• Tue. Dec 10th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಮರಾಠಿ ಮಣ್ಣಿನಲ್ಲಿ ತುಳುನಾಡ ಮಣ್ಣಿನ ಕಂಪು
ಪುಣೆಯಲ್ಲಿ ರಜತ ಮಹೋತ್ಸವ ಸಂಭ್ರಮದಲ್ಲಿ ತುಳುನಾಡ ಜಾತ್ರೆ

ByKiran Poojary

Nov 12, 2024

ಪುಣೆ :  ಮಹಾರಾಷ್ಟ್ರದ ಪುಣ್ಯ ಭೂಮಿ ಸಾಂಸ್ಕೃತಿಕ ನಗರಿ ಪುಣೆಯ ಹೆಮ್ಮೆಯ ಸಂಸ್ಥೆ ತುಳುಕೂಟ ಪುಣೆ ರಜತ ಮಹೋತ್ಸವದ ಸಂಭ್ರಮವು ಬೆಳಿಗ್ಗೆ 9 ರಿಂದ ಸಾಯಂಕಾಲ 9 ರ ವರೆಗೆ ಬಂಟರ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಮ್ನನ ನಾಡೋಜ ಡಾ. ಜಿ. ಶಂಕರ್ ವೇದಿಕೆಯಲ್ಲಿ ತುಳುನಾಡ ಜಾತ್ರೆ, ವೈಭವದ ಮೆರವಣಿಗೆ, ಪೂರ್ಣ ಕುಂಭ ಸ್ವಾಗತದೊಂದಿಗೆ, ಅದ್ದೂರಿಯಾಗಿ ಜರುಗಿತು.  ಈ ಕಾರ್ಯಕ್ರಮವನ್ನು ಪುಣೆಯಲ್ಲಿ ಪ್ರಥಮ ಬಾರಿಗೆ ತುಳುನಾಡ ಜಾತ್ರೆಯಾಗಿ ಸಮಸ್ತ ತುಳು-ಕನ್ನಡ ಬಾಂಧವರಿಂದ ಆಚರಿಸಲ್ಪಟ್ಟರು.
ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮತ್ತು  ಪುಣೆಯಲ್ಲಿ ಹಾಗೂ ಹೊರ ರಾಜ್ಯ-ದೇಶಗಳಲ್ಲಿ ವಿಶೇಷ ಸಾಧನೆ ಮಾಡಿದಂತಹ 25 ತುಳುನಾಡಿನ ಸಾಧಕರಿಗೆ “ಗೌರವ ಪ್ರಶಸ್ತಿ”ಗಳನ್ನು ಪ್ರಧಾನಿಸಿ ಗೌರವಿಸಲಾಯಿತು. 

“ಡಾ. ಪ್ರಕಾಶ್ ಶೆಟ್ಟಿ” ತುಳುನಾಡ ಪ್ರಾಚ್ಯ ಮತ್ತು ಗ್ರಾಮೀಣ ವಸ್ತುಸಂಗ್ರಹಾಲಯ ಉದ್ಘಾಟನೆಗೊಂಡು,
ಇಲ್ಲಿ ಹುಟ್ಟಿ ಬೆಳೆದ ತುಳುವರಿಗೆ ತುಳುನಾಡ ಕಲೆ ಸಂಸ್ಕೃತಿ, ಆಚಾರ, ವಿಚಾರಗಳು, ಪುರಾತನ ತುಳುನಾಡಿನ ಉಪಯೋಗಿಸುತಿದ್ದ ಪ್ರಾಚ್ಯ ವಸ್ತುಗಳ ಪ್ರದರ್ಶನ, ಸ್ತಬ್ದ ಚಿತ್ರಗಳ ಪ್ರದರ್ಶನ, ಅದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಯಿತು. ಬೆಳಿಗ್ಗೆ 9.00 ರಿಂದ 10.30 ರವರೆಗೆ ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದಿಂದ ತುಳು ಭಜನೆ ಮತ್ತು ಜಾನಪದ ಗೀತೆ, ಹಾಗೂ ಶ್ರೀ ವಿಠಲ್ ನಾಯಕ್ ಕಲ್ಲಡ್ಕ ಮತ್ತು ತಂಡ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ನಡೆಯಿತು. ಜೊತೆಗೆ ತುಳುನಾಡ ಶೈಲಿಯ ಪ್ರೀತಿ ಭೋಜನ ಏರ್ಪಡಿಸಲಾಗಿತ್ತು.  ಪುಣೆ ತುಳುವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಿತು.

ರಜತ ಮಹೋತ್ಸವದ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು ಮಾತನಾಡುತ್ತ ತುಳುಕೂಟದ ಪ್ರಾರಂಭದ ಸದಸ್ಯನಾಗಿ ತುಳುವನಾಗಿ ನನ್ನ ಸೇವೆಯನ್ನು ಸದಾ ನೀಡುತ್ತಾ ಬಂದವ. ಪುಣೆಯಲ್ಲಿ ನೆಲೆಸಿರುವ ಎಲ್ಲಾ ಧರ್ಮ, ಜಾತಿ ಭಾಂದವರ ತುಳು ಸಂಘಟನೆಯಿದ್ದಾರೆ ಅದು ತುಳುಕೂಟ ಪುಣೆಯಾಗಿದೆ.

ತುಳುಕೂಟ ಮೂಲಕ ತುಳು-ಕನ್ನಡಿಗ ಮಕ್ಕಳ ಶಿಕ್ಷಣ, ಅರೋಗ್ಯ, ಕಷ್ಟ ಸುಖಗಳಿಗೆ ಸ್ಪಂದಿಸಿ ಸಹಕಾರ ನೀಡಿ ಸಂಘವನ್ನು ಬೆಳೆಸಿದ್ದೇವೆ. ತುಳುಕೂಟಕ್ಕೆ ಏನಾದರೂ ಮಾಡಬೇಕೆಂಬ ಇಚ್ಛೆಯಂತೆ ತುಳುಕೂಟದ ಅಧ್ಯಕ್ಷರು ಕೈಗೊಂಡ ಸ್ವಂತ ಕಚೇರಿ, ಮಿನಿ ತುಳು ಭವನದ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ಪುಣೆ ತುಳುಕೂಟ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ಅಶ್ವತಗುತ್ತು ಮಾತನಾಡುತ್ತ 25ವರ್ಷಗಳ ಕಾಲ ತುಳುವರಿಗಾಗಿ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದ ಸಂಘಕ್ಕೆ ಸ್ಥಾಪಕ ಅಧ್ಯಕ್ಷರ ಬಯಕೆಯಂತೆ ರಜತ ಮಹೋತ್ಸವದ ಸಂಭ್ರಮ ಸಂಧರ್ಭದಲ್ಲಿ ಸ್ವಂತ ಕಛೇರಿ ಖರೀದಿಯೊಂದಿಗೆ, ಮಿನಿ ಭವನವನ್ನಾಗಿ ಪರಿವರ್ತಿಸಿ ತುಳುವರ ಸೇವೆಗಾಗಿ ನೀಡುವ ಉದ್ದೇಶದೊಂದಿಗೆ ನಾವು ಕೈ ಗೊಂಡ ಕಾರ್ಯಕ್ರಮ ಫಲಪ್ರದವಾಗಿ ಸಾಗುತಿದೆ ಎಂದು ತಿಳಿಸಿದರು.

ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವ ದತ್ತ ಸಂಸ್ಥಾನಂ, ಶ್ರೀ ಕ್ಷೇತ್ರ ಒಡಿಯೂರು ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಅನಂತ ಕೃಷ್ಣ ಅಸ್ರಣ್ಣ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಕಟೀಲು, ಶ್ರೀ ಡಾ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ, ನಾಡೋಜ ಡಾ. ಜಿ. ಶಂಕರ್ ಸ್ಥಾಪಕರು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ, ಡಾ. ಕೆ. ಧರಣಿದೇವಿ ಮಾಲಗತ್ತಿ IPS, ಎ.ಸಿ. ಭಂಡಾರಿ ಅಧ್ಯಕ್ಷರು, ಅಖಿಲ ಭಾರತ ತುಳು ಒಕ್ಕೂಟ, ಶ್ರೀ ಸೂರ್ಯಕಾಂತ್ ಸುವರ್ಣ ಕಾರ್ಯಾಧ್ಯಕ್ಷರು, ಭಾರತ್ ಕೋ ಅಪರೇಟಿವ್ ಬ್ಯಾಂಕ್ ಮುಂಬಯಿ, ಯಶಪಾಲ್ ಸುವರ್ಣ ಶಾಸಕರು ಉಡುಪಿ, ಶ್ರೀ ಉದಯ ಕುಮಾರ್ ಶೆಟ್ಟಿ ಮುನಿಯಾಲ್  ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್,  ರವಿಶಂಕರ್ ಶೆಟ್ಟಿ ಬಡಾಜೆ ಆಡಳಿತ ಮೊಕೇಸರರು ಅಣ್ಣಪ್ಪ ಪಂಜುರ್ಲಿ, ಜುಮಾದಿಬಂಟ ದೈವಸ್ಥಾನ ಅಮ್ಮಾಡಿ, ಬಂಟ್ವಾಳ ತಾಲೂಕು, ಶ್ರೀ ಜಯ ಕೋಟ್ಯಾನ್ ಅಧ್ಯಕ್ಷರು, ದಕ್ಷಿಣ ಕನ್ನಡ ಉಡುಪಿ ಮೊಗವೀರ ಸಭಾ, ಶ್ರೀ ಡಾ. ಡೆವಿಸ್ ಫ್ರಾಂಕ್ ಫೆರ್ನಾಂಡಿಸ್, ಅನಿವಾಸಿ ಭಾರತೀಯ, ಶ್ರೀ ಉಮೇಶ್ ಶೆಟ್ಟಿ ಕಳತ್ತೂರು, ಖ್ಯಾತ ವಕೀಲರು ಉಡುಪಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ಶ್ರೀ ಡಾ. ಪ್ರಕಾಶ್ ಶೆಟ್ಟಿ ಎಂ. ಆರ್. ಜಿ. ಗ್ರೂಪ್ಸ್, ಬೆಂಗಳೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು, ಮಂಗಳೂರು, ಶ್ರೀ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು ಜಾಗತಿಕ ಬಂಟರ, ಸಂಘ, ಶ್ರೀ ಸಂತೋಷ್ ಶೆಟ್ಟಿ ಇನ್ನಪಾರ್ಕಿಲ್ ಪೆಟ್ಟು ಅಧ್ಯಕ್ಷರು ಬಂಟರ ಸಂಘ ಪುಣೆ [ರಿ], ಶ್ರೀ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಮುಂಬಯಿ [ರಿ], ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ
ಅಧ್ಯಕ್ಷರು ತುಳುಕೂಟ ಉಡುಪಿ, ಶ್ರೀ ರತ್ನಾಕರ್ ಹೆಗ್ಡೆ ಮಟ್ಟಾರ್ ಖ್ಯಾತ ವಕೀಲರು ಉಡುಪಿ, ಪ್ರತಾಪ್‌ ಸಿಂಹಾ ನಾಯಕ್‌ ಎಂಎಲ್‌ ಸಿ, ವೇದವ್ಯಾಸ್‌ ಕಾಮತ್‌ ಶಾಸಕರು ಮಂಗಳೂರು ದಕ್ಷಿಣ, ಉಡುಪಿ ತೋನ್ಸೆ ಮನೋಹರ್‌ ಶೆಟ್ಟಿ, ಹಾಗೂ ಸಲಹಾ ಸಮಿತಿ ತುಳುಕೂಟ ಪುಣೆ ಮತ್ತ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ನವನೀತ ಶೆಟ್ಟಿ ಮತ್ತು ಡಾ. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

25 ತುಳು ಪ್ರಶಸ್ತಿ ಪುರಸ್ಕೃತರು
ಶಿಕ್ಷಣ: ಡಾ. ಹೀರಾ ಅಡ್ಯಂತಾಯ ಶ್ರೀ ಮುರಳಿ ಕಡೆಕಾರ್, ಸಮಾಜ ಸೇವಕರು: ಹರೇಕಳ ಹಾಜಬ್ಬ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಶ್ರೀ ಎನ್. ಕೆ. ಶೆಟ್ಟಿ, ಶ್ರೀ ನಿತ್ಯಾನಂದ ಶೆಟ್ಟಿ ವಳಕಾಡು, ಮೊಹಮ್ಮದ್ ಫಾರೂಕ್, ಗಡಿ ಪ್ರಧಾನರು: ಶ್ರೀ ರವಿ ಶಂಕರ್ ಶೆಟ್ಟಿ ಬಡಾಜೆ, ಪರಿಸರ: ಶ್ರೀ ರಾಧಾಕೃಷ್ಣ ನಾಯ‌ರ್ ಗ್ರೀನ್ ಹೀರೋ ಆಫ್ ಇಂಡಿಯಾ, ಅನಿವಾಸಿ ತುಳುವೆ: ಶ್ರೀ ಡಾ. ಡೆವಿಡ್ ಫ್ರಾಂಕ್ ಫೆರ್ನಾಂಡಿಸ್‌, ವೈದ್ಯಕೀಯ: ಡಾ. ಚಿತ್ತರಂಜನ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಧಾರ್ಮಿಕ: ಶ್ರೀ ಕೆ. ಕೆ. ಶೆಟ್ಟಿ ಅಹಮದ್ ನಗರ್, ಭರತನಾಟ್ಯ: ಶ್ರೀಮತಿ ಸುಕನ್ಯಾ ಭಟ್, ತುಳು ಸಾಧಕರ್: ಎ. ಸಿ. ಭಂಡಾರಿ, ಶ್ರೀ ಜಯ ಕೆ. ಶೆಟ್ಟಿ, ಗೊಬ್ಬು: ಶ್ರೀ ರಾಜೇಶ್ ಪೂಜಾರಿ, ಪಾರ್ದನ: ಶ್ರೀಮತಿ ಶಾರದಾ ವಿ. ಅಂಚನ್, ತುಳು ಚಲನಚಿತ್ರ: ಶ್ರೀ ರಾಮ್ ಶೆಟ್ಟಿ, ನಾಟಕ: ಶ್ರೀ ತೋನ್ಸೆ ವಿಜಯಕುಮಾರ್ ಶೆಟ್ಟಿ ಕಲಾಜಗತ್ತು ಮುಂಬಯಿ, ಯಕ್ಷಗಾನ: ಶ್ರೀ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ತುಳುವೆ  ಹರಿಶ್ಚಂದ್ರ: ಶ್ರೀ ರಂಜಿತ್ ಶೆಟ್ಟಿ, ಪತ್ರಿಕಾ ಮಾಧ್ಯಮ:  ಶ್ರೀ ಹರೀಶ್ ಮೂಡಬಿದ್ರಿ, ಮರಣೋತ್ತರ: ದಿ. ಓಣಿಮಜಲು ಜಗನ್ನಾಥ್ ಶೆಟ್ಟಿ ದಿ. ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ.

ತುಳುಕೂಟ ಪುಣೆ(ರಿ) ಸಂಘ ನಡೆದು ಬಂದ ದಾರಿ
ಪುಣೆಯಲ್ಲಿ ತುಳುಕನ್ನಡಿಗರ ಹೆಚ್ಚು ಸಂಘ ಸಂಸ್ಥೆಗಳಿದ್ದರೂ ಪುಣೆಯಾದ್ಯಂತ ಇರುವ ತುಳುನಾಡ ಬಾಂಧವರನ್ನು ಭಾಷಿಕ ನೆಲೆಗಟ್ಟಿನಲ್ಲಿ, ಸಾಂಸ್ಕೃತಿಕ ಭಾವೈಕ್ಯತೆಯ ಹಾದಿಯಲ್ಲಿ ಒಂದೇ ಛತ್ರದಲ್ಲಿ ಸೇರಿಸುವ ಸಂಸ್ಥೆಯೇ ” ತುಳುಕೂಟ ಪುಣೆ ಮಹಾರಾಷ್ಟ್ರದ ಈ ಸಾಂಸ್ಕೃತಿಕ ನಗರಿ ಪುಣೆಯಲ್ಲಿರುವ ತುಳುನಾಡ ಬಾಂಧವರನ್ನು ಒಗ್ಗೊಡಿಸಲು, ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಯಾವುದೇ ಧರ್ಮ, ಜಾತಿಗೆ ಸೀಮಿತವಾಗದೆ ಸಾಮಾಜಿಕವಾಗಿ ನಮ್ಮ ಅಸ್ಮಿತೆಯನ್ನು ಸಾರಲು ಜಯ ಕೆ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಸಂಸ್ಥೆಯೇ ತುಳುಕೂಟ ಪುಣೆ . ನದಿಯೊಂದು ಉಗಮಿಸಿ ಹರಿಯುತ್ತಾ ತನ್ನ ಹರಿವನ್ನು ವಿಸ್ತರಿಸುತ್ತಾ ತನ್ನ ವಾಹಿನಿಯೊಳಗೆ ಅಗಾಧ ನೀರನ್ನು ಸೇರಿಸಿಕೊಂಡು ದೊಡ್ಡ ನದಿಯಾಗಿ ಹರಿದು ಸಾಗರವ ಸೇರಿದಂತೆ ಬೆರಳೆಣಿಕೆಯ ಸದಸ್ಯರಿಂದ ಆರಂಭಗೊಂಡ ತುಳುಕೂಟ ಬೆಳೆಯುತ್ತಾ ಇಂದು ಹಲವು ಏಳುಬೀಳುಗಳ ನಡುವೆಯೂ ಸಂಘವು ಹಂತ ಹಂತವಾಗಿ ಬೆಳವಣಿಗೆ ಹೊಂದುತ್ತಾ ಪುಣೆಯಲ್ಲಿಯೇ ಎಲ್ಲಾ ತುಳುನಾಡ ಬಾಂಧವರ ಅಭಿಮಾನದ ಸಂಸ್ಥೆಯಾಗಿ ರೂಪುಗೊಂಡಿದೆ. ಪ್ರತೀ ವರ್ಷ ವಾರ್ಷಿಕೋತ್ಸವದಲ್ಲಿ ಜನರು ಜಾತ್ರೆಯಂತೆ ಸಂಭ್ರಮಿಸುತ್ತಿರುವುದು ಸಂಘದ ಯಶಸ್ಸಿಗೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *