
ವರದಿ : ಅಶ್ವಿನಿ ಅಂಗಡಿ ಬಾದಮಿ
ಬಾಗಲಕೋಟೆ: ಡಿಸೆಂಬರ 13 (ಕರ್ನಾಟಕ ವಾರ್ತೆ) : ಪ್ರಸಕ್ತ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮದಿಂದ ಪರಿಶಿಷ್ಟ ಜಾತಿಯ ಸಮುದಾಯದ ಆರ್ಥಿಕ ಅಭಿವೃದ್ದಿಗಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಘಟಕ ವೆಚ್ಚ 1 ಲಕ್ಷ ರೂ.ಗಳಿಗೆ ಸಹಾಯಧನವಾಗಿ 50 ಸಾವಿರ ರೂ, ಉಳಿದ 50 ಲಕ್ಷ ರೂ.ಗಳನ್ನು ಅವಧಿ ಸಾಲದ ಶೇ.4ರ ಬಡ್ಡಿದರದಲ್ಲಿ ನೀಡಲಾಗುತ್ತದೆ. ಸ್ವಾವಲಂಬಿ ಸಾರಥಿ-ಫುಡ್ ಕಾರ್ಟ ಉದ್ದೇಶಕ್ಕಾಗಿ ಸಾಲದ ಮೊತ್ತಕ್ಕೆ ಶೇ.75 ರಷ್ಟು ಸಹಾಯಧನ ಅಥವಾ ಗರಿಷ್ಟ ಮೊತ್ತ 4 ಲಕ್ಷ ರೂ. ಉಳಿದ ಮೊತ್ತ ಬ್ಯಾಂಕ್ ಸಹಯೋಗದೊಂದಿಗೆ ನೀಡಲಾಗುತ್ತದೆ. ಕಳೆದ 2023-24 ಮತ್ತು ಪ್ರಸಕ್ತ 2024-25ನೇ ಸಾಲಿನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವದಿಲ್ಲ.
ಈಗಾಗಲೇ ಅರ್ಜಿ ಸಲ್ಲಿಸಿ ಉದ್ದೇಶಗಳ ಬದಲಾವಣೆಗೆ ಇಚ್ಚಿಸಿದಲ್ಲಿ ನಿಗಮದ ಕಲ್ಯಾಣ ಆಪ್‌ನ ಲಿಂಕ್‌ನಲ್ಲಿ ನೇರವಾಗಿ ಉದ್ದೇಶ ಬದಲಾವಣೆಗೆ ಮನವಿ ಸಲ್ಲಿಸಬಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಡಿಸೆಂಬರ 29 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ ಚವ್ಹಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235214ಗೆ ಸಂಪರ್ಕಿಸಬಹುದಾಗಿದೆ.

















Leave a Reply