Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನರೇಗಾ ಪ್ರಗತಿ ಪರಿಶೀಲನಾ ಸಭೆ : ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಿ ಯೋಜನೆಗಳನ್ನು ತೀರ್ವಗತಿಯಲ್ಲಿ ಜನರಿಗೆ ತಲುಪಿಸಿ : ಮಾಲಪಾಟಿ

ವರದಿ : ಅಶ್ವಿನಿ ಅಂಗಡಿ, ಬಾದಮಿ

ಬಾಗಲಕೋಟೆ: ಡಿಸೆಂಬರ ೧೩ (ಕರ್ನಾಟಕ ವಾರ್ತೆ) : ನರೇಗಾ ಯೋಜನೆಯಡಿ ಹಮ್ಮಿಕೊಳ್ಳಲಾಗುವ ವಿವಿಧ ಕಾಮಗಾರಿಗಳನ್ನು ಕಾಲಾವಧಿಯಲ್ಲಿ ಪೂರ್ಣಗೊಳಿಸಿ ಸರಕಾರದ ಯೋಜನೆಗಳನ್ನು ಸಾಕಾರಗೊಳಿಸಲು ಕ್ರಮವಹಿಸುವಂತೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆಯುಕ್ತ ಪವನಕುಮಾರ ಮಾಲಪಾಟಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿಂದು ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳು ಕೇವಲ ಲೇಖಿಯಲ್ಲಿ ತಿಳಿಸಿದಂತೆ ಕಾರ್ಯವಾಗಿಲ್ಲ. ಒಂದು ಕಾಮಗಾರಿಗೆ ತೆಗೆದ ಛಾಯಾಚಿತ್ರ ಮತ್ತೊಂದು ಕಾಮಗರಿಗೆ ಹೋಲುವಂತಿವೆ. ಕಳೆದ ಒಂದು ವರ್ಷವಾದರೂ ಆಗಬೇಕಾದ ಕಾರ್ಯಗಳು ಆಗಿಲ್ಲ. ಕೆಲಸವಾಗದೇ ಎನ್.ಎಂ.ಆರ್ ಬಿಡುಗಡೆಗೊಳಿಸಲಾಗಿದೆ. ಇದರು ಅಪರಾಧ ಕಾರ್ಯವಾಗಿದ್ದು, ೧೦ ದಿನಗಳಲ್ಲಿ ಬಾಕಿ ಕಾರ್ಯಗಳನ್ನು ತೀರ್ವಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.

ಕೃಷಿ ಹಾಗೂ ಅರಣ್ಯ ಇಲಾಖೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಗಳು ತೃಪ್ತಿ ತಂದಿಲ್ಲ. ಅಧಿಕಾರಿಗಳು ಸಭೆಗೆ ಹಾಜರಾಗುವ ಪೂರ್ವದಲ್ಲಿ ಎಲ್ಲ ಕಡತಗಳನ್ನು ವ್ಯವಸ್ಥೆಗೊಳಿಸಿ ತರಬೇಕು. ಈ ಕಾರ್ಯಕ್ಕೆ ಸರಕಾರ ಸಾಕಷ್ಟು ಅನುದಾನ ಕೊಡಲು ಸಿದ್ದವಿದ್ದರೂ ನಿರ್ಧಿಷ್ಟ ಗುರಿ ತಲುಪದೇ ಇರುವುದು ವಿಷಾಧನೀಯ ಸಂಗತಿಯಾಗಿದೆ. ಇಳಕಲ್ಲ, ಬದಾಮಿ ಹಾಗೂ ಜಮಖಂಡಿ ತಾಲೂಕಿನಲ್ಲಿ ಕಾಮಗಾರಿಗಳಿಗೆ ಕೆಲವು ತಾಂತ್ರಿಕ ತೊಂದರೆಗಳು ಕಂಡುಬAದಿದ್ದರಿAದ ನಮ್ಮ ಅಧೀನದಲ್ಲಿ ಬರುವ ಆ ಕಾರ್ಯಗಳಿಗೆ ಕ್ರಮಕೈಗೊಂಡು ಸರಿಪಡಿಸಲಾಗುವುದೆಂದರು.

ಮುಧೋಳ ತಾಲೂಕಿನ ಭರಗಿ ಹಾಗೂ ವಜ್ಜರಮಟ್ಟಿ ಗ್ರಾಮಗಳಲ್ಲಿ ಕಳಪೆ ಕಾಮಗಾರಿ ಆಗಿರುವುದು ಮೇಲ್ನೋಟಕ್ಕೆ ಕಂಡುಬAದಿದ್ದು, ಆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸಹಾಯಕ ನಿರ್ದೇಶಕರು ಮೇಲ್ವಿಚಾರಣೆ ಮಾಡಲು ಸೂಚಿಸಿದ ಅವರು ಜನರಲ್ಲಿ ಇನ್ನು ಜಲಜೀವನ ಮೀಷನ್ ಹಾಗೂ ನರೇಗಾ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲ. ನಾಗರಾಳ ಗ್ರಾಮದಲ್ಲಿ ಅಂಗನವಾಡಿ ತಡೆಗೋಡೆ ನಿರ್ಮಾಣ ಪೂರ್ಣಗೊಂಡಿಲ್ಲ. ರೈತರ ಜಮೀನುಗಳಲ್ಲಿ ಹಾಕಲಾಗಿದ್ದ ಬದು ನಿರ್ಮಾಣ ಹಾಗೂ ಕೃಷಿ ಹೊಂಡ ಛಾಯಾಚಿತ್ರದಲ್ಲಿಯೇ ಕಾಮಗಾರಿ ಗುಣಮಟ್ಟ ಆಗಿಲ್ಲದಿರುವು ಕಂಡುಬರುತ್ತದೆ. ಈ ರೀತಿ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಸೂಚಿಸಿದರು.

ಮುಂದಿನ ೨೦೨೫-೨೬ನೇ ಸಾಲಿನ ನರೇಗಾ ಯೋಜನೆಯ ಕ್ರೀಯಾ ಯೋಜನೆ ತಯಾರಿಸುವ ಪ್ರಕ್ರಿಯೆಯು ಕಳೆದ ಅಕ್ಟೋಬರ ತಿಂಗಳಲ್ಲಿ ಪ್ರಾರಂಭವಾಗಿವೆ. ಈ ಪ್ರಕ್ರಿಯೆಯಲ್ಲಿ ಫಲಾನುಭವಿಗಳಿಂದ ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಂಗ್ರಹಿಸುವುದು, ಗ್ರಾಮ ಸಭೆಗಳನ್ನು ಏರ್ಪಡಿಸುವುದು ಪೂರ್ಣಗೊಂಡಿದೆ. ತದನಂತರ ಗ್ರಾಮ ಸಭಾ ನಡವಳಿಗಳನ್ನು ನರೇಗಾ ತಂತ್ರಾAಶದಲ್ಲಿ ಅಳವಡಿಸುವ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿರುವುದರಿಂದ ಕೂಡಲೇ ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕ್ರೀಯಾ ಯೋಜನೆಯನ್ನು ತಯಾರಿಸಬೇಕು ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ನರೇಗಾ ಯೋಜನೆಗಾಗಿಯೇ ಪ್ರತಿವಾರ ಸಭೆ ನಡೆಸಿ, ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ನಿರ್ದೇಶನ ನೀಡಲಾಗಿದೆ. ಇಷ್ಟಾದರೂ ತೃಪ್ತಿಕರವಾಗಿಲ್ಲ. ಇದು ಇಚ್ಚಾಶಕ್ತಿ ಕೊರತೆಯಿಂದಾಗಿದೆ. ಅಧಿಕಾರಿಗಳು ಇನ್ನಾದರೂ ಈ ಎಲ್ಲ ಕಾರ್ಯ ಯಶಸ್ವಿಗೊಳಿಸಿ ಯೋಜನೆ ಸಾಕಾರಗೊಳಿಸಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪಿ.ರುಥ್ರೇನ್, ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಪುನಿರ್ ಆರ್, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಸೇರಿದಂತೆ ತಾಲೂಕಾ ಮಟ್ಟದ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.

ನರೇಗಾ ಕಾಮಗಾರಿ ಪರಿಶೀಲನೆ
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಇಲಾಖೆಯ ಆಯುಕ್ತ ಪವನಕುಮಾರ ಮಾಲಪಾಟಿ ಅವರು ಜಿಲ್ಲೆಯ ವಿವಿಧ ತಾಲೂಕಿನ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಛಾಯಾಚಿತ್ರ ಲಗತ್ತಿಸಿದೆ.   

Leave a Reply

Your email address will not be published. Required fields are marked *