗಳ ಮೊರೆಹೋಗಿದ್ದು ಈ ಹಿನ್ನಲ್ಲೆಯಲ್ಲಿ ಸುಮಾರು 25ರಿಂದ 28ಲಕ್ಷ ವೆಚ್ಚದ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು ಅಶಕ್ತ ಕುಟುಂಬವಾದ ಈ ಮಗುವಿನ ನೆರವಿಗೆ ಮಣೂರಿನ ಅಪ್ಪು ಅಟ್ಯಾಕರ್ಸ್ ಪಣ ತೊಟ್ಟು ಗಣೇಶ ಚತುರ್ಥಿ ದಿನದಂದು ಶ್ರೀ ಆನೆಗುಡ್ಡೆ ದೇವಸ್ಥಾನ ಕುಂಭಾಶಿ, ಕೊಳಲು ಕಲ್ಲು ದೇವಸ್ಥಾನ , ಗುಡ್ಡಟ್ಟುವಿನಾಯಕ ದೇವಸ್ಥಾನ , ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿ ಅನೇಕ ವೇಷ ಧರಿಸಿ ಜನರನ್ನು ರಂಜಿಸಿ ಅವರಿಂದ ಹಣ ಸಂಗ್ರಹಿಸಿ ಮಗುವಿನ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ.
ಅಪ್ಪು ಅಟ್ಯಾಕರ್ಸ್ ಸಂಸ್ಥೆ ಒಟ್ಟು ಸಂಗ್ರಹಿಸಿದ 35,261 ರೂಪಾಯಿಯನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್.ಹೆಚ್.ಕುಂದರ್ ಅವರ ಸಮ್ಮುಖದಲ್ಲಿ ಕೃತಿಕ್ ಗಾಣಿಗ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಅಪ್ಪು ಅಟ್ಯಾಕರ್ಸ್ ತಂಡದ ಪ್ರಮುಖರು ಉಪಸ್ಥಿತರಿದ್ದರು.
ಅಪ್ಪು ಅಟ್ಯಾಕರ್ಸ್ ಸಂಸ್ಥೆಯಿಂದ ವತಿಯಿಂದ ಸಂಗ್ರಹಿಸಿದ 35,261 ರೂಪಾಯಿಯನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್.ಹೆಚ್. ಕುಂದರ್ ಅವರ ಸಮ್ಮುಖದಲ್ಲಿ ಕ್ಯಾನ್ಸರ್ ಪೀಡಿತ ಕೃತಿಕ್ ಗಾಣಿಗ ಅವರ ಕುಟುಂಬಕ್ಕೆ ಹಸ್ತಾಂತರಿಸಿದರು.
Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180