ಡೊಂಬಿವಲಿ* – ಮೊಗವೀರ ಮಹಾಜನ ಸೇವಾಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಸ್ಥಳೀಯ ಸಮಿತಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆ ಇವರ ಜಂಟಿ ಆಶ್ರಯದಲ್ಲಿ *ಅಕ್ಟೋಬರ್ 2 ನೇ ತಾರೀಕು ಬುಧವಾರ ಬೆಳಿಗ್ಗೆ 9 ರಿಂದ ಮದ್ಯಾಹ್ನ 2 ಗಂಟೆಯ* ತನಕ ಶಿಬಿರ ನಡೆಯಲಿದೆ. ಡೊಂಬಿವಲಿಯ ಪ್ರಸಿದ್ದ ವೈದ್ಯರಾದ ಡಾಕ್ಟರ್ ಅನಘಾ ಹೇರೂರ್ ಅವರ ತಂಡದಿಂದ ಉಚಿತ ನೇತ್ರ ತಪಾಸಣೆ ನಡೆಯಲಿದೆ. ನೇತ್ರ ಪರೀಕ್ಷೆ ಮಾಡಿಸುವವರು ಬೆಳಿಗ್ಗೆ 9 ಗಂಟೆಯಿಂದ ಶಿಬಿರ ದಲ್ಲಿ ಟೋಕನ್ ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಮತ್ತು ಡಾಕ್ಟರ್ ಅನಿಲ್ ಹೇರೂರ್ ತಂಡದವರಿಂದ ಮಹಿಳೆಯರಿಗಾಗಿ ಉಚಿತ ಕ್ಯಾನ್ಸರ್ ತಪಾಸಣೆಯು ನಡೆಯಲಿದೆ. ಮೊದಲು ಬರುವ 30 ರಿಂದ 35 ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆಗೆ ಅವಕಾಶವಿದೆ. ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಡಾಕ್ಟರ್ ಅನಘಾ ಹಾಗೂ ಡಾಕ್ಟರ್ ಅನಿಲ್ ರವರಿಂದ ಅರೋಗ್ಯದ ವಿಷಯದ ಪರವಾಗಿ 15 ನಿಮಿಷ ಪ್ರವಚನ ನೀಡಲಿದ್ದಾರೆ. ಸಮಾಜ ಬಾಂದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಯುತ ರಾಜು ಮೊಗವೀರ ತಗ್ಗರ್ಸೆ, ಕಾರ್ಯದರ್ಶಿ ಶ್ರೀಯುತ ಸಂತೋಷ ಪುತ್ರನ್ ಮತ್ತು ಸಮಿತಿ ಸದಸ್ಯರು ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆಯ ಕಾರ್ಯಾಧ್ಯಕ್ಷರಾದ ಶ್ರೀಯುತ ಶೇಖರ್ ಮೆಂಡನ್, ಕಾರ್ಯದರ್ಶಿ ಶ್ರೀಯುತ ಉಮೇಶ್ ಮೆಂಡನ್ ಮತ್ತು ಶಾಖೆಯ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ಸ್ಥಳ – ಮೊಗವೀರ ವ್ಯವಸ್ತಾಪಕ ಮಂಡಳಿ. ವೇದ ಬ್ರಹ್ಮ,
2 ನೇ ಮಳಿಗೆ, M.G ರೋಡ್, ಲಿಜತ್ ಪಾಪಡ್ ಮೇಲುಗಡೆ, ಡೊಂಬಿವಲಿ ಪಶ್ಚಿಮ.