
ಕೋಟ: ವಿಶ್ವವಿಖ್ಯಾತ ತಿರುಪತಿಯ ಪದ್ಮಾವತಿ ಅಮ್ಮನವರ ಬ್ರಹ್ಮೋತ್ಸವದ ಪ್ರಯುಕ್ತ ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷಾಧಿಕಾರಿ ಆನಂದತೀರ್ಥಚಾರ್ ಪಗಡಾಲ್ ಇವರ ಸಹಕಾರದೊಂದಿಗೆ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ನಿರ್ದೇಶನದಲ್ಲಿ ಯಕ್ಷಸೌರಭ ಶ್ರೀ ಹಿರೆಮಹಾಲಿಂಗೇಶ್ವರ ಕಲಾರಂಗ ಕೋಟ ಇವರ ವತಿಯಿಂದ ವೀರ ಬರ್ಬರೀಕ ಯಕ್ಷಗಾನ ಪ್ರದರ್ಶನ ಡಿ.5ರಂದು ಜರುಗಿತು.
ಹಿಮ್ಮೆಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್, ಪ್ರಶಾಂತ್ ಪಡುಕರೆ ,ಮದ್ದಳೆ ದೇವದಾಸ್ ರಾವ್ ಕೂಡ್ಲಿ, ಚಂಡೆ ರಾಹುಲ್ ಕುಂದರ್ ಕೋಡಿ ಮುಮ್ಮೆಳದಲ್ಲಿ ಬರ್ಬರೀಕನಾಗಿ ಯಕ್ಷಸೌರಭದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ, ಘಟೋತ್ಕಚನಾಗಿ ಗೋಪಾಲಕೃಷ್ಣ ಪೈ ,ಕೃಷ್ಣನಾಗಿ ಹರೀಶ್ ಭಂಡಾರಿ ಗಿಳಿಯಾರು , ಕಾಮಕಟಂಕಟಿ ಶಂಕರ ದೇವಾಡಿಗ ಕಾರ್ಕಡ, ವತ್ಸಲೆ ಪ್ರಶಾಂತ್ ಕೊಳಂಬೆ, ಗಜಕರ್ಣ ರಿತೇಶ್ ಕೊಳಂಬೆ ,ಕಪಟ ಮುನಿ ಗಿರೀಶ್ ಗಾಣಿಗ ಬೆಟ್ಲಕ್ಕಿ ,ಭೀಮ ಕೃಷ್ಣಯ್ಯ ಉಪುö್ಪಂದ , ಪ್ರಸಾದನದಲ್ಲಿ ಗಣೇಶ್ ಆಚಾರ್ಯ, ಸಂತೋಷ್ ಬಾರ್ಕುರು, ಸ್ವಸ್ತಿಕ್ ಮತ್ತು ತಂಡ ಸಹಕರಿಸಿದರು.













Leave a Reply