
ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕ ವಿಮಾದಾರರುಗಳು ಸೇರಿ ಸುಮಾರು 25000 ಕ್ಕೂ ಹೆಚ್ಚಿನ ಅವಲಂಬಿತರು ಸಾಗರ ವಿಧಾನಸಭಾ ಕ್ಷೇತ್ರದ ಸುತ್ತಮುತ್ತಲಿನಲ್ಲಿ ವಾಸಿಸುತ್ತಿದ್ದೂ, ಪ್ರತಿಯೊಂದು ವೈದ್ಯಕೀಯ ಸೌಲಭ್ಯ ಪಡೆಯಲು ಶಿವಮೊಗ್ಗದ ” ಕಾರ್ಮಿಕರ ರಾಜ್ಯ ವಿಮಾ ಚಿಕಿತ್ಸಾಲಯ ” ಕ್ಕೆ ತೆರಳುತ್ತಿರುವುದು ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದೂ, ಇದರಿಂದ ಕಾರ್ಮಿಕ ವಿಮಾದಾರರ ಸಮಯ, ಆರ್ಥಿಕ, ನಷ್ಟವುಂಟಾಗುತ್ತಿರುವುದು ನಗ್ನಸತ್ಯವಾದ ಸಂಗತಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ, ಜನಸ್ನೇಹಿ, ಅಭಿವೃದ್ಧಿ ಹರಿಕಾರ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ರವರು ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಲಾಡ್ ರವರೊಂದಿಗೆ ಚರ್ಚಿಸಿ, ಸಾಗರದಲ್ಲೊಂದು ಬಹು ಕಾಲದ ಸಮಾಜದ ಕಟ್ಟಕಡೆಯ ಕಾರ್ಮಿಕರ ಬೇಡಿಕೆಗಳಲ್ಲಿ ಒಂದಾದ ” ಕಾರ್ಮಿಕರ ರಾಜ್ಯ ವಿಮಾ ಚಿಕಿತ್ಸಾಲಯ ” ವನ್ನೂ ಮಂಜೂರು ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಆಸ0ಖ್ಯಾತ ಕಾರ್ಮಿಕ ವಿಮಾದಾರರುಗಳು & ಅವಲಂಬಿತ ಕುಟುಂಬಗಳು ಮಾನ್ಯ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ರವರಲ್ಲಿ ಮನವಿ ಮಾಡುತ್ತಿದ್ದಾರೆ
✒️ಓಂಕಾರ ಎಸ್. ವಿ. ತಾಳಗುಪ್ಪ

















Leave a Reply