Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರಾಮ ಸಾಂಗತ್ಯ ಕೃತಿ ಪ್ರಸ್ತುತಿ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಗುಪ್ತಗಾಮಿನಿ ಸಾಹಿತ್ಯ ಶಾಲೆ ಉಡುಪಿ ಇವರ ಆಶ್ರಯದಲ್ಲಿ ಇಂದಿರಾ ಜಾನಕಿ ಎಸ್ ಶರ್ಮಾ ಅವರ ರಾಮ ಸಾಂಗತ್ಯ ಕೃತಿ ಪ್ರಸ್ತುತಿಯು ಉಡುಪಿ ಕಿದಿಯೂರು ಹೋಟೆಲಿನ ಶೇಷಶಯನ ಬಾಲ್ಕನಿ ಸಭಾಂಗಣದಲ್ಲಿ ನವೆಂಬರ್ 10 ಭಾನುವಾರದಂದು ನಡೆಯಿತು.

ಸಭಾಧ್ಯಕ್ಷತೆಯನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು. ಕೃತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾ ಇಂತಹ ಕೃತಿಗಳು ಸಮಾಜಕ್ಕೆ ಅತ್ಯಗತ್ಯ ವಾಗಿದ್ದು, ಕೃತಿಕಾರರು ಇನ್ನಷ್ಟು ಒಳ್ಳೆಯ ಕೃತಿಗಳನ್ನು ತರಲಿ ಎಂದು ಶುಭ ಹಾರೈಸಿದರು ಮತ್ತು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸದಾ ಚಟುವಟಿಕೆ ಯಲ್ಲಿದ್ದು, ಇನ್ನಷ್ಟು ಕೆಲಸಗಳು ಮಾಡಲಿ, ನಮ್ಮ ಸಂಪೂರ್ಣಸಹಕಾರವಿದೆ ಎಂದು ಶುಭ ಹಾರೈಸಿದರು.

ಕೃತಿ ಪ್ರಸ್ತುತಿಯನ್ನು ಹಿರಿಯ ವಿಮರ್ಶಕರಾದ ಡಾ| ಪಾರ್ವತಿ ಐತಾಳ್ ಅವರು ನೆರವೇರಿಸಿ ಕೊಟ್ಟರು . ಮುಖ್ಯ ಅತಿಥಿಗಳಾಗಿ ಪ್ರೊ ಜಿ. ಕೆ. ಭಟ್ ಸೇರಾಜೆ , ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣೈ ಹಾಗೂ ಅಧ್ಯಕ್ಷರಾದ ಪ್ರೊ. ಶಂಕರ್ ಉಪಸ್ಥಿತರಿದ್ದರು.

ಅಭಿಜಾತ ಕವಯತ್ರಿ ಕೀರ್ತಿಶೇಷ  ಸುಶೀಲಾ ಬಾಯಿ ಮರಾಠೆ ಸಂಸ್ಮರಣೆಯನ್ನು  ಹಿರಿಯ ಪತ್ರಕರ್ತ ಕೆ.  ಶ್ರೀಕರ ಭಟ್ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಡಾ. ಹರಿಕೃಷ್ಣ ಪುನರೂರು ಅವರಿಗೆ ಗುಪ್ತಗಾಮಿನಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತ ಬಾ. ಸಾಮಗ ಹಾಗು ಅಶ್ವಿನಿ ಎಸ್  ಶರ್ಮಾ ಇವರನ್ನು ಗೌರವಿಸಿ ಅಭಿನಂದಿಸಲಾಯಿತು
ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್‍ .ಪಿ ಮಾಡಿ,ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಮಹಿಳಾ ಪ್ರತಿನಿಧಿ  ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮವನ್ನು ನಿರೂಪಿಸಿದರು. 

ಜನಾರ್ದನ್ ಕೊಡವೂರು ಧನ್ಯವಾದವಿತ್ತರು.  ಗೀತಾ ಗಾಯನವನ್ನು ಅಂಬಿಕಾ ಉಪಾಧ್ಯ ಕಂಬಳಕಟ್ಟ ಮತ್ತು ಪ್ರಾರ್ಥನೆಯನ್ನು ಶ್ರಾವಣಿ ಶಾಸ್ತ್ರಿ  ನಡೆಸಿಕೊಟ್ಟರು

Leave a Reply

Your email address will not be published. Required fields are marked *