Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರಂಬಳ್ಳಿ ವಲಯ  ಬ್ರಾಹ್ಮಣ  ಸಮಿತಿ -ವಾರ್ಷಿಕೋತ್ಸವ :
ಸಾಧಕರಿಗೆ ಸನ್ಮಾನ

ಕರಂಬಳ್ಳಿ ವಲಯ  ಬ್ರಾಹ್ಮಣ ಸಮಿತಿಯ  18 ನೇ ವಾರ್ಷಿಕೋತ್ಸವವು ಕರಂಬಳ್ಳಿ  ಶ್ರೀ ವೆಂಕಟ್ರಮಣ  ದೇವಸ್ಥಾನದ  ಶ್ರೀನಿವಾಸ  ಸಭಾ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು .ಬೆಳಿಗ್ಗೆ  10 ಗಂಟೆಗೆ  ಶ್ರೀ ದೇವರಿಗೆ ವಿಷ್ಣುಸಹಸ್ರನಾಮಾವಳಿ ಸಹಿತ  ತುಳಸಿ ಅರ್ಚನೆ , ಮಹಾಸಭೆ , ಮಧ್ಯಾಹ್ನ ಬ್ರಾಹ್ಮಣ  ಸುಹಾಸಿನಿ  ಆರಾಧನೆ , ಮಹಿಳೆಯರಿಗೆ   ಹೂ  ಕಟ್ಟುವ  ಸ್ಪರ್ಧೆ , ರಂಗೋಲಿ ಸ್ಪರ್ಧೆ , ಮಕ್ಕಳಿಗೆ  ಚಿತ್ರ  ಬಿಡಿಸುವ  ಸ್ಪರ್ಧೆ , ಗಂಟೆ 3.30 ರಿಂದ  ಸಮಿತಿಯ ಸದಸ್ಯರಿಂದ  ಸಾಂಸ್ಕೃತಿಕ  ಕಾರ್ಯಕ್ರಮ  ನಡೆಯಿತು .

*ಮಹಾಸಭೆಯಲ್ಲಿ ಕೀಳಂಜೆ ಶ್ರೀಕೃಷ್ಣರಾಜ್  ಭಟ್  ಅವರನ್ನು 4 ನೇ ಅವಧಿಗೆ ಸಮಿತಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು .*

ಸಂಜೆ  6.30 ರಿಂದ  ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ನಿಕಟ ಪೂರ್ವ ಶಾಸಕರಾದ ಶ್ರೀ ಕೆ ರಘುಪತಿ  ಭಟ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಪ್ರರಾದ ಶ್ರೀ* ಜಲಂಚಾರು ರಘುಪತಿ ತಂತ್ರಿ (ಅಂಕಣಕಾರರು ಹಾಗೂ ಸಮಾಜ ಚಿಂತಕರು ), ಶ್ರೀ  ಉದಯ ಕುಮಾರ್ ಮಧ್ಯಸ್ತ (ಯಕ್ಷಗಾನ ಕಲಾ ಸೇವಕರು ) ಶ್ರೀಮತಿ ಜಯಾ ತಂತ್ರಿ ಕೆ  (ರಾಷ್ಟ್ರ ಮಟ್ಟದ  ಕ್ರೀಡಾ ಪಟು ) ಶ್ರೀ  ಮುಖ್ಯಪ್ರಾಣ ಉಪಾಧ್ಯಾಯ (ಪಾಕತಜ್ಞ )*
ಇವರುಗಳನ್ನು ಸನ್ಮಾನಿಸಿ ತಮ್ಮ  ಭಾಷಣದಲ್ಲಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಸಾಮಾಜಿಕ ,ಧಾರ್ಮಿಕ , ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ  ವ್ಯಕ್ತ್ತ ಪಡಿಸಿದರು .

ಇದೇ ಸಂದರ್ಭದಲ್ಲಿ ವಿದ್ಯಾನಿಧಿ ಅರ್ಪಣೆ , ವಿವಾಹದ ಸುವರ್ಣ ಮಹೋತ್ಸವ ಆಚರಿಸಿಕೊಂಡ ವಿಪ್ರ ದಂಪತಿಗಳಿಗೆ ಗೌರವಾರ್ಪಣೆ ಹಾಗೂ ವಿಪ್ರ ಗೋಪಾಲಕರಿಗೆ ಸಮ್ಮಾನ ಮಾಡಲಾಯಿತು .

ಮುಖ್ಯ ಅಥಿತಿಗಳಾಗಿ  ಆಗಮಿಸಿದ ಉಡುಪಿ ಸಂಸ್ಕೃತ  ಕಾಲೇಜಿನ ಪ್ರಾಧ್ಯಾಪಕ ಪ್ರೊಫೆಸರ್ ಷಣ್ಮುಖ ಹೆಬ್ಬಾರ್ ಶುಭಾಶಂಸನೆ ಗೈದರು . ಉಡುಪಿ  ಜಿಲ್ಲಾ  ಮಹಾಸಭಾದ  ಅಧ್ಯಕ್ಷ ಸಂದೀಪ್ ಮಂಜ , ಅರ್ಚಕ ದಿವಾಕರ್  ಐತಾಳ್ , ಸಮಿತಿಯ ಉಪಾಧ್ಯಕ್ಷ  ರಂಗನಾಥ ಸಾಮಗ, ಕೋಶಾಧಿಕಾರಿ ಅಜಿತ್ ಬಿಜಾಪುರ್ ಉಪಸ್ಥಿತರಿದ್ದರು .

ಕ್ರೀಡಾ ಕಾರ್ಯದರ್ಶಿ ಶ್ರೀ   ಲಕ್ಷ್ಮೀನಾರಾಯಣ ಆಚಾರ್ಯ ಗುಂಡಿಬೈಲ್, ಚಂದ್ರಕಾಂತ್ ಕೆ ಎನ್ , ಶ್ರೀಪತಿ  ಭಟ್ , ರಂಗನಾಥ ಸರಳಾಯ ,ವೇದವ್ಯಾಸ ಆಚಾರ್ , ಸುಧಾ ಭಟ್ , ಕವಿತಾ  ಆಚಾರ್ , ವಸುಧಾ  ಭಟ್ , ರಾಧಿಕಾ ಭಟ್ ಸಹಕರಿಸಿದರು .

ಕಾರ್ಯದರ್ಶಿ ನಾಗರಾಜ್  ಭಟ್ ಧನ್ಯವಾದ ಸಮರ್ಪಿಸಿದರು . ಪೆರಂಪಳ್ಳಿ ವಾಸುದೇವ ಭಟ್  ಮತ್ತು  ಶ್ರೀನಿವಾಸ  ಬಲ್ಲಾಳ್ ನಿರೂಪಿಸಿದರು . ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಯಶ್ರೀ ಬಾರಿತ್ತಾಯ ಮತ್ತು ಪ್ರಿಯಂವದಾ ನಿರ್ವಹಿಸಿದರು .

Leave a Reply

Your email address will not be published. Required fields are marked *