
ಕೋಟ: ಭಾರತದ ಗ್ಲೋಕೋಮ ತಜ್ಞರ ಪೈಕಿ ಬನ್ನೇರುಘಟ್ಟ ರಸ್ತೆಯಲ್ಲಿರುವ ನಾರಾಯಣ ನೇತ್ರಾಲಯದ ಸಂಶೋಧಕ ವೈದ್ಯ ಡಾ.ಬಿ.ಎಲ್ ಹರ್ಷ ಅವರು ಅಗ್ರಸ್ಥಾನದಲ್ಲಿದ್ದಾರೆ ಎಂದು ಅಮೇರಿಕಾದ ಸ್ಪಾನ್ ಪೋರ್ಟ್ ವಿಶ್ವವಿದ್ಯಾಲಯವು ಪ್ರಕಟಿಸಿದೆ.
ಡಾ.ಹರ್ಷ ಅವರು ನೇತ್ರ ತಜ್ಞರಾಗಿದ್ದು ಗ್ಲೋಕೋಮಾ ಕ್ಷೇತ್ರದಲ್ಲಿ ವಿಶೇಷ ತಜ್ಞರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರಕಟಿತ ಸಂಶೋಧನಾ ಲೇಖನಗಳ ಆಧಾರದ ಮೇಲೆ ಪ್ರತಿಷ್ಠಿತ ಸ್ಪಾನ್ ಪೋರ್ಟ್ ವಿಶ್ವವಿದ್ಯಾಲಯವು ಅಕ್ಟೋಬರ್ ತಿಂಗಳಲ್ಲಿ ಪ್ರಕಟಿಸಿರುವ ಈ ವರ್ಷದ ಪಟ್ಟಿಯ ಪ್ರಕಾರ ಭಾರತದ ಶ್ರೇಷ್ಟ ಎರಡು ಸಾವಿರ ನೇತ್ರ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಹಾಗೂ ಗ್ಲೋಕೋಮಾ ತಜ್ಞರಲ್ಲಿ ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಡಾ.ಬಿ.ಎಲ್.ಹರ್ಷ ಅವರು ಹಿರಿಯ ಕವಿ ಬಿ.ಆರ್ ಲಕ್ಷ÷್ಮಣ ರಾವ್ ಅವರ ಹಿರಿಯ ಪುತ್ರ. ಹಾಗೂ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಐರೋಡಿ ಜಗದೀಶ ಕಾರಂತರ ಅಳಿಯರಾಗಿದ್ದು ದೇಗುಲದ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
Leave a Reply