Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನದ ಪಾಂಡೇಶ್ವರ ಅನುದಾನಿತ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಆಶ್ರಯದಲ್ಲಿ ಚಟುವಟಿಕೆ ಆಧಾರಿತ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ


ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಅನುದಾನಿತ  ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಆಶ್ರಯದಲ್ಲಿ ಚಟುವಟಿಕೆ ಆಧಾರಿತ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ ಶನಿವಾರ ಜರಗಿತು.
ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ ಇವರು ಪ್ರಾಸ ಬದ್ಧವಾದ ಕಿರು ಕವನಗಳನ್ನು, ಮೌಲ್ಯಯುತವಾದ ಕಥೆಗಳನ್ನು ಹೇಳಿ ಮಕ್ಕಳನ್ನು ರಂಜಿಸಿದರು.

ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಥೆ ಕವನ ರಚನೆಯನ್ನು ಮಾಡಿ ತೋರಿಸಿ ಮಾಡಿಸಿದರು.  ಸಾಹಿತ್ಯ ಪರಿಷತ್‌ನ  ಅಚ್ಚುತ  ಪೂಜಾರಿ ಕಾರ್ಕಡ  ಹಾಗೂ ಬಾಗೇಶ್ವರಿ ಮಯ್ಯ ಅವರು ವಚನಗಳನ್ನು, ಪದ್ಯಗಳನ್ನು ಸರಳವಾಗಿ ಹಾಡಿ ಹಾಡಿಸಿದರು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಈ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ, ಪಂಚಾಯತ್ ಸದಸ್ಯೆ ಸುಜಾತ ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ದಾನಿಗಳಾದ ಹಂಚಿನ ಮನೆ ಹೊಳ್ಳ  ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕ ಕೃಷ್ಣ ಮಾಸ್ಟರ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಕುಸುಮ  ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕ ಬಾಳಪ್ಪ ಅವರು ಧನ್ಯವಾದಗೈದರು.

ಪಾಂಡೇಶ್ವರ ಅನುದಾನಿತ  ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಬ್ರಹ್ಮಾವರ ತಾಲೂಕು ಘಟಕದ ಆಶ್ರಯದಲ್ಲಿ ಚಟುವಟಿಕೆ ಆಧಾರಿತ ಸಾಹಿತ್ಯ ಪ್ರೇರಣೆ ಕಾರ್ಯಕ್ರ ಶನಿವಾರ ಜರಗಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ, ಪಂಚಾಯತ್ ಸದಸ್ಯೆ ಸುಜಾತ ವೆಂಕಟೇಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *